ಬ್ರೇಕಿಂಗ್ ನ್ಯೂಸ್
18-11-23 09:58 pm Mangalore Correspondent ಕರಾವಳಿ
ಮಂಗಳೂರು, ನ.18: ನನಗೆ ಈಗಲೂ ಐದು ಕೇಜಿ ಭಾರ ಎತ್ತಲು ಆಗುತ್ತಿಲ್ಲ. ಸುದೀರ್ಘ 46 ವರ್ಷಗಳಿಂದ ಕೊರಗಜ್ಜನ ಸೇವೆ ಮಾಡಿಕೊಂಡು ಬಂದಿದ್ದೆ. ಆ ಕೆಲಸವನ್ನೂ ಮಾಡಲು ಆಗುತ್ತಿಲ್ಲ. 80 ದಿನ ಐಸಿಯುನಲ್ಲಿ ಸಹಿತ ನೂರು ದಿನ ಆಸ್ಪತ್ರೆಯಲ್ಲಿದ್ದೆ. ಈಗಲೂ ದಿನವೂ ಮೂರ್ನಾಲ್ಕು ಟ್ಯಾಬ್ಲೆಟ್ ತಗೊಳ್ತಿದ್ದೇನೆ. ಸರಕಾರದ ಕಡೆಯಿಂದ ಪರಿಹಾರ ಕೊಡುತ್ತೇವೆ ಎಂದಿದ್ದರೂ, ಈವರೆಗೂ ನನ್ನ ಕೈ ಸೇರಿಲ್ಲ ಎಂದು ಕುಕ್ಕರ್ ಬಾಂಬ್ ಪ್ರಕರಣದ ಸಂತ್ರಸ್ತ ಪುರುಷೋತ್ತಮ ಪೂಜಾರಿ ಅಲವತ್ತುಕೊಂಡಿದ್ದಾರೆ.
ಈಗ ನನಗೆ 61 ವರ್ಷ. ಆಟೋ ಓಡಿಸ್ಕೊಂಡು ಜೀವನ ಮಾಡ್ತಿದ್ದೆ. ಈಗ ಆಟೋ ಓಡಿಸಲು ಆಗುತ್ತಿಲ್ಲ. ನಡೆದುಕೊಂಡು ಹೋಗುವುದೇ ಕಷ್ಟವಾಗಿದೆ. ಶಾಸಕ ವೇದವ್ಯಾಸ ಕಾಮತ್ ಹೊಸ ಆಟೋ ತೆಗೆಸಿಕೊಟ್ಟಿದ್ದಾರೆ. ಅದನ್ನು ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದು ಒಂದಿಷ್ಟು ಹಣ ಬರ್ತಾ ಇದೆ. ಬೆಳದಿಂಗಳು ಫೌಂಡೇಶನ್ನವರು ಮನೆಯನ್ನು ರಿಪೇರಿ ಮಾಡಿಕೊಟ್ಟಿದ್ದಾರೆ. ಬಾಂಬ್ ಸ್ಫೋಟ ಸಂದರ್ಭದಲ್ಲಿ ಮಗಳ ಮದುವೆಗೆ ತಯಾರಿ ಮಾಡುತ್ತಿದ್ದೆ. ಆನಂತರ, ಮದುವೆ ಕಾರ್ಯ ವಿಳಂಬವಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಮೇಲೆ ಮದುವೆ ಕಾರ್ಯ ಮಾಡಿಸಿದ್ದೆವು.
ನನಗೆ 15 ವರ್ಷ ಆದಾಗಿನಿಂದಲೂ ದಿನವೂ ಕೊರಗಜ್ಜನಿಗೆ ಸೇವೆ ಮಾಡಿಕೊಂಡು ಬಂದಿದ್ದೇನೆ. ಈಗ ಆರತಿ ಎತ್ತಲು ಆಗುತ್ತಿಲ್ಲ. ಬೇರೆಯವರ ಸಹಾಯ ಬೇಕಾಗುತ್ತದೆ. ಕೊರಗಜ್ಜನೇ ನನ್ನ ಜೀವ ಉಳಿಸಿರೋದು. ಇಲ್ಲದಿದ್ದರೆ ಉಳಿಯುತ್ತಿರಲಿಲ್ಲ. ಈಗಲೂ ಕೊರಗಜ್ಜನ ಸಾನ್ನಿಧ್ಯಕ್ಕೆ ಹೋಗುತ್ತೇನೆ. ಇನ್ನೊಂದು ವರ್ಷ ಬೇಕಾದೀತು ಸುಧಾರಣೆ ಆಗೋದಿಕ್ಕೆ ಎಂದು ಪುರುಷೋತ್ತಮ ಪೂಜಾರಿ ಹೇಳಿದ್ದಾರೆ.
2022ರ ನವೆಂಬರ್ 19ರಂದು ಕುಕ್ಕರ್ ಬಾಂಬ್ ಸ್ಫೋಟಗೊಂಡು ಘಟನೆ ನಡೆದಿತ್ತು. ಇದೇ ನವೆಂಬರ್ 19ಕ್ಕೆ ಒಂದು ವರ್ಷ ಆಗುತ್ತಿದ್ದು, ಸಂತ್ರಸ್ತ ಪುರುಷೋತ್ತಮ ಪೂಜಾರಿ ಸ್ಫೋಟ ಘಟನೆಯನ್ನು ಸ್ಮರಿಸಿದ್ದಾರೆ. ನಾಗುರಿಯಿಂದ ಆಟೋ ರಿಕ್ಷಾ ಹತ್ತಿದ್ದ ಮೊಹಮ್ಮದ್ ಶಾರೀಕ್ ಪ್ರಯಾಣಿಸುತ್ತಿದ್ದಾಗಲೇ ಕಪಿತಾನಿಯೋ ಶಾಲೆಯ ಬಳಿ ಸ್ಫೋಟವಾಗಿತ್ತು. ಆನಂತರ, ಕುಕ್ಕರ್ ಬಾಂಬನ್ನು ಕದ್ರಿ ದೇವಸ್ಥಾನಕ್ಕೆ ಇಡಲು ಒಯ್ಯುತ್ತಿದ್ದ ಅನ್ನುವುದು ತಿಳಿದುಬಂತು. ಇತ್ತೀಚೆಗೆ ಎನ್ಐಎ ಅಧಿಕಾರಿಗಳು ಆತನನ್ನು ಕರೆದುಕೊಂಡು ಬಂದು ನನ್ನ ವಿಚಾರಣೆ ನಡೆಸಿದ್ದರು. ಆತನಿಗೂ ಆರೋಗ್ಯ ಸರಿಯಾಗಿ ಸುಧಾರಣೆ ಆಗಿರಲಿಲ್ಲ. ದೇವರೇ ಆತನಿಗೆ ಶಿಕ್ಷೆ ಕೊಡಬೇಕಷ್ಟೆ ಎಂದು ಪೂಜಾರಿ ಹೇಳಿದರು.
ಮಗಳ ಇಎಸ್ಐ ಸೌಲಭ್ಯದಿಂದ ಪುರುಷೋತ್ತಮ ಪೂಜಾರಿ ಆಸ್ಪತ್ರೆ ಖರ್ಚು ಭರಿಸಲಾಗಿತ್ತು. ಆನಂತರ, ಆಸ್ಪತ್ರೆ ವೆಚ್ಚವನ್ನು ಸರಕಾರದಿಂದ ತೆಗೆಸಿಕೊಡಲಾಗುವುದು ಆಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು. ಎಡಿಜಿಪಿ ಅಲೋಕ್ ಕುಮಾರ್ ಕೂಡ, ಭಯೋತ್ಪಾದಕ ಕೃತ್ಯ ಆಗಿರುವುದರಿಂದ ಸಂತ್ರಸ್ತನಿಗೆ ನಿಶ್ಚಿತ ಪರಿಹಾರ ಸಿಗುತ್ತೆ ಎಂದಿದ್ದರು. ಆದರೆ, ದಾನಿಗಳು ನೆರವಾಗಿದ್ದು ಬಿಟ್ಟರೆ ಸರಕಾರದಿಂದ ಪರಿಹಾರ ಎನ್ನುವುದು ಸಿಗದೇ ಇರುವ ನೋವು ಅವರಲ್ಲಿದೆ.
“I have suffered for 100 days, including 80 days in the ICU of hospital. Even now I take three tablets every day. I am not able to drive my auto-rickshaw. I cannot lift even five kilos of weight. I am unable to do service of Koragajja, which I was doing for 46 long years. The compensation promised by the government has also not reached me,” said auto-rickshaw driver Purushotham Poojary, who was seriously injured in the cooker bomb blast that occurred on November 19, 2022 at Nagori in the city.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 01:32 pm
Mangalore Correspondent
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm