ಬ್ರೇಕಿಂಗ್ ನ್ಯೂಸ್
16-11-23 09:55 pm Mangalore Correspondent ಕರಾವಳಿ
ಮಂಗಳೂರು, ನ.16: ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲೆಯ ಅಧ್ಯಾಪಕನೇ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಅಲ್ಲದೆ, ಒಟ್ಟು ಘಟನೆಯನ್ನು ಪೊಲೀಸರು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆಂಬ ಆರೋಪವನ್ನೂ ಮಾಡಲಾಗಿದೆ.
ಮಾಜಿ ಪೊಲೀಸ್ ಅಧಿಕಾರಿ, ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟೆಣ್ಣನವರ್ ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ, ಪ್ರಕರಣದ ಬಗ್ಗೆ ವಿವರ ನೀಡಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಗರ್ಭಿಣಿಯಾಗಿರುವ ಶಂಕೆಯಲ್ಲಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆತರಲಾಗಿತ್ತು. ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಪತ್ತೆಯಾದ ಕೂಡಲೇ ವೈದ್ಯರು ಪೊಲೀಸರಿಗೆ ತಿಳಿಸಬೇಕು ಎಂಬ ನೀತಿಯಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿ ಐದು ತಿಂಗಳ ಗರ್ಭಿಣಿಯಾಗಿದ್ದರಿಂದ ಮಹಿಳಾ ಪೊಲೀಸರು ಬಂದು ಹೇಳಿಕೆಯನ್ನು ಪಡೆದಿದ್ದಾರೆ. ಈ ವೇಳೆ, ಆಕೆ ಕಲಿಯುತ್ತಿದ್ದ ವಿದ್ಯಾಸಂಸ್ಥೆಯ ಕ್ರೀಡಾ ಶಿಕ್ಷಕ ರಮೇಶ್ ಎಂಬಾತನಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದಾಗಿ ಹೇಳಿಕೆ ನೀಡಿದ್ದಾಳೆ ಎಂದರು.
ಆಕೆಯೇ ಮಹಿಳಾ ಪೊಲೀಸರ ಸಮ್ಮುಖದಲ್ಲಿ ನೀಡಿರುವ ಹೇಳಿಕೆಯನ್ನು ದೂರೆಂದು ಪರಿಗಣಿಸಿ ಸೂಕ್ತ ಕ್ರಮಕ್ಕಾಗಿ ಧರ್ಮಸ್ಥಳ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ, ಆರೋಪಿ ರಮೇಶ್ ನನ್ನು ನ.11ರಂದು ಧರ್ಮಸ್ಥಳ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಎರಡು ದಿನ ಕಳೆಯುವಷ್ಟರಲ್ಲಿ ಮತ್ತೊಬ್ಬ ಕೇಶವ ಎನ್ನುವಾತನನ್ನು ಆರೋಪಿಯೆಂದು ತೋರಿಸಿದ್ದಾರೆ. ಪೊಲೀಸರು ಕೇಶವನನ್ನು ಆರೋಪಿಯಾಗಿಸಿ ಎಫ್ಐಆರ್ ಮಾಡಿದ್ದಾರೆ, ಆದರೆ ಆರೋಪಿಯೆಂದು ಬಾಲಕಿ ಹೇಳಿದ್ದ ರಮೇಶ್ ಎಂಬಾತನನ್ನು ರಕ್ಷಣೆ ಮಾಡಿದ್ದಾರೆಯೇ ಎಂಬ ಸಂಶಯ ಸ್ಥಳೀಯ ಜನರಲ್ಲಿದೆ.
ಇದಲ್ಲದೆ, ಯೂಟ್ಯೂಬ್ ಚಾನೆಲ್ ಒಂದರಲ್ಲಿ ಪತ್ರಕರ್ತ ಮೋಹನ್ ಬೋಳಂಗಡಿಯವರು ತಾಯಿ ಮತ್ತು ಸಂತ್ರಸ್ತ ಬಾಲಕಿಯನ್ನು ಠಾಣೆಯಲ್ಲಿ ಮಧ್ಯರಾತ್ರಿ ವರೆಗೂ ಕುಳ್ಳಿರಿಸಿ ತನಿಖೆ ನಡೆಸಿದ್ದಾಗಿ ಹೇಳಿದ್ದಾರೆ. ಖುದ್ದು ಎಸ್ಪಿಯವರೇ ತನಿಖೆ ನಡೆಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಹಾಗೊಂದ್ವೇಳೆ ತನಿಖೆ ನಡೆಸಿದ್ದೇ ಆಗಿದ್ದಲ್ಲಿ ಪೋಕ್ಸೋ ಕಾಯ್ದೆ ಉಲ್ಲಂಘನೆಯಾಗುತ್ತದೆ. ಪೋಕ್ಸೋ ಕಾಯ್ದೆಯಡಿ ಸಂತ್ರಸ್ತ ಬಾಲಕಿ, ತಾಯಿಯನ್ನು ಠಾಣೆಗೆ ಕರೆಸುವಂತೆಯೇ ಇಲ್ಲ. ರಹಸ್ಯ ಜಾಗದಲ್ಲಿರಿಸಿ ಹೇಳಿಕೆ ಪಡೆಯಬೇಕು ಇಲ್ಲವೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲು ಮಾಡಬೇಕು. ಪೊಲೀಸರು ಈ ಪ್ರಕರಣದಲ್ಲಿ ಪ್ರಭಾವಿ ಸಂಸ್ಥೆಯವರ ಪ್ರಭಾವಕ್ಕೊಳಗಾಗಿ ಆರೋಪಿಯನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಮಟ್ಟೆಣ್ಣನವರ್ ಆರೋಪಿಸಿದ್ದಾರೆ.
ಪೊಲೀಸರು ತಪ್ಪು ಎಸಗಿದ್ದರೆ ಅವರನ್ನು ಅಮಾನತು ಮಾಡಬೇಕು. ಮಾಧ್ಯಮದ ಮೂಲಕ ತಪ್ಪು ಹೇಳಿಕೆ ನೀಡಿದ್ದರೆ, ಪತ್ರಕರ್ತನ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿರ್ಭಯಾ ಪ್ರಕರಣದ ಬಳಿಕ ಸಂತ್ರಸ್ತೆಯನ್ನು ಅವಹೇಳನ ಮಾಡುವುದು, ಆಕೆಯ ಬಗ್ಗೆ ಚರ್ಚೆ ಮಾಡುವುದು, ಆಕೆಯ ಖಾಸಗಿತನದ ಮಾಹಿತಿ ನೀಡುವುದು ಅಪರಾಧ. ಇಲ್ಲಿ ಗಂಭೀರ ಪ್ರಮಾದಗಳಾಗಿದ್ದು, ನಾವು ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ಕೊಡುತ್ತೇವೆ. ಆರೋಪಿ ಯಾರೇ ಆಗಿರಲಿ, ಯಾಕೆ ರಕ್ಷಣೆ ಮಾಡಬೇಕು. ಸಂತ್ರಸ್ತೆಯ ಹೇಳಿಕೆ ದಾಖಲಿಸಿ, ಅದರಂತೆ ತನಿಖೆ ನಡೆಸುವುದು ಪೊಲೀಸರ ಹೊಣೆ. ಜನಸಾಮಾನ್ಯರಲ್ಲಿ ಈ ಕುರಿತು ವ್ಯಕ್ತವಾಗಿರುವ ಸಂಶಯ ನಿವಾರಣೆ ಮಾಡಬೇಕಿದೆ ಎಂದು ಮಟ್ಟೆಣ್ಣವರ್ ಹೇಳಿದ್ದಾರೆ.
ಸುದ್ದಿಗೋಷ್ಟಿ ನಡುವೆ ಯೂಟ್ಯೂಬ್ ಚಾನೆಲಲ್ಲಿ ಬಂದಿರುವ ತುಣುಕುಗಳನ್ನು ಸ್ಲೈಡ್ ಶೋ ಮೂಲಕ ತೋರಿಸಲಾಯಿತು. ಅಲ್ಲದೆ, ಸಂತ್ರಸ್ತೆ ಬಾಲಕಿ ನೀಡಿರುವ ದೂರು ಹೇಳಿಕೆಯ ಪ್ರತಿಯನ್ನೂ ತೋರಿಸಿದ್ದು, ಅದರಲ್ಲಿ ಸ್ಪಷ್ಟವಾಗಿ ರಮೇಶ್ ಎಂಬಾತನಿಂದ ಕಿರುಕುಳ ಆಗಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ಪ್ರತಿ ಡುಪ್ಲಿಕೇಟ್ ಆಗಿರಬಾರದೇ ಎಂದು ಕೇಳಿದ ಪ್ರಶ್ನೆಗೆ, ಇದನ್ನು ವಿಟ್ಲ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ ಪಡೆಯಲಾಗಿದೆ. ಅದನ್ನು ಕೊನೆಯಲ್ಲಿ ನಮೂದಿಸಿದ್ದು ಮಹಿಳಾ ಅಧಿಕಾರಿಯ ಸಹಿಯೂ ಇದೆ ಎಂದು ತೋರಿಸಿದ್ದಾರೆ. ಈ ರೀತಿ ದೂರು ಕೊಟ್ಟಿದ್ದರೂ, ಧರ್ಮಸ್ಥಳ ಠಾಣೆಗೆ ತಲುಪಿದ ಬಳಿಕ ಎಫ್ಐಆರ್ ಬದಲಾಗಿದ್ದು ಹೇಗೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.
Mangalore PT Teacher rapes 10 STD girl, former police officer Girish Mattnnavar slams police departmemt.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am