ಬ್ರೇಕಿಂಗ್ ನ್ಯೂಸ್
20-11-23 03:48 pm Mangalore Correspondent ಕರಾವಳಿ
ಉಳ್ಳಾಲ, ನ.20: ಉಳ್ಳಾಲ ಕೋಟೆಪುರದ ಯುನೈಟೆಡ್ ಮೆರೈನ್ ಪ್ರಾಡಕ್ಟ್ಸ್ ಹೆಸರಿನ ಫಿಶ್ ಮೀಲ್ ಉತ್ಪನ್ನ ತಯಾರಿಕಾ ಕಾರ್ಖಾನೆಯು ಜನವಸತಿ ಪ್ರದೇಶದಲ್ಲಿ ಕಲ್ಲಿದ್ದಲನ್ನ ಬಳಸುವ ಪರಿಣಾಮ ಅದರಿಂದ ಉತ್ಪತ್ತಿಗೊಳ್ಳುವ ಹಾರುವ ಬೂದಿ ಉಳ್ಳಾಲ ನಗರವಾಸಿಗಳ ಹೊಟ್ಟೆ ಸೇರಿ ಮಾರಣಾಂತಿಕ ಕಾಯಿಲೆಗಳು ಉಲ್ಬಣಿಸಿದ್ದು ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿಯನ್ನ ಬಂದ್ ಮಾಡಿಸದಿದ್ದರೆ ಉಳ್ಳಾಲ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಎಚ್ಚರಿಸಿದ್ದಾರೆ.
ಕೋಟೆಪುರದ ಕಲ್ಲಿದ್ದಲು ಆಧಾರಿತ ಯುನೈಟೆಡ್ ಮರೈನ್ ಪ್ರಾಡಕ್ಟ್ಸ್ ಫಿಶ್ ಮೀಲ್ ಕಾರ್ಖಾನೆಯನ್ನು ಬಂದ್ ಮಾಡಿಸಲು ಒತ್ತಾಯಿಸಿ ಉಳ್ಳಾಲ ಕೋಡಿ ಡಿವೈಎಫ್ ಐ ಘಟಕದ ವತಿಯಿಂದ ಸೋಮವಾರ ಉಳ್ಳಾಲ ಕೋಟೆಪುರದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪರಿಸರ ಮಲಿನಗೊಳಿಸುವ ಕೈಗಾರಿಕೆಗಳಿಗೆ ಅನುಮತಿ ಕೊಟ್ಟ ಅಧಿಕಾರಿಗಳೇ ಭ್ರಷ್ಟರು, ಕಾರ್ಖಾನೆ ಮಾಲೀಕರ ಪರ ಬ್ಯಾಟಿಂಗ್ ನಡೆಸುವ ಪರಿಸರ ನಿಯಂತ್ರಣ ಮಾಲಿನ್ಯ ಮಂಡಳಿ ಅಧಿಕಾರಿಗಳು ಈ ಪರಿಸರದಲ್ಲಿ ಎರಡು ದಿವಸವಾದರೂ ವಾಸ ಮಾಡಬೇಕು. ಕಲ್ಲಿದ್ದಲಿನ ಹಾರುಬೂದಿಯು ಪರಿಸರವನ್ನ ವ್ಯಾಪಿಸಿದ ಪರಿಣಾಮ ಸ್ಥಳೀಯರು ಶ್ವಾಸಕೋಶ ಸಮಸ್ಯೆ ಮತ್ತು ಕ್ಯಾನ್ಸರ್ ಬಾಧಿತರಾಗಿದ್ದು, ವಯಸ್ಕರು ಕೆಮ್ಮುವಿನಿಂದ ಬಳಲುತ್ತಿದ್ದಾರೆ. ಕೋಡಿ ಕೋಟೆಪುರ ಜನರನ್ನು ಆರೋಗ್ಯ ಇಲಾಖಾಧಿಕಾರಿಗಳು ತಪಾಸಣೆ ನಡೆಸಿದರೆ ನಿಜ ವಿಚಾರ ಬಹಿರಂಗವಾಗಲಿದೆ ಎಂದರು.
ಕೈಗಾರಿಕೋದ್ಯಮಿಗಳಿಗೆ ಸುರಕ್ಷತಾ ಕ್ರಮಕ್ಕೆ ದೊಡ್ಡ ವೆಚ್ಚ ತಗಲುವುದು ಎಂದು ಸಬೂಬು ನೀಡುವ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಕಂಪೆನಿ ಮಾಲೀಕರ ಪರ ಇದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಇತರ ಫಿಶ್ ಮೀಲ್ ಕಂಪನಿಗಳೂ ಪೈಪ್ ಗಳನ್ನ ಅಳವಡಿಸಿ ರಾಸಾಯನಿಕ ತ್ಯಾಜ್ಯಗಳನ್ನ ಸಮುದ್ರಕ್ಕೆ ಬಿಡುತ್ತಿದ್ದು ಇದರಿಂದ ಜಲಚರಗಳ ಮಾರಣಹೋಮ ನಡೆಯುತ್ತಿದೆ. ಅಲ್ಲದೆ ಈ ಫ್ಯಾಕ್ಟರಿಗಳು ಸ್ಥಳೀಯರಿಗೆ ಉದ್ಯೋಗವನ್ನೂ ನೀಡದೆ ವಂಚಿಸಿದೆ. ಫಿಶ್ ಮೀಲ್ ಕಾರ್ಖಾನೆ ಮಾಲೀಕರು ನಾವು ಸ್ಥಳೀಯ ಮಸೀದಿಗಳಿಗೆ ಡೊನೇಷನ್ ನೀಡುತ್ತೇವೆಂದು ಬೋಂಗು ಬಿಡುತ್ತಿದ್ದಾರೆ. ಅಸಲಿಗೆ ಇವರು ಸ್ಥಳೀಯರಿಗೆ ಮಾರಕ ರೋಗಗಳನ್ನೇ ಡೊನೇಟ್ ಮಾಡುತ್ತಿರುವುದು ವಾಸ್ತವ ಸತ್ಯ.
ಕಲ್ಲಿದ್ದಲು ಬಳಸೋ ಯುನೈಟೆಡ್ ಕಂಪನಿಯನ್ನ ಮುಚ್ಚಿಸದಿದ್ದರೆ ಸ್ಥಳೀಯ ನಗರಸಭೆಗೆ ಮುತ್ತಿಗೆ ಹಾಕುತ್ತೇವೆ, ನಂತರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಕಚೇರಿಯೆದುರು ಧರಣಿ ಕೈಗೊಳ್ಳುತ್ತೇವೆ. ಅಗತ್ಯ ಬಿದ್ದರೆ ವಿಧಾನ ಸೌಧಕ್ಕೂ ಕಾಲ್ನಡಿಗೆ ಜಾಥ ನಡೆಸುತ್ತೇವೆ ಎಂದು ಇಮ್ತಿಯಾಝ್ ಎಚ್ಚರಿಸಿದರು.
ಡಿವೈಎಫ್ ಐ ಮುಖಂಡರಾದ ಮನೋಜ್ ವಾಮಂಜೂರ್, ರಝಾಕ್ ಮೊಂಟೆಪದವು, ಅಶ್ರಫ್ ಹರೇಕಳ ಮೊದಲಾದವರು ಇದ್ದರು.
Mangalore Ullal Marine Products fish mill pollution cases illness to Residents, DYFI protest at factory.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm