ಬ್ರೇಕಿಂಗ್ ನ್ಯೂಸ್
11-11-23 11:12 pm Mangalore Correspondent ಕರಾವಳಿ
ಮಂಗಳೂರು, ನ.11: ಸಾರ್ವಜನಿಕ ಕಟ್ಟಡ, ಬಡಾವಣೆ ಇರುವ ನಗರ ಪ್ರದೇಶಗಳಲ್ಲಿ ಅಥವಾ ರಸ್ತೆ ಬದಿಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂಬ ಹೈಕೋರ್ಟ್ ಸೂಚನೆಯಂತೆ ಮಂಗಳೂರಿನಲ್ಲಿ ಪಟಾಕಿ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲೆಂದರಲ್ಲಿ ರಸ್ತೆ ಬದಿ ಪಟಾಕಿ ದಾಸ್ತಾನು ಇಡಬಾರದು ಅನ್ನುವ ನೆಲೆಯಲ್ಲಿ ಮಂಗಳೂರು ನಗರದ ನೆಹರು ಮೈದಾನ ಸೇರಿದಂತೆ ನಾಲ್ಕು ಕಡೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಲಾಗಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ, ಮಹಾನಗರ ಪಾಲಿಕೆಯಿಂದಲೇ ಬಿಡ್ ಕರೆದು ಸ್ಟಾಲ್ ಗಳನ್ನು ಹರಾಜಿನಲ್ಲಿ ಮಾರಾಟಗಾರರಿಗೆ ನೀಡಲಾಗಿದೆ. ಅದರಂತೆ, ನೆಹರು ಮೈದಾನ, ಬೋಂದೆಲ್ ಮೈದಾನ, ಪಚ್ಚನಾಡಿ ಪ್ರದೇಶ ಮತ್ತು ಬೈಕಂಪಾಡಿ ಎಪಿಎಂಸಿ ಕಟ್ಟಡದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಕೊಡಲಾಗಿದೆ. ಎರಡು ದಿನದ ಹಿಂದೆ ಮಹಾನಗರ ಪಾಲಿಕೆಯಿಂದಲೇ ಈ ರೀತಿಯ ಹರಾಜು ಹಾಕಿ, ಸ್ಟಾಲ್ ಹಂಚಿಕೆ ಮಾಡಿದ್ದರೂ, ನಗರದ ಪಿವಿಎಸ್ ವೃತ್ತದ ಬಳಿ ಪಟಾಕಿ ಮಾರಾಟದ ಅಂಗಡಿ ತೆರೆದುಕೊಂಡಿದೆ.

ವೃತ್ತದ ಬಳಿಯಲ್ಲೇ ರಸ್ತೆ ಬದಿಯಲ್ಲಿ ಪಟಾಕಿ ದಾಸ್ತಾನಿರಿಸಿ ಮಾರಾಟ ಮಾಡಲಾಗುತ್ತಿದ್ದು, ಶನಿವಾರ ಸಂಜೆ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದರು. ಅತ್ತ ನೆಹರು ಮೈದಾನ ಇನ್ನಿತರ ಕಡೆಗಳಲ್ಲಿ ಇನ್ನೂ ಸ್ಟಾಲ್ ಹಾಕಿಲ್ಲ. ಶನಿವಾರ ಸಂಜೆಯಷ್ಟೇ ಸ್ಟಾಲ್ ವಿತರಣೆ, ಮಾರ್ಕಿಂಗ್ ಮಾಡಿಕೊಟ್ಟಿದ್ದರಿಂದ ಅಲ್ಲಿ ಮಾರಾಟಗಾರರು ಸ್ಟಾಲ್ ಹಾಕಲು ವಿಳಂಬ ಆಗಿತ್ತು. ರಾತ್ರಿ ವೇಳೆಯೂ ಸ್ಟಾಲ್ ಹಾಕುವ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇತರ ಯಾವುದೇ ಕಡೆ ಪಟಾಕಿ ಲಭ್ಯ ಇರಲಿಲ್ಲ. ಇದೇ ವೇಳೆ, ಬಂದರಿನ ಮಾಯಾ ಟ್ರೇಡರ್ಸ್ ಮತ್ತು ಪಿವಿಎಸ್ ವೃತ್ತದಲ್ಲಿ ಪ್ರವೀಣ್ ಶೇಟ್ ಕ್ರಾಕರ್ಸ್ ಶಾಪ್ ನವರು ಮಾತ್ರ ಪಟಾಕಿ ಅಂಗಡಿ ತೆರೆದಿದ್ದರು. ಪಿವಿಎಸ್ ವೃತ್ತದಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ಪಟಾಕಿ ಮಾರುತ್ತಿದ್ದರೂ, ಅಧಿಕಾರಿಗಳು ಅದಕ್ಕೆ ಮಾತ್ರ ಅವಕಾಶ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.
ನೆಹರು ಮೈದಾನದಲ್ಲಿ ಸ್ಟಾಲ್ ಹಾಕುತ್ತಿದ್ದ ಮಾರಾಟಗಾರರು ಈ ಬಗ್ಗೆ ಆಕ್ಷೇಪ ಎತ್ತಿದ್ದು, ನಾವು ಮಾತ್ರ ಮೈದಾನದಲ್ಲಿ ಮಾರಾಟ ಮಾಡಬೇಕು. ಅವರಿಗೆ ಮಾತ್ರ ರಸ್ತೆ ಬದಿ ಅವಕಾಶ ಕೊಟ್ಟಿದ್ದಾರೆ. ಬಂದರು ಮತ್ತು ಪಿವಿಎಸ್ ವೃತ್ತ ಜನನಿಬಿಡ ಸಾರ್ವಜನಿಕ ಪ್ರದೇಶ ಅಲ್ಲವೇ.. ಇದರ ಹಿಂದೆ ಯಾರಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
Partiality in cracker stall permission by MCC in Mangalore.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm