ಬ್ರೇಕಿಂಗ್ ನ್ಯೂಸ್
16-11-23 05:30 pm Mangalore Correspondent ಕರಾವಳಿ
ಪುತ್ತೂರು, ನ.16: ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತೀರಿ ಎಂಬ ನೆಪವೊಡ್ಡಿ ದಕ್ಷಿಣ ಕನ್ನಡ ಜಿಲ್ಲೆಯ ಐವರು ಬಜರಂಗದಳ ಕಾರ್ಯಕರ್ತರನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕೋಮು ದ್ವೇಷ, ಸಮಾಜದಲ್ಲಿ ಶಾಂತಿ ಹರಡುವ ನೆಪದಲ್ಲಿ ನೋಟೀಸ್ ಜಾರಿ ಮಾಡಿದ್ದು, ಬೇರೆ ಬೇರೆ ಜಿಲ್ಲೆಗಳಿಗೆ ಗಡೀಪಾರು ಮಾಡುವ ಬೆದರಿಕೆ ಹಾಕಿದೆ.
ನೈತಿಕ ಗೂಂಡಾಗಿರಿ, ದನ ಸಾಗಾಟ ನೆಪದಲ್ಲಿ ಹಲ್ಲೆ, ಕೋಮು ದ್ವೇಷ ಹರಡುವ ನೆಪದಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನ ಐವರು ಕಾರ್ಯಕರ್ತರ ಬಗ್ಗೆ ಸ್ಥಳೀಯ ಠಾಣೆಗಳಿಂದ ಮಾಹಿತಿ ಪಡೆದು ನೋಟೀಸ್ ಮಾಡಲಾಗಿದೆ. ಪುತ್ತೂರು ಮತ್ತು ಸುಳ್ಯ ವ್ಯಾಪ್ತಿಯ ಲತೀಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಎಂಬವರಿಗೆ ನೋಟೀಸ್ ಜಾರಿ ಮಾಡಿದ್ದು ನ.22ರಂದು ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚಿಸಲಾಗಿದೆ. ಪ್ರಜ್ವಲ್ ಅವರನ್ನು ಬಾಗಲಕೋಟ, ಲತೀಶ್ ಬಳ್ಳಾರಿಗೆ ಗಡೀಪಾರು ಮಾಡುವುದಾಗಿ ಪೊಲೀಸರು ನೋಟೀಸಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಠಿಣ ಕ್ರಮಕ್ಕೆ ಮುಂದಾಗಿರುವಂತಿದೆ. ಆದರೆ ಹಿಂದು ಸಂಘಟನೆ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿದ್ದು, ಬಜರಂಗದಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಪ್ರಕರಣ ಇದ್ದವರನ್ನೂ ಟಾರ್ಗೆಟ್ ಮಾಡಿ, ರೌಡಿಗಳಂತೆ ತೋರಿಸುತ್ತಿದ್ದಾರೆ. ಇಂತಹ ಕ್ರಮದ ಮೂಲಕ ಸಾಮಾನ್ಯ ಜನರನ್ನೂ ರೌಡಿಗಳಾಗಿಸುವ ಪ್ರಯತ್ನವನ್ನು ಪೊಲೀಸರೇ ಮಾಡುತ್ತಿದ್ದಾರೆ. ಈ ರೀತಿಯ ಧೋರಣೆ ನಿಮ್ಮದಾದಲ್ಲಿ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಒಬ್ಬ ಕೂಲಿ ಕಾರ್ಮಿಕ, ಇನ್ನೊಬ್ಬ ಇಲೆಕ್ಟ್ರಿಶಿಯನ್, ಮತ್ತೊಬ್ಬ ರಿಕ್ಷಾ ಡ್ರೈವರ್ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಸಾಮಾನ್ಯ ವ್ಯಕ್ತಿಗಳನ್ನು ಪೊಲೀಸರು ಟಾರ್ಗೆಟ್ ಮಾಡುತ್ತಿದ್ದಾರೆ. ರೌಡಿಗಳೋ, ಹತ್ತಾರು ಪ್ರಕರಣ ಎದುರಿಸುತ್ತಿರುವವರನ್ನು ಪಟ್ಟಿ ಮಾಡಿ ಗಡೀಪಾರು ಮಾಡಿ. ನಾವು ಬೇಡ ಎನ್ನುವುದಿಲ್ಲ. ಪೊಲೀಸರು ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ನಮ್ಮ ಸಂಘಟನೆಯ ಕಾರ್ಯಕರ್ತರನ್ನು ಗಡೀಪಾರು ಮಾಡಿ, ಸುಳ್ಳು ಕೇಸು ಹಾಕಿ ರೌಡಿ ಶೀಟ್ ತೆರೆಯಲು ಯತ್ನಿಸುತ್ತಿದ್ದಾರೆ. ಇವರ ಮೇಲೆ ಅಂತಹ ಯಾವುದೇ ಗಂಭೀರ ಕೇಸು ಇಲ್ಲ. ದನ ಸಾಗಾಟ ತಡೆದಿದ್ದು, ಹಲ್ಲೆ ಮಾಡಿದ್ದಕ್ಕೆ ಒಂದೊಂದು ಕೇಸ್ ಇದ್ದ ಮಾತ್ರಕ್ಕೆ ಗಡೀಪಾರು ಮಾಡುತ್ತಿದ್ದಾರೆ. ಯಾವುದಾದ್ರೂ ರೌಡಿಸಂ ಕೆಲಸ ಮಾಡಿದ್ದರೆ ತೋರಿಸಿ. ಅದು ಬಿಟ್ಟು ವಿನಾಕಾರಣ ಟಾರ್ಗೆಟ್ ಮಾಡುವುದನ್ನು ನಾವು ಸಹಿಸುವುದಿಲ್ಲ. ಗೃಹ ಇಲಾಖೆಯಿಂದ ಸೂಚನೆ ಬಂದೇ ಈ ರೀತಿಯ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ನಾವು ಪೊಲೀಸರಿಗೆ ಮತ್ತು ಕಾಂಗ್ರೆಸ್ ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆ ಕೊಡುತ್ತೇವೆ. ನೀವು ಇದೇ ರೀತಿ ಮುಂದೆ ಹೋದರೆ, ನಾವು ನಮ್ಮ ಶೈಲಿಯಲ್ಲಿಯೇ ಉತ್ತರ ಕೊಡುತ್ತೇವೆ ಎಂದು ಮುರಳಿಕೃಷ್ಣ ಹೇಳಿದ್ದಾರೆ.
ಸದ್ಯಕ್ಕೆ ಸ್ಥಳೀಯ ಠಾಣೆಗಳಿಂದ ಈ ರೀತಿಯ ಲಿಸ್ಟ್ ತರಿಸಿಕೊಂಡಿದ್ದು ಇವರ ಮೇಲಿನ ಪ್ರಕರಣವನ್ನು ಉಲ್ಲೇಖಿಸಿ ಸಹಾಯಕ ಆಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ. ನ.22ರಂದು ವಕೀಲರ ಮೂಲಕ ನೋಟೀಸಿಗೆ ಸೂಕ್ತ ಉತ್ತರ ನೀಡದಿದ್ದರೆ, ಗಡೀಪಾರು ಮಾಡುವ ಸಾಧ್ಯತೆ ಇದೆ. ಕಳೆದ ಜುಲೈ ತಿಂಗಳಲ್ಲಿ ಮಂಗಳೂರಿನ ಮೂವರು ಬಜರಂಗದಳ ಕಾರ್ಯಕರ್ತರಿಗೆ ಇದೇ ರೀತಿ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿತ್ತು. ಆನಂತರ, ಬಜರಂಗದಳ ಕಡೆಯಿಂದ ನ್ಯಾಯಾಲಯದ ಮೂಲಕ ಗಡೀಪಾರಿಗೆ ತಡೆ ತರಲಾಗಿತ್ತು. ಇದೀಗ ಮತ್ತೆ ಅಂತಹುದೇ ಪ್ರಯೋಗ ನಡೆದಿರುವುದು, ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
Five Bajrang Dal activists issued exile notice by SP Mangalore. Bajrang Dal has slammed the decession of police department says they have been targeted.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am