ಬ್ರೇಕಿಂಗ್ ನ್ಯೂಸ್
15-11-23 05:50 pm Mangalore Correspondent ಕರಾವಳಿ
ಮಂಗಳೂರು, ನ.15: ಯಡಿಯೂರಪ್ಪರನ್ನು ಕಣ್ಣೀರಾಕಿಸಿ ಮುಖ್ಯಮಂತ್ರಿ ಪದವಿಯಿಂದ ಯಾಕೆ ಇಳಿಸಿದ್ರು ಅಂತ ಬಿಜೆಪಿಯವರಿಗೆ ಇನ್ನೂ ಗೊತ್ತಿಲ್ಲ. ಈಗ ವಿಜಯೇಂದ್ರ ಬಂದಿದ್ದಾರೆ ಅವರೇ ಮಾಹಿತಿ ಕೊಡಬಹುದು. ಬಿಜೆಪಿಯಲ್ಲಿ ಹೊಂದಾಣಿಕೆಯಿಲ್ಲ, ನಾಯಕತ್ವದ ಕೊರತೆಯಿದೆ. ಹೀಗಾಗಿ ವಿಜಯೇಂದ್ರಗೆ ಪಟ್ಟ ಸಿಕ್ಕಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ ಸಚಿವ ಪ್ರಿಯಾಂಕ ಖರ್ಗೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದಿಂದ ಕಾಂಗ್ರೆಸ್ ಮೇಲೆ ಎಫೆಕ್ಟ್ ಆಗುತ್ತಾ ಎಂದು ಮಂಗಳೂರಿನಲ್ಲಿ ಕೇಳಿದ ಪ್ರಶ್ನೆಗೆ, ಇದರಿಂದ ಕಾಂಗ್ರೆಸ್ ಮೇಲೆ ಒಳ್ಳೆ ರೀತಿಯ ಎಫೆಕ್ಟ್ ಆಗುತ್ತೆ. ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಆದ ನಿರ್ಲಕ್ಷ್ಯದಿಂದ ಕಾಂಗ್ರೆಸ್ ಆಡಳಿತಕ್ಕೆ ಬಂದಿಲ್ಲ. ಕಳೆದ ಸರ್ಕಾರದ ಅವಧಿಯ ಭ್ರಷ್ಟಾಚಾರ, ಬೆಲೆಯೇರಿಕೆ ಈ ಎಲ್ಲಾ ಕಾರಣದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಇಷ್ಟಕ್ಕೂ ನಿರ್ಲಕ್ಷ್ಯ ಯಾಕೆ ಮಾಡಿದ್ರು ಅಂತಾ ಅವರೇ ಹೇಳಬೇಕಲ್ವಾ.. ಯಡಿಯೂರಪ್ಪ ಅವರನ್ನು ಕಣ್ಣೀರಾಕಿಸಿ ಇಳಿಸಿದ್ದು ಯಾಕೆಂದು ಅವರೇ ಹೇಳಬೇಕಲ್ವಾ ಎಂದು ಕೇಳಿದರು.


ಸಿ.ಟಿ ರವಿ, ಯತ್ನಾಳ್, ಸುನೀಲ್ ಕುಮಾರ್ ಇವತ್ತು ಗಾಯಬ್ ಆಗಿದ್ದಾರೆ. ವಿಜಯೇಂದ್ರ ಅವರಿಗೆ ನಾವು ಶುಭ ಹಾರೈಸುತ್ತೇವೆ. ಆದ್ರೆ ಬಿಜೆಪಿಯವರೇ ಶುಭ ಹಾರೈಸ್ತಿದ್ದಾರೆಯೇ ಎಂದು ನಾವು ಕೇಳಬೇಕಾಗಿದೆ. ಬಿಜೆಪಿಯವರ ವೀಕ್ ನೆಸ್ ಮೇಲೆ ನಾವು ಸ್ಟ್ರಾಟಜಿ ಮಾಡೋರಲ್ಲ. ಕಾಂಗ್ರೆಸ್ ಯೋಜನೆಗಳು, ಸ್ವಂತ ಶಕ್ತಿಯ ಮೇಲೆ ಓಟು ಕೇಳುತ್ತೇವೆ ಎಂದರು. ಇನ್ನು ಬಿಜೆಪಿಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರನ್ನು ಕಟ್ಕೊಂಡು ನಮಗೇನು ಮಾಡೋಕಿದೆ. ಆರು ತಿಂಗಳಾಗಿದೆ, ಮೇಲ್ಮನೆ, ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನೇ ಇಲ್ಲ. ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಬಜೆಟ್ ಭಾಷಣ ಆದ್ರೂ ನಾಯಕನ ಆಯ್ಕೆಯಾಗಿಲ್ಲ. 15 ದಿನದಲ್ಲಿ ಬೆಳಗಾವಿ ಅಧಿವೇಶನ ಪ್ರಾರಂಭ ಆಗುತ್ತೆ. ವಿರೋಧ ಪಕ್ಷದ ನಾಯಕ ಯಾರು..? ಯಾವುದೇ ಲೀಡರ್ ಬಿಜೆಪಿಯಲ್ಲಿ ಇಲ್ಲ ಎಂದು ಟೀಕಿಸಿದರು.

ಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್ ಹಾಕಿದ್ದು ಕಾಂಗ್ರೆಸ್ ನವರಾ ಎಂಬ ಪ್ರಶ್ನೆಗೆ, ನಮಗೇ ಬೇರೆ ಕೆಲಸ ಇಲ್ವಾ.. ನಾವು ಆಡಳಿತ ನಡೆಸ್ತಾ ಇದ್ದೀವಿ ಸ್ವಾಮಿ. ಹಾಗೇನಾದ್ರೂ ಮಾಡಬೇಕಂದ್ರೆ ಬಹಿರಂಗವಾಗಿ ಮಾಡ್ತೀವಿ. ಪೇ ಸಿಎಂ ಕ್ಯಾಂಪೇನ್ ಮಾಡಿಲ್ವಾ..? ಅದೇನು ರಾತ್ರೋರಾತ್ರಿ ಹಾಕಿದ್ದಾ. ಎದೇ ತಟ್ಟಿ ಮುಂದೆ ಬಂದು ಭ್ರಷ್ಟಾಚಾರ ಮಾಡ್ತಿದ್ದೀರಿ ಎಂದು ಹೇಳಿದ್ದೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡಿಲ್ಲ. ಸಿಬ್ಬಂದಿಯಿಂದ ಕುಮಾರಸ್ವಾಮಿ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆ ಎಂದು ನಂಗೆ ಗೊತ್ತಿಲ್ಲ. ಕಾನೂನಾತ್ಮಕ ಕ್ರಮ ತಗೊಳ್ಳಿ ಎಂದು ಹೇಳಿದ್ದಾರೆ. ಆದ್ರೆ ಕುಮಾರಸ್ವಾಮಿ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ರು. ಎಲ್ಲರನ್ನೂ ಕತ್ತಲಲ್ಲಿ ಇರಿಸ್ತೀರಿ ಎಂದವರು ಕಂಬದಿಂದ ಹೆಚ್ಚು ಬೆಳಕು ತಗೊಳೋದು ಎಷ್ಟು ಸರಿ ಎಂದು ಕೇಳಿದರು.
ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಪ್ರಶ್ನೆಗೆ, ನಮ್ಮ ತತ್ವ ಸಿದ್ದಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್ ಗೆ ಬರಬಹುದು. ಎಂಪಿ ಎಲೆಕ್ಷನ್ ಹತ್ರ ಬರ್ಲಿ ಬಿಜೆಪಿ, ಜೆಡಿಎಸ್ ಮನೆ ಖಾಲಿ ಆಗುತ್ತೆ. ಯಾರು ಅಲ್ಲಿ ರಕ್ಷಣೆ ಕೊಡ್ತಿದ್ದಾರೆ, ಅಲ್ಲಿ ಯಾರೂ ಇಲ್ಲ. ಲೀಡರ್ ಇಲ್ಲ ಅಂತಾನೆ ನಾಯಕತ್ವ ಹುಡುಕಿಕೊಂಡು ಬರ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದರು ಖರ್ಗೆ.
The BJP still does not know why Yediyurappa was removed from the chief minister's post in tears. Now that Vijayendra has come, he can give the information. There is no coordination in the BJP, there is a lack of leadership. Minister Priyank Kharge said vijayendra has been given the post.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm