Fake WhatsApp ID, Udupi, Dr K VidyaKumari IAS: ಉಡುಪಿ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಪ್ ಐಡಿ, ಹಣ ಕೇಳಿದರೆ ಪೊಲೀಸರಿಗೆ ದೂರು ಕೊಡಿ ಎಂದ ಅಧಿಕಾರಿ 

20-11-23 04:25 pm       Udupi Correspondent   ಕರಾವಳಿ

ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೆಸರಿನಲ್ಲಿ ನಕಲಿ ವಾಟ್ಸಪ್ ಅಕೌಂಟ್ ಸೃಷ್ಟಿಸಿ ಹಣಕ್ಕಾಗಿ ಮೆಸೇಜ್ ಗಳನ್ನು ಕಳುಹಿಸುತ್ತಿರುವ ಬಗ್ಗೆ ವರದಿಯಾಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಯವರು ಈ ರೀತಿಯ ಮೆಸೇಜ್ ಬಂದರೆ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ತಿಳಿಸಿದ್ದಾರೆ. 

ಉಡುಪಿ, ನ.20: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೆಸರಿನಲ್ಲಿ ನಕಲಿ ವಾಟ್ಸಪ್ ಅಕೌಂಟ್ ಸೃಷ್ಟಿಸಿ ಹಣಕ್ಕಾಗಿ ಮೆಸೇಜ್ ಗಳನ್ನು ಕಳುಹಿಸುತ್ತಿರುವ ಬಗ್ಗೆ ವರದಿಯಾಗಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಯವರು ಈ ರೀತಿಯ ಮೆಸೇಜ್ ಬಂದರೆ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ತಿಳಿಸಿದ್ದಾರೆ. 

एक क्लिक से आपको लग सकती है लाखों की चपत, WhatsApp पर आने वाले इन लिंक से  रहें सावधान - WhatsApp scam alert be secure with this cyber attacks, know  how to

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ನಕಲಿ ಖಾತೆಗಳನ್ನು ಸೃಜಿಸಿ ಹಣ ಕೇಳುತ್ತಿರುವ ಘಟನೆಗಳು ನಡೆಯುತ್ತಿದೆ. Dr K VidyaKumari IAS, DC ಎಂದು Whatsapp ನಲ್ಲಿ ನಕಲಿ ಖಾತೆಯನ್ನು ಸೃಜಿಸಿ ಸಂದೇಶಗಳನ್ನು ಕಳುಹಿಸುತ್ತಿರುವುದು ಹಾಗೂ ಹಣ ಕೇಳುತ್ತಿರುವ ವಿಚಾರವು ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಣ ಕೇಳುವ ಸಂದೇಶಗಳು ಸ್ವೀಕೃತವಾದಲ್ಲಿ ಅದಕ್ಕೆ ಸ್ಪಂದಿಸದೇ ಕೂಡಲೇ ಅಗತ್ಯ ಮಾಹಿತಿಯೊಂದಿಗೆ ಸ್ಥಳೀಯ ಠಾಣಾಧಿಕಾರಿಯವರಿಗೆ ದೂರು ನೀಡುವಂತೆ ಕೋರಿದ್ದಾರೆ.‌

Udupi Deputy Commissioner Vidyakumari has been reported to have created a fake WhatsApp account in the name of Vidyakumari and sent messages for money.