Marian Builders Mangalore: ಅಪಾರ್ಟ್ಮೆಂಟ್ ಹೆಸರಲ್ಲಿ ಮೋಸ ; ಮಂಗಳೂರಿನ ಮಾರಿಯನ್ ಇನ್ಫ್ರಾ ಸ್ಟ್ರಕ್ಚರ್ ಸಂಸ್ಥೆಯ ಐವರು ಬಿಲ್ಡರುಗಳಿಗೆ ಮೂರು ವರ್ಷ ಜೈಲು ಶಿಕ್ಷೆ, ತಲಾ ಒಂದು ಲಕ್ಷ ದಂಡ  

18-11-23 10:22 am       Mangalore Correspondent   ಕರಾವಳಿ

ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆಯ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷ ಕಾರಾಗೃಹ ವಾಸದ ಸಜೆ ಮತ್ತು ಒಂದು ಲಕ್ಷ ರೂ. ದಂಡ ನೀಡುವಂತೆ ಆದೇಶಿಸಿದೆ. 

ಮಂಗಳೂರು, ನ.18: ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆಯ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷ ಕಾರಾಗೃಹ ವಾಸದ ಸಜೆ ಮತ್ತು ಒಂದು ಲಕ್ಷ ರೂ. ದಂಡ ನೀಡುವಂತೆ ಆದೇಶಿಸಿದೆ. 

ಮಂಗಳೂರು ನಗರದ ರಾಮ್ ಭವನದಲ್ಲಿ ಕಚೇರಿ ಹೊಂದಿರುವ ನಗರದ ಮಾರಿಯನ್ ಇನ್ಫ್ರಾ ಸ್ಟ್ರಕ್ಚರ್ ಸಂಸ್ಥೆಯ ಪಾಲುದಾರರಾಗಿರುವ ಉಜ್ವಲ್ ಡಿಸೋಜ ಮತ್ತು ನವೀನ್ ಕಾರ್ಡೋಜ ಹಾಗೂ ಅವರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಪಾಲುದಾರಿಕೆ ಹೊಂದಿರುವ ವಿಲಿಯಂ ಸಲ್ದಾನ್ಹ, ಗಾಯತ್ರಿ, ಮತ್ತು ಲೂಸಿ ಸಾಲ್ದಾನ್ಹ ಶಿಕ್ಷೆಗೆ ಒಳಗಾದವರು. 

ಆರೋಪಿಗಳು 2013ರಲ್ಲಿ ಮಂಗಳೂರಿನ ಗುಜ್ಜರಕೆರೆ ಎಂಬಲ್ಲಿ ಬಹುಮಹಡಿ ಅಪಾರ್ಟ್ಮೆಂಟ್ ಕಟ್ಟಡ ಕಟ್ಟಿ ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಮಂಗಳೂರಿನ ಡಾ.ಲವೀನಾ ಅವರು ಸದರಿ ಆರೋಪಿಗಳನ್ನು ಭೇಟಿ ಮಾಡಿ ಒಂದು ಫ್ಲಾಟ್ ಅನ್ನು ಕಾರ್ ಪಾರ್ಕಿಂಗ್ ಸಹಿತ ರೂಪಾಯಿ 40 ಲಕ್ಷಕ್ಕೆ ಖರೀದಿಸಲು ಒಪ್ಪಂದ ಮಾಡಿ ಹಣ ನೀಡಿದ್ದರು. ಹಣ ಪಡೆದ ಬಳಿಕ ಮಾರಾಟ ಪತ್ರವನ್ನು ಲವೀನಾ ಇವರಿಗೆ ಬರೆದು ಕೊಟ್ಟಿದ್ದರು. ಆದರೆ ಮಾರಾಟ ಪತ್ರದಲ್ಲಿ ತಿಳಿಸಿರುವಂತೆ ಆರೋಪಿಗಳು ಕಾರು ಪಾರ್ಕಿಂಗ್ ಸೌಲಭ್ಯ ನೀಡಿರಲಿಲ್ಲ. ಆರೋಪಿಗಳನ್ನು ಭೇಟಿ ಮಾಡಿ  ಕಾರು ಪಾರ್ಕಿಂಗ್ ಒದಗಿಸುವತೆ ವಿನಂತಿಸಿದಾಗ, ಆರೋಪಿಗಳು ನಿರಾಕರಿಸಿದ್ದರು. ಆ ಕಾರಣದಿಂದ ಲವೀನಾ ನೋಟಿಸ್ ನೀಡಿದರೂ ಆರೋಪಿಗಳು ಬಗ್ಗಲಿಲ್ಲ. 

ಕೊನೆಗೆ ಲವೀನಾ ಅವರು 2014ರಲ್ಲಿ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿ ಆರೋಪಿಗಳು ತನ್ನಿಂದ ಹಣ ಪಡೆದ ಹೊರತಾಗಿಯೂ ತನಗೆ ಫ್ಲಾಟ್ ನಲ್ಲಿ ಕಾರ್ ಪಾರ್ಕಿಂಗ್ ಒದಗಿಸಿಲ್ಲ ಮತ್ತು ಕಾರು ಪಾರ್ಕಿಂಗ್ ಒದಗಿಸುವಂತೆ ನಿರ್ದೇಶನ ನೀಡುವಂತೆ ದೂರು ಸಲ್ಲಿಸಿದರು.

ಗ್ರಾಹಕ ನ್ಯಾಯಾಲಯ ಲವೀನಾ ದೂರನ್ನು ವಿಚಾರಣೆಗೆ ತೆಗೆದುಕೊಂಡು ದಿನಾಂಕ 24-06-2017 ರಲ್ಲಿ ಅಂತಿಮ ತೀರ್ಪನ್ನು ಪ್ರಕಟಿಸಿ ಆರೋಪಿಗಳು ಸೇವಾ ನ್ಯೂನ್ಯತೆ ಮಾಡಿದ್ದಾರೆ, ಅವರು ದೂರುದಾರರಿಗೆ ಕಾರ್ ಪಾರ್ಕಿಂಗ್ ಮತ್ತು 50,000/ ಪರಿಹಾರ ಹಾಗೂ 1,0000 ರೂ. ಪ್ರಕರಣದ ಖರ್ಚನ್ನು ನೀಡುವಂತೆ ಆದೇಶಿತ್ತು. 

ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ನ್ಯಾಯಾಲಯ ಆರೋಪಿಗಳ ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು.

ಇದರ ಹೊರತಾಗಿಯೂ ಆರೋಪಿಗಳು ದೂರುದಾರರಿಗೆ ಪಾರ್ಕಿಂಗ್ ಸೌಲಭ್ಯ ಕೊಡಲಿಲ್ಲ. ಹೀಗಾಗಿ ದೂರುದಾರರು ಮರಳಿ ಗ್ರಾಹಕ ನ್ಯಾಯಾಲಯಕ್ಕೆ ಸೆಪ್ಟೆಂಬರ್ 2022 ಕ್ಕೆ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕಾರಣ ಗ್ರಾಹಕ ರಕ್ಷಣಾ ಕಾಯ್ದೆ 2019 ರ ಅನ್ವಯ ಮೂರು ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸುವಂತೆ ವಿನಂತಿಸಿದ್ದರು.

ದೂರುದಾರರ ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯ ಆರೋಪಿಗಳು ತನ್ನ ಆದೇಶ ಪಾಲನೆ ಮಾಡಿಲ್ಲ ಎಂದು ಮನಗಂಡು ಆರೋಪಿಗಳಿಗೆ ಮೂರು ವರ್ಷ ಕಾರಾಗೃಹ ಸಜೆ ಮತ್ತು ತಲಾ ಒಂದು ಲಕ್ಷದಂತೆ ದಂಡ ಪಾವತಿಸುವಂತೆ ಆದೇಶ ಮಾಡಿದೆ.

Five builders of Marian Builders and projects Mangalore get three years jail term over cheating  over car parking. Director Ujwal Dsouza, Managing Director Naveen Cardoza, William Saldanha, Gayathri and Lucy Saldanha have been punished by the court with fine of 1 lakh each.