ಬ್ರೇಕಿಂಗ್ ನ್ಯೂಸ್
13-11-23 01:25 pm Mangalore Correspondent ಕರಾವಳಿ
ಉಳ್ಳಾಲ, ನ.13: ದೇರಳಕಟ್ಟೆಯಲ್ಲಿ ಯು.ಟಿ.ಫರೀದ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಸೌಹಾರ್ದ ಕ್ರೀಡಾಕೂಟದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತನ ಅಭಿಯಾನದ ಅಂಗವಾಗಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಸುಪುತ್ರಿ ಹವ್ವಾ ನಸೀಮ ಅವರು ಕೈ ಪಕ್ಷದ ಸದಸ್ಯತನ ಸೇರ್ಪಡೆಗೆ ಸಹಿ ಮಾಡಿದರು.
ಯು.ಟಿ.ಫರೀದ್ ಫೌಂಡೇಶನ್ ವತಿಯಿಂದ ದೀಪಾವಳಿ ಪ್ರಯುಕ್ತ ಭಾನುವಾರ ದೇರಳಕಟ್ಟೆ ಕಣಚೂರು ಮೈದಾನದಲ್ಲಿ 'ಸೌಹಾರ್ದ ಕ್ರೀಡಾಕೂಟ' ನಡೆಯಿತು. ಕ್ರೀಡಾಕೂಟವನ್ನ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹ್ಮಾನ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಸೌಹಾರ್ದ ವಾತಾವರಣ ನಿರ್ಮಿಸುವಲ್ಲಿ ಕ್ರೀಡಾಕೂಟ ಸಹಕಾರಿ, ದೀಪಾವಳಿ ಹಬ್ಬದ ಸಂದರ್ಭ ಅಯೋಜಿಸಿರುವ ಕ್ರೀಡಾಕೂಟ ನಾಡಿನಾದ್ಯಂತ ಸೌಹಾರ್ದ ಸಂದೇಶ ಪಸರಿಸಲಿ ಎಂದರು.


ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ ಧರ್ಮಗಳ ನಡುವೆ ದ್ವೇಷಕ್ಕೆ ನಾಂದಿಯಾಗುವ ಭಾಷಣದ ಬದಲು ಐಕ್ಯತೆ, ಸಾಮರಸ್ಯ ಬೆಸೆಯುವ ಮಾತುಗಳು ನಾಗರಿಕ ಸಮಾಜಕ್ಕೆ ಅಗತ್ಯವಿದೆ. ಸಮಾಜದ ಎಲ್ಲ ಧರ್ಮೀಯರನ್ನ ಒಗ್ಗೂಡಿಸುವಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ ಎಂದರು. ಈ ವೇಳೆ ಪದವಿ ಶಿಕ್ಷಣ ಪಡೆಯುತ್ತಿರುವ ಸ್ಪೀಕರ್ ಯು.ಟಿ.ಖಾದರ್ ಅವರ ಪುತ್ರಿ ಹವ್ವಾ ನಸೀಮಾ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಸಹಿ ಮಾಡಿದರು.
ದ.ಕ.ಜಿಲ್ಲಾ ಕಾಂಗ್ರೆಸ್ ಸದಸ್ಯ ಸುರೇಶ್ ಭಟ್ನಗರ, ಉಪಾಧ್ಯಕ್ಷ ದಿನೇಶ್ ರೈ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಹಿರಿಯರಾದ ಬಾಬು ಸುವರ್ಣ, ಹರ್ಷರಾಜ್ ಮುದ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
Speaker U T Khader daughter Hawa officially becomes member of congress party at Ullal in Mangalore.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm