ಬ್ರೇಕಿಂಗ್ ನ್ಯೂಸ್
21-11-23 06:59 pm Mangalore Correspondent ಕರಾವಳಿ
ಮಂಗಳೂರು, ನ.20: ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಸತತ ಆರನೇ ಬಾರಿಗೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದವರು ನಮ್ಮ ಕರಾವಳಿ ಮೂಲದ ಕುವರಿ ಅಂದರೆ ಹೆಚ್ಚಿನ ಜನ ನಂಬಲಿಕ್ಕಿಲ್ಲ. ಮಂಗಳೂರಿನ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೋ ಎಂಬ ಯುವತಿ ಕ್ರಿಕೆಟ್ ಆಸ್ಟೇಲಿಯಾ ತಂಡದ ಮ್ಯಾನೇಜರ್ ಆಗಿದ್ದು ಭಾರತ ವಿರುದ್ಧ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
34 ವರ್ಷದ ಊರ್ಮಿಳಾ ಮಂಗಳೂರು ಸಮೀಪದ ಕಿನ್ನಿಗೋಳಿ ಮೂಲದ ಐವಿ ಮತ್ತು ವ್ಯಾಲೆಂಟೈನ್ ರೊಸಾರಿಯೋ ದಂಪತಿಯ ಪುತ್ರಿ. ಇವರು ಹಿಂದೆ ಕತಾರ್ ನಲ್ಲಿದ್ದು ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು ಸಕಲೇಶಪುರದಲ್ಲಿ ನೆಲೆಸಿದ್ದಾರೆ. ಊರ್ಮಿಳಾ ರೊಸಾರಿಯೋ ಕತಾರ್ ನಲ್ಲೇ ಹುಟ್ಟಿ ಬೆಳೆದಿದ್ದವರು. ಆಸ್ಟ್ರೇಲಿಯಾದ ಕಾರ್ನೆಗಿ ಮೆಲನ್ ವಿಶ್ವವಿದ್ಯಾನಿಲಯದಿಂದ ಬಿಬಿಎ ಪದವಿ ಪಡೆದಿದ್ದಾರೆ. ಬಾಲ್ಯದಿಂದಲೂ ಕ್ರೀಡಾ ಪಟುವಾಗಿದ್ದ ಊರ್ಮಿಳಾ ಕತಾರ್ ಟೆನಿಸ್ ಫೆಡರೇಶನ್‌ನೊಂದಿಗೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಳು.
ಬಳಿಕ ಆಸ್ಟ್ರೇಲಿಯಾದಲ್ಲಿ ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಮೂರು ವರ್ಷ ಕೆಲಸ ಮಾಡಿದ್ದರು. ನಂತರ, ಅವರು ತಂಡದ ಮ್ಯಾನೇಜರ್ ಆಗಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಯೋಜನೆಗೊಂಡಿದ್ದರು. ಕಳೆದ ಫುಟ್ಬಾಲ್ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್‌ನಿಂದ ರಜೆ ಪಡೆದು ಕತಾರ್ ಗೆ ಹೋಗಿ ನಾಲ್ಕು ತಿಂಗಳ ಕಾಲ ಅಲ್ಲಿ ಫುಟ್‌ಬಾಲ್ ವಿಶ್ವಕಪ್ ಕ್ರೀಡಾಂಗಣದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಕತಾರ್‌ನಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ್ದ ಊರ್ಮಿಳಾ ಅವರಿಗೆ ವಿಶ್ವಕಪ್ ಟೂರ್ನಮೆಂಟಿಗೆ ರೆಡಿಯಾಗುತ್ತಿದ್ದ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡದ ಹೊಣೆಯನ್ನು ಅವರಿಗೆ ನೀಡಲಾಗಿತ್ತು.
ಊರ್ಮಿಳಾ ರೊಸಾರಿಯೋ ಮಹಿಳಾ ತಂಡವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಮತ್ತೆ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿಯೇ ಸೇರಿಕೊಳ್ಳಲಿದ್ದಾರೆ. ತಂದೆ ವ್ಯಾಲೆಂಟೈನ್ ಹೇಳುವ ಪ್ರಕಾರ, ಆಕೆ ಕ್ರಿಕೆಟ್ ಹತ್ತಿರವಾಗಿದ್ದೇ ಅಚಾನಕ್ ಅಂತೆ. ಟೆನಿಸ್, ಬಾಸ್ಕೆಟ್‌ಬಾಲ್, ರೋಯಿಂಗ್, ಜಂಪಿಂಗ್ ಇತ್ಯಾದಿ ಕ್ರೀಡೆಯಲ್ಲಿ ನಿರತರಾಗಿದ್ದ ಊರ್ಮಿಳಾ ಈಗ ಕ್ರಿಕೆಟ್ ತಂಡದ ಮ್ಯಾನೇಜರ್ ಆಗುತ್ತಾಳೆಂದು ನಾವೂ ಊಹಿಸಿರಲಿಲ್ಲ ಎಂದಿದ್ದಾರೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲಿ ನಡೆದಿದ್ದರಿಂದ ಮತ್ತು ಸ್ಥಳೀಯ ಭಾಷೆಯ ಅರಿವಿನ ಕಾರಣದಿಂದ ಊರ್ಮಿಳಾ ಅವರನ್ನು ಮ್ಯಾನೇಜರ್ ಆಗಿ ಆಯ್ಕೆ ಮಾಡಿರಬಹುದು ಎಂದು ಅವರ ತಾಯಿ ಐವಿ ಹೇಳಿದ್ದಾರೆ. ಊರ್ಮಿಳಾ ಹಿಂದಿ, ಕನ್ನಡ ಮತ್ತು ಕೊಂಕಣಿಯನ್ನು ಚೆನ್ನಾಗಿ ಮಾತನಾಡುತ್ತಾರಂತೆ. ಕ್ರಿಕೆಟ್ ತಂಡದ ಊಟ, ವಸತಿ, ಪ್ರಯಾಣ ಇತ್ಯಾದಿ ಕೆಲಸವನ್ನು ಊರ್ಮಿಳಾ ನೋಡಿಕೊಳ್ಳುತ್ತಾರೆ. ಅವರ ಕೈಕೆಳಗೆ ಹಲವರಿದ್ದಾರೆ ಎಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆಕೆ ಭಾರತೀಯ ಪಾಸ್‌ಪೋರ್ಟ್ ಅಷ್ಟೇ ಇದ್ದಾಗಲೂ ಮಹಿಳಾ ತಂಡದ ಜವಾಬ್ದಾರಿ ನೀಡಿದ್ದರು. ಅದೇ ಹುದ್ದೆಯಲ್ಲಿ ಆಕೆಯನ್ನು ಮುಂದಯವರಿಸುವ ಸಾಧ್ಯತೆಯಿದೆ ಎಂದು ಊರ್ಮಿಳಾ ತಂದೆ ವ್ಯಾಲೆಂಟೈನ್ ತಿಳಿಸಿದ್ದಾರೆ. ಐವಿ ದಂಪತಿ ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದು ಕಳೆದ ಮಾರ್ಚ್ ತಿಂಗಳಲ್ಲಿ ಮಗಳು ಕೂಡ ಎಸ್ಟೇಟಿಗೆ ಬಂದು ಕೆಲಸದಲ್ಲಿ ತೊಡಗಿದ್ದರಂತೆ. ಇವರಿಗೆ ಫೈನಲ್ ಮ್ಯಾಚ್ ನೋಡಬೇಕೆಂಬ ಬಯಕೆ ಇತ್ತು. ಆದರೆ ಗುಜರಾತ್ ಹೋಗಲು ಸಾಧ್ಯವಾಗಲಿಲ್ಲ. ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ತಂಡದ ಮ್ಯಾಚ್ ನೋಡಲು ಹೋಗಿದ್ದರಂತೆ.
Urmila Rosario from Mangalore manager to Australia cricket team that lifted 2023 ODI World Cup. Urmila Rosario, the team manager of the Australian cricket team, who shares close links with the coastal city. Urmila, 34, is the daughter of Ivy and Valentine Rosario, who hail from Kinnigoli near Mangaluru. She was born in Doha, Qatar, when her parents were working there.
16-10-25 09:04 pm
Bangalore Correspondent
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
ರಾಜ್ಯದಲ್ಲಿ 800 ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾ...
15-10-25 10:59 pm
ದೀಪಾವಳಿಗೆ ಹೆಚ್ಚುವರಿ ರೈಲು ; ಮಂಗಳೂರು- ಬೆಂಗಳೂರು,...
15-10-25 03:35 pm
16-10-25 10:52 pm
HK News Desk
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
16-10-25 10:37 pm
Mangalore Correspondent
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
Pumpwell Kankandy Road close: ಪಂಪ್ವೆಲ್ - ಕಂಕ...
15-10-25 05:36 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm