ಬ್ರೇಕಿಂಗ್ ನ್ಯೂಸ್
15-11-23 10:29 pm Mangalore Correspondent ಕರಾವಳಿ
ಮಂಗಳೂರು, ನ.15: ಕಳೆದ ಹತ್ತು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ವಿಪರೀತ ಅನ್ನುವಷ್ಟು ಅಂತರ್ಜಲ ಕುಸಿತ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಇಸ್ರೋ ತಜ್ಞರನ್ನು ಒಳಗೊಂಡ ತಂಡದಿಂದ ಅಧ್ಯಯನ ಕೈಗೊಳ್ಳಲಾಗುವುದು. ಪಶ್ಚಿಮ ಘಟ್ಟ, ಮಲೆನಾಡು ಭಾಗದಲ್ಲಿ ನೀರು ಹೆಚ್ಚಿದೆ ಅಂದ್ಕೊಂಡಿದ್ದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ನೀರಿನ ಲಭ್ಯತೆ ಕುಸಿತ ಆಗಿರುವುದು ತಿಳಿದುಬಂದಿದೆ. ಈ ಕುರಿತಾಗಿ ದೀರ್ಘ ಕಾಲದ ಅಧ್ಯಯನ ಮತ್ತು ಯೋಜನೆ ಕೈಗೊಳ್ಳಬೇಕಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಆಯೋಜಿಸಿದ್ದ ಪಂಚಾಯತ್ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ನಿಮ್ಮ ಬೇಡಿಕೆಗಳ ಪಟ್ಟಿಯನ್ನು ಗಂಭೀರವಾಗಿ ಪರಿಶೀಲಿಸುತ್ತೇನೆ. ಈಡೇರಿಸಬಲ್ಲ ಬೇಡಿಕೆಯನ್ನು ಕಾರ್ಯಗತ ಮಾಡಲು ಮುತುವರ್ಜಿ ವಹಿಸುತ್ತೇನೆ ಎಂದ ಅವರು, ಸಣ್ಣ ಕೆಲಸದಿಂದಲೂ ಪ್ರಚಾರ ಪಡೆಯುವುದನ್ನು ಮೋದಿಯಿಂದ ಕಲಿಯಬೇಕಿದೆ. ಜಲಜೀವನ್ ಮಿಷನ್ ಬಗ್ಗೆ ಎಲ್ಲ ಪತ್ರಿಕೆ, ಟಿವಿಗಳಲ್ಲಿ ಜಾಹೀರಾತು ಬರುವುದನ್ನು ನೋಡಿರಬಹುದು. ಆದರೆ ಈ ಯೋಜನೆಯಲ್ಲಿ 50 ಶೇಕಡಾ ರಾಜ್ಯ ಪಾಲಿದೆ. ಆಯುಷ್ಮಾನ್ ಭಾರತ್, ಸಬ್ ಅರ್ಬನ್ ರೈಲು ಯೋಜನೆ ಎಲ್ಲದರಲ್ಲೂ ಅರ್ಧ ರಾಜ್ಯ ಪಾಲಿದೆ. ಆದರೆ ನೂರು ಪಾಲು ಪ್ರಚಾರ ತೆಗೆದುಕೊಳ್ಳುತ್ತಿರೋದು ಮೋದಿ ಮಾತ್ರ. ನಾವು ಖರ್ಚು ಮಾಡೋದು ಪ್ರಚಾರ ಆಗಲ್ಲ. ಇದನ್ನು ಕಾರ್ಯಕರ್ತರು, ಪಂಚಾಯತ್ ಮಟ್ಟದ ಪ್ರತಿನಿಧಿಗಳು ಜನರಿಗೆ ತಲುಪಿಸಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆಯಿಂದ ದೇಶಕ್ಕೆ ನಷ್ಟವೆಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಕೊರೊನಾ ಸಂದರ್ಭದಲ್ಲಿ ಬಡವರನ್ನು ಆಧರಿಸಿದ್ದು ಇದೇ ಉದ್ಯೋಗ ಖಾತ್ರಿ ಯೋಜನೆ. ಈಗಾಗಲೇ ರಾಜ್ಯಕ್ಕೆ ನೀಡಿರುವ 13 ಕೋಟಿಯಲ್ಲಿ ಐದು ತಿಂಗಳು ಇರುವಾಗಲೇ 11.6 ಕೋಟಿ ಮುಗಿಸಿದ್ದೇವೆ. ಇದನ್ನು 18 ಕೋಟಿಗೆ ಏರಿಸಬೇಕು ಎಂದರೆ ಕೇಂದ್ರ ಕೇಳೋದಿಲ್ಲ. ಪಂಚಾಯತ್ ಲೆವಲಲ್ಲಿ ಇನ್ನೂ ವೇಜ್ ಕೊಟ್ಟಿದ್ದಾರೆಯೇ, ಅದೂ ಇಲ್ಲ. ನಾವು ಕಳೆದ ಬಾರಿ ನೀಡಿದ್ದ 164 ಭರವಸೆಗಳಲ್ಲಿ 157 ಪೂರೈಸಿದ್ದೇವೆ. ಬಿಜೆಪಿಯವರು 600 ಭರವಸೆಗಳಲ್ಲಿ 56 ಅಷ್ಟೇ ಪೂರೈಸಿದ್ದಾರೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ.
ಗ್ಯಾರಂಟಿ ಲಾಭ ಹೆಚ್ಚು ಪಡೆದಿದ್ದು ಬಿಜೆಪಿ ಮಂದಿ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ದರು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಯ ಹೆಚ್ಚು ಲಾಭ ಪಡೆದವರು ಬಿಜೆಪಿ ಮಂದಿ. ಪ್ರತಿ ತಾಲೂಕಿನಲ್ಲೂ ಬಿಜೆಪಿಯವರೇ ನೋಂದಣಿ ಮಾಡಿದವರಲ್ಲಿ ಹೆಚ್ಚಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಪ್ರತಿ ದಿನ 60 ಲಕ್ಷ ಜನ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದಾಗಿ ದೇವಸ್ಥಾನ, ಅರ್ಚಕರ ತಟ್ಟೆಗೆ ಹೆಚ್ಚು ಹಣ ಬೀಳ್ತಾ ಇದೆ. ಅಂಗಡಿ ವ್ಯಾಪಾರ ಹೆಚ್ಚುತ್ತಿದ್ದು, ಆಮೂಲಕ ಹಣದ ಹರಿವು ವೇಗಗೊಳ್ಳುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ 83 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದು, ತಿಂಗಳಿಗೆ ಎರಡು ಸಾವಿರ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 74 ಲಕ್ಷ ಮಂದಿ ಲಾಭ ಪಡೆದಿದ್ದು, ಅಂದಾಜು ಒಂದು ಮನೆಗೆ ನಾಲ್ಕು ಜನರಂತೆ 3 ಕೋಟಿ ಜನರಿಗೆ ಲಾಭ ಆಗಿದೆ.
ಕುಮಾರಸ್ವಾಮಿಯವರು ಕತ್ತಲೆ ಭಾಗ್ಯ ಅಂತೇಳಿಕೊಂಡು ನಿನ್ನೆ ನೇರವಾಗಿ ಲೈನ್ ಎಳ್ಕೊಂಡಿದ್ದಾರೆ. ಈ ಭಾಗದ ಪರಶುರಾಮ ಪಾರ್ಕ್ ಹೀರೋ ಸುನಿಲ್ ಕುಮಾರ್, ಸಿಟಿ ರವಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿ ರಾಜ್ಯ ದಿವಾಳಿಯಾಗತ್ತೆ ಎಂದಿದ್ದರು. ಕಾಂಗ್ರೆಸ್ ಯೋಜನೆಯಿಂದ ದಿವಾಳಿ ಆಗಲ್ಲ. ನಿಮ್ಮ ಹಗರಣಗಳಿಂದ ರಾಜ್ಯ ದಿವಾಳಿ ಆಗಿರೋದು. ಅನ್ನಭಾಗ್ಯ ಯೋಜನೆಯಲ್ಲಿ 3.5 ಕೋಟಿ ಜನರಿಗೆ ಲಾಭ ಸಿಕ್ಕಿದೆ. ಜನರ ಹಣವನ್ನು ಬಡವರಿಗೆ ಕೊಟ್ಟರೆ ರಾಜ್ಯ ದಿವಾಳಿಯಾಗುತ್ತಾ ಎಂದು ಪ್ರಶ್ನಿಸಿದರು.
ಬಿಜೆಪಿ ಮುಳುಗೋಗಿರೋ ಹಡಗು
ಬಿಜೆಪಿಯಲ್ಲಿ ನಾಯಕರೇ ಇಲ್ಲ. ಮುಳುಗುತ್ತಿರುವ ಹಡಗು ಅಲ್ಲ, ಮುಳುಗೋಗಿರೋ ಹಡಗು. ಅಲ್ಲಿ ನಾಯಕರಿಲ್ಲದೆ ವಿಜಯೇಂದ್ರಗೆ ಪಟ್ಟ ಕಟ್ಟಿದ್ದಾರೆ. ಅವರ ಮೇಲೆ ಲೋಕಾಯುಕ್ತ ಕೇಸ್ ಇದೆ. ಪಿಎಸ್ಐ ಹಗರಣದಲ್ಲಿ ಪಾಲಿದೆ. ಇದು ನನ್ನ ಮಾತಲ್ಲ, ಅವರದೇ ಪಕ್ಷದ ಯತ್ನಾಳ್ ಮಾತು. ವಿಜಯೇಂದ್ರ ಅವರನ್ನು ಅತೀ ಭ್ರಷ್ಟ ಎಂದಿದ್ದು ಯತ್ನಾಳ್. ಇಡೀ ರಾಜ್ಯದಲ್ಲಿ ತಿರುಗಿದರೆ ಒಬ್ಬ ಸರಿಯಾದ ಲೀಡರನ್ನು ತೋರಿಸಿ. ಅಲ್ಲಿ ಸಮರ್ಥ ನಾಯಕರಿಲ್ಲದೆ ಆ ಪಕ್ಷದಿಂದ ಕಾಂಗ್ರೆಸಿನತ್ತ ಬರುತ್ತಿದ್ದಾರೆ. ಇವರ ಡುಪ್ಲಿಕೇಟ್ ಎಲ್ಲವನ್ನು ಜನರು ನಂಬುತ್ತಿಲ್ಲ. ಪರಶುರಾಮ ದೇವರನ್ನೇ ಡುಪ್ಲಿಕೇಟ್ ಮಾಡಿದವರು ಇನ್ನು ನಮ್ಮನ್ನು ಬಿಡುತ್ತಾರೆಯೇ ಎಂದು ಪ್ರಿಯಾಂಕ ಖರ್ಗೆ ಟೀಕಿಸಿದರು. ಸಭೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಎಂಎಲ್ಸಿಗಳಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಅಭಯಚಂದ್ರ ಜೈನ್, ಮಿಥುನ್ ರೈ, ಇನಾಯತ್ ಆಲಿ, ರಕ್ಷಿತ್ ಶಿವರಾಮ್ ಸೇರಿದಂತೆ ಹಲವು ನಾಯಕರು ಇದ್ದರು. ಸಾವಿರಾರು ಮಂದಿ ಕಾರ್ಯಕರ್ತರು, ಪಂಚಾಯತ್ ಪ್ರತಿನಿಧಿಗಳು ಇದ್ದರು.
Calling the BJP a sunken ship in Karnataka, Minister for Rural Development and Panchayat Raj, Information Technology and Biotechnology Priyank Kharge said here on Wednesday, November 15, that the saffron party lacked leadership in the State.
25-05-25 08:48 pm
Bangalore Correspondent
Mysuru Suicide, Lake, Three Dead: ಪ್ರಿಯಕರನ ಜೊ...
24-05-25 07:45 pm
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
25-05-25 04:29 pm
HK News Desk
Mangalore Ship, Container: ಕೊಚ್ಚಿ ಬಳಿಯಲ್ಲಿ ಬೃ...
25-05-25 02:14 pm
Drone Attack, Russia, Brijesh Chowta: ಪಾಕ್ ಭಯ...
23-05-25 08:08 pm
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
25-05-25 10:27 pm
Mangalore Correspondent
MFC Hotel, Arrest, Black Moon Resto Mangalore...
25-05-25 07:57 pm
Mangalore Rain, Flood, Pumpwell: ಪಂಪ್ವೆಲ್ ಹೆ...
25-05-25 04:19 pm
Mangalore CCB, MFC Hotel Owner Siddique Arres...
25-05-25 02:46 pm
ಕೇರಳಕ್ಕೆ ಮುಂಗಾರು ಎಂಟ್ರಿ ; 16 ವರ್ಷಗಳ ಬಳಿಕ ಎಂಟು...
24-05-25 04:29 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm