ಬ್ರೇಕಿಂಗ್ ನ್ಯೂಸ್
20-11-23 10:01 pm Mangalore Correspondent ಕರಾವಳಿ
ಮಂಗಳೂರು, ನ.20: ತಾನು ಮಾಡದ ತಪ್ಪಿಗೆ ದೂರದ ಸೌದಿ ಅರೇಬಿಯಾದಲ್ಲಿ 11 ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದ. ಯಾರೋ ಮಾಡಿದ ತಪ್ಪಿಗೆ ಆ ಯುವಕ ಬಲಿಪಶುವಾಗಿದ್ದ. ವಿದೇಶಾಂಗ ಇಲಾಖೆ ಸೇರಿದಂತೆ ಎಲ್ಲರ ಪ್ರಯತ್ನದ ಬಳಿಕ ಕಡಬ ಮೂಲದ ಯುವಕ ಮರಳಿ ತಾಯ್ನಾಡು ಸೇರಿದ್ದಾನೆ. ಮಂಗಳೂರು ವಿಮಾನ ನಿಲ್ದಾಣದಿಂದ ಹೊರಬರುತ್ತಲೇ ತಾಯಿ ತನ್ನ ಮಗನನ್ನು ಅಪ್ಪಿ ಹಿಡಿದು ದುಃಖ ಮತ್ತು ಆನಂದ ಎರಡನ್ನೂ ಹರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಚಂದ್ರಶೇಖರ್ ಸೌದಿಯಲ್ಲಿ ಜೈಲು ಪಾಲಾಗಿ ಕಡೆಗೂ ಜೈಲು ಕುಣಿಕೆಯಿಂದ ಪಾರಾಗಿ ಬಂದಿದ್ದಾರೆ. ಅಲ್ಫನಾರ್ ಸಿರಾಮಿಕ್ಸ್ ಎನ್ನುವ ಕಂಪನಿಯಲ್ಲಿ ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಚಂದ್ರು ಅವರಿಗೆ ಭಡ್ತಿ ಸಿಕ್ಕಿದ್ದರಿಂದ ಒಂದು ವರ್ಷದ ಹಿಂದೆ ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕಿತ್ತು. ಅಲ್ಲಿಗೆ ತೆರಳಿ ಕೆಲವು ತಿಂಗಳಲ್ಲೇ ಊರಿಗೆ ಮರಳಬೇಕು ಎನ್ನುವಷ್ಟರಲ್ಲಿ ಚಂದ್ರು ಮೊಬೈಲ್ ಸಿಮ್ ಖರೀದಿಗೆ ತೆರಳಿದ್ದರು. ಸಿಮ್ ಖರೀದಿಗಾಗಿ ಕೈ ಬೆರಳಚ್ಚು ನೀಡಿದ್ದ ಅವರು ಸಿಮ್ ಪಡೆಯಲಿದ್ದ ಪ್ರಕ್ರಿಯೆಯನ್ನೂ ಪೂರೈಸಿದ್ದರು. ಮೊಬೈಲಿಗೆ ಬಂದಿದ್ದ ಸಂದೇಶ ಪ್ರಕಾರ, ಓಟಿಪಿಯನ್ನೂ ನೀಡಿದ್ದರು.
ಆದರೆ ವಾರದ ನಂತರ, ರಿಯಾದ್ ಪೊಲೀಸರು ನೇರವಾಗಿ ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಮಹಿಳೆಯೊಬ್ಬರು ತನ್ನ ಖಾತೆಯಿಂದ ಚಂದ್ರು ಖಾತೆಗೆ 22 ಸಾವಿರ ರಿಯಾಲ್ ಹಣ ಹೋಗಿರುವುದಾಗಿ ದೂರು ನೀಡಿದ್ದರು. ಪೊಲೀಸರ ತನಿಖೆಯಲ್ಲಿ ತನ್ನಲ್ಲಿ ಒಂದೇ ಬ್ಯಾಂಕ್ ಖಾತೆ ಇರೋದು, ಅದರಿಂದ ಹಣ ಹೋಗಿಲ್ಲ ಎಂದರೂ ಕೇಳಲಿಲ್ಲ. ಚಂದ್ರು ಹೆಸರಲ್ಲಿಯೇ ನಕಲಿ ಬ್ಯಾಂಕ್ ಖಾತೆ ತೆರೆದಿದ್ದ ಹ್ಯಾಕರ್ಸ್, ಆ ಖಾತೆಗೆ ಮಹಿಳೆಯ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದರು. ಆನಂತರ, ನಕಲಿ ಖಾತೆಯಿಂದಲೇ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಆಗಿತ್ತು. ಯಾರೋ ಹ್ಯಾಕ್ ಮಾಡಿ ಈ ರೀತಿಯಾಗಿದೆ ಎಂದು ಮನವರಿಕೆ ಮಾಡಿದರೂ, ಪೊಲೀಸರು ಕೇಳದೆ ಚಂದ್ರುವನ್ನು ನೇರವಾಗಿ ಜೈಲಿಗೆ ತಳ್ಳಿದ್ದರು.
ಆನಂತರ, ಚಂದ್ರು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರತಿನಿಧಿಗಳು ಮತ್ತು ಇತರ ಗೆಳೆಯರು ಸೇರಿ ಸೌದಿ ಕೋರ್ಟಿಗೆ ಮನವರಿಕೆ ಮಾಡಿದರು. ಅಲ್ಲದೆ, ದಂಡ ಕಟ್ಟಲು ಮತ್ತು ಮಹಿಳೆಯ ಹಣವನ್ನು ತೀರಿಸುವುದಕ್ಕೂ ಮುಂದಾಗಿದ್ದರು. ಕೊನೆಗೆ, ಹತ್ತು ಲಕ್ಷ ರೂಪಾಯಿಯಷ್ಟು ಹಣ ಕೊಡುವುದಕ್ಕೆ ಬಂದಿದ್ದು, ಎಲ್ಲವನ್ನೂ ಮಂಗಳೂರು ಮೂಲದ ಗೆಳೆಯರು ಪೂರೈಸಿದ್ದಾರೆ. ಆಮೂಲಕ ಸೌದಿ ಕೋರ್ಟಿನಲ್ಲಿ ಬಿಡುಗಡೆಯಾಗಿ ಬಂದ ಚಂದ್ರಶೇಖರ್ ನನ್ನು ರಿಯಾದ್ ಪೊಲೀಸರು ನೇರವಾಗಿ ಭಾರತಕ್ಕೆ ಕಳಿಸಿಕೊಟ್ಟಿದ್ದಾರೆ. ರಿಯಾದ್ ನಿಂದ ನೇರವಾಗಿ ಮುಂಬೈಗೆ ಬಂದು ಸೋಮವಾರ ಸಂಜೆ ಅಲ್ಲಿಂದ ಮಂಗಳೂರಿಗೆ ರಾತ್ರಿ 7.45ರ ವೇಳೆಗೆ ತಲುಪಿದ್ದಾರೆ. ಅಷ್ಟರಲ್ಲಿ ತಾಯಿ ಹೇಮಾವತಿ, ಅಣ್ಣ ಹರೀಶ್, ಈತನ ಬಿಡುಗಡೆಗಾಗಿ ಪ್ರಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀಧರ ಗೌಡ ಕೊಕ್ಕಡ ಸೇರಿದಂತೆ ಹಲವರು ಇದ್ದರು. ಚಂದ್ರು ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಸ್ವಾಗತಿಸಿದರು.
ಕೋಟಿ ಕೋಟಿ ಅಭಿನಂದನೆ ಎಂದ ಚಂದ್ರು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಂದ್ರಶೇಖರ್, ನನ್ನ ಬಿಡುಗಡೆಗಾಗಿ ಹಲವರು ಪ್ರಯತ್ನ ಮಾಡಿದ್ದಾರೆ. ಎಲ್ಲರಿಗೂ ಕೋಟಿ ಕೋಟಿ ಅಭಿನಂದನೆ ಹೇಳುತ್ತೇನೆ. ಎಲ್ಲರಿಗೂ ಆಭಾರಿಯಾಗಿದ್ದೇನೆ. ಜೈಲಿನಲ್ಲಿದ್ದರೂ ಕಂಪನಿ ಪ್ರತಿನಿಧಿಗಳು, ಮಂಗಳೂರು ಮೂಲದ ಹಲವರು ಸಹಾಯ ಮಾಡಿದ್ದಾರೆ. ಜೈಲಿನಲ್ಲಿದ್ದಾಗ ಮನೆಯವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಇದರಿಂದ ತುಂಬ ದುಃಖಿತನಾಗಿದ್ದೆ. ಮೊಬೈಲ್ ಕೊಟ್ಟರೂ ಎರಡು ನಿಮಿಷ ಮಾತ್ರ ಬಳಕೆಗೆ ಅವಕಾಶ ಇತ್ತು. ಜೈಲಿನಲ್ಲಿ ಪೊಲೀಸರು ನನಗೆ ಯಾವುದೇ ತೊಂದರೆ ಮಾಡಿಲ್ಲ. ಮರಳಿ ಬರಲು ಕಾರಣವಾದ ಎಲ್ಲರಿಗೂ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ದೀರ್ಘ ಕಾಲ ಜೈಲಿನಲ್ಲಿದ್ದರಿಂದಲೋ ಏನೋ, ಚಂದ್ರಶೇಖರ್ ಆರಂಭದಲ್ಲಿ ಮಾತನಾಡುವುದಕ್ಕೂ ತೊದಲಿದರು. ಅರಬ್ಬರ ಊರಿನಲ್ಲಿ ಮೌನದಲ್ಲೇ ಇದ್ದವರು ನೇರವಾಗಿ ವಿಮಾನದಲ್ಲಿ ಬಂದು ತಾಯಿ ನೆಲದಲ್ಲಿಯೇ ಬಾಯಿ ತೆರೆದಂತಿತ್ತು. ತಾಯಿ ಹೇಮಾವತಿ, ಅಣ್ಣ ಹರೀಶ್ ಮುಖದಲ್ಲಿ ಅಳುವೇ ಆವರಿಸಿತ್ತು. ಕಣ್ಣೀರು ಹಾಕುತ್ತಾ ಮನೆ ಮಗನನ್ನು ಅಪ್ಪಿ ಹಿಡಿದು ಆಲಿಂಗಿಸಿದರು. ಕಂಪನಿ ಕೆಲಸವೆಂದು ಹೋಗಿದ್ದ ಮಗನಿಗೆ ಹೀಗಾಯಿತಲ್ಲ ಎಂದು ತಾಯಿ ಕಣ್ಣೀರು ಹಾಕಿದರು.
Kadaba youth released from Saudi prison, arrives at Mangalore Airport. Chandrashekhar, a youth from Kadaba who was jailed in Riyadh for 11 months on charges of cheating after he fell victim to bank account hackers, has been released.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am