ಬ್ರೇಕಿಂಗ್ ನ್ಯೂಸ್
14-11-23 07:42 pm Mangalore Correspondent ಕರಾವಳಿ
ಉಳ್ಳಾಲ, ನ.14: ಸಹೋದ್ಯೋಗಿಗೆ ಹಲ್ಲೆಗೈದು ಹಲ್ಲುಗಳನ್ನ ಉದುರಿಸಿ ಎಸ್ಕೇಪ್ ಆಗಿದ್ದ ಕುಂಪಲದ ಸೈಕೋ ರಿಕ್ಷಾ ಚಾಲಕನನ್ನ ಉಳ್ಳಾಲ ಪೊಲೀಸರು 24 ಗಂಟೆಗಳೊಳಗೆ ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ಆದಿತ್ಯವಾರ ಸಂಜೆ ಕುಂಪಲ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿದ್ದ ರಿಕ್ಷಾ ಚಾಲಕ ಸುಶಾಂತ್(31) ಎಂಬವರಿಗೆ ಅದೇ ಪಾರ್ಕಿನಲ್ಲಿ ರಿಕ್ಷಾ ಚಾಲನೆ ಮಾಡುತ್ತಿರುವ ರೋಕೇಶ್(37) ಯಾನೆ ಸೈಕೋ ರೋಸ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ ಪರಿಣಾಮ ಸುಶಾಂತ್ ಅವರ ಎರಡು ಹಲ್ಲುಗಳು ಉದುರಿ ಹೋಗಿದೆ. ತೀವ್ರ ಗಾಯಗೊಂಡಿದ್ದ ಸುಶಾಂತ್ ರವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು ಹಲ್ಲೆಗೈದ ಆರೋಪಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ರೋಕೇಶ್ ತಲೆಮರೆಸಿಕೊಂಡಿದ್ದ.
ಉಳ್ಳಾಲ ಪೊಲೀಸ್ ಠಾಣೆಯ ಪಿಐ ಬಾಲಕೃಷ್ಣ ರವರು ಸೋಮವಾರವೇ ತನ್ನ ಸಿಬ್ಬಂದಿಗಳೊಂದಿಗೆ ಅತೀ ಶೀಘ್ರವಾಗಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿ ರೋಕೇಶ್ ಯಾನೆ ಸೈಕೊ ರೋಸ್ ಕುಂಪಲ ನಿವಾಸಿಯಾಗಿದ್ದು ಅಮಲು ಪದಾರ್ಥಗಳಿಗೆ ದಾಸನಾಗಿ ಪ್ರದೇಶಕ್ಕೆ ಕಂಟಕಪ್ರಾಯನಾಗಿದ್ದ. ಈತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಈ ಹಿಂದೆಯೂ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸ್ಥಳೀಯ ಹೆಣ್ಮಕ್ಕಳಿಗೆ ಲೈಗಿಂಕ ಕಿರುಕುಳ ನೀಡಿ ಸಾರ್ವಜನಿಕರಿಂದ ಶಾಸ್ತಿ ಮಾಡಿಸಿಕೊಂಡಿದ್ದ. ಆರೋಪಿಯ ಸಹೋದರ ವೃತ್ತಿಪರ ವಕೀಲನಾಗಿದ್ದು ಆತನ ಧೈರ್ಯದಿಂದಲೇ ಸೈಕೋ ರೋಸ್ ನಿರಂತರ ಅಪರಾಧ ಕೃತ್ಯ ಎಸಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ದಿನ ನಿತ್ಯವೂ ನಶೆಯಲ್ಲೇ ರಿಕ್ಷಾ ಚಾಲನೆ ನಡೆಸುತ್ತಿರುವ ರೋಕೇಶನ ನಡವಳಿಕೆಯ ಬಗ್ಗೆ ಬೈಪಾಸಿನ ರಿಕ್ಷಾ ಚಾಲಕರು, ಮಾಲಕರೇ ಒಟ್ಟಾಗಿ ಉಳ್ಳಾಲ ಠಾಣೆಗೆ ಬರವಣಿಗೆಯಲ್ಲಿ ಮಾಹಿತಿ ಕೊಟ್ಟಿದ್ದು ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದರು.
Auto driver assults driver at auto stand at Kumpala in Mangalore, arrested within hours by Ullal Police.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm