ಬ್ರೇಕಿಂಗ್ ನ್ಯೂಸ್
28-11-23 07:35 pm Mangalore Correspondent ಕರಾವಳಿ
ಮಂಗಳೂರು, ನ.28: ಶಿಕ್ಷಕರ ಕ್ಷೇತ್ರದಿಂದ ಗೆದ್ದಿರುವ ಭೋಜೇಗೌಡ ಆರು ವರ್ಷಗಳಲ್ಲಿ ಏನು ಮಾಡಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದನೆ ಮಾಡಿದ್ದಾರೆಯೇ.. ಚುನಾವಣೆ ಬಂದಾಗ ಅವರಿಗೆ ಕುಡಿಸಿ ಪಾರ್ಟಿ ಮಾಡಿಸುತ್ತಿದ್ದಾರೆ. ಸಮ್ಮೇಳನ ಮಾಡುತ್ತಿದ್ದಾರೆ. ಇವರಿಗೆ ಚುನಾವಣೆ ಬಂದಾಗ ಮಾತ್ರ ಶಿಕ್ಷಕರು ನೆನಪಾಗೋದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಭೋಜೇಗೌಡರು ಏನಾದರೂ ಸಾಧನೆ ಮಾಡಿದ್ದರೆ ಅಥವಾ ಶಿಕ್ಷಕರ ಸಮಸ್ಯೆಯನ್ನು ಒಂದಾದ್ರೂ ಪರಿಹರಿಸಿದ್ದರೆ ಶ್ವೇತ ಪತ್ರ ಹೊರಡಿಸಲಿ. ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಈವರೆಗೆ ಶಿಕ್ಷಕರು ಗೆಲ್ಲಿಸಿಲ್ಲ. ಆದರೆ ಕಾಂಗ್ರೆಸ್ ಮಾತ್ರ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದು ಅನ್ನೋದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಸಿದ್ದರಾಮಯ್ಯ ಸರಕಾರ ಇದ್ದಾಗ ಆರನೇ ವೇತನ ಆಯೋಗದ ಶಿಫಾರಸು ಆಧರಿಸಿ ಶಿಕ್ಷಕರ ವೇತನವನ್ನು 30 ಪರ್ಸೆಂಟ್ ಏರಿಸಲಾಗಿತ್ತು. ನಾವು 22 ಪರ್ಸೆಂಟ್ ಕೇಳಿದ್ದರೆ, ಸಿದ್ದರಾಮಯ್ಯ ಅವರು 30 ಶೇಕಡಾ ಏರಿಸಿದ್ದರು.
ಬಿಜೆಪಿ- ಜೆಡಿಎಸ್ ಸರಕಾರ ರದ್ದುಗೊಳಿಸಿದ್ದ ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ನಾವು ಜಾರಿಗೊಳಿಸುತ್ತೇವೆ. ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವೆ. ಶಿಕ್ಷಕರು ನಿವೃತ್ತಿ ಕಾಲದಲ್ಲಿ ಪಿಂಚಣಿ ಮೊತ್ತ ಇದೆಯೆಂದು ನೆಮ್ಮದಿಯಲ್ಲಿ ಇರುತ್ತಾರೆ. ಆದರೆ ಪಿಂಚಣಿ ರದ್ದುಪಡಿಸಿ ಅವರ ನೆಮ್ಮದಿ ಕೆಡಿಸಿದ್ದಾರೆ. ಶಿಕ್ಷಕರು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನಾವು ನಿಮಗೆ ಈ ಕೆಲಸ ಮಾಡಿಸುವ ಭರವಸೆ ನೀಡುತ್ತೇವೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯ ಸರಕಾರ ದಿವಾಳಿಯಾಗುತ್ತೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರದ ಅವಧಿಯ ಆರ್ಥಿಕತೆ ಬಗ್ಗೆ ನಾವು ಶ್ವೇತಪತ್ರ ಹೊರಡಿಸುತ್ತೇವೆ. 2018ರಲ್ಲಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟ ಸಂದರ್ಭದಲ್ಲಿ ರಾಜ್ಯದ ಸಾಲ 2.5 ಲಕ್ಷ ಕೋಟಿ ಇತ್ತು. 2023ರಲ್ಲಿ ಬಿಜೆಪಿ ಸರಕಾರ ಅವಧಿ ಮುಗಿಸಿದಾಗ ಸಾಲ ದುಪ್ಪಟ್ಟು ಆಗಿದ್ದು, 5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ರಾಜ್ಯವನ್ನು ದಿವಾಳಿ ಮಾಡಿಸಿದ್ದು ಯಾರು ಅನ್ನೋದು ಇಲ್ಲಿ ಗೊತ್ತಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಅಂಗನವಾಡಿ ಶಿಕ್ಷಕರ ಪ್ರತಿಭಟನೆ, ಸಮಸ್ಯೆ ಆಲಿಸದ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಅಂಗನವಾಡಿ ಶಿಕ್ಷಕರ ಸಮಸ್ಯೆಯನ್ನೂ ಬಗೆಹರಿಸ್ತೇವೆ. ಅವರಿಗೆ ಜನವರಿ ವರೆಗೆ ಸಮಯ ಕೇಳಿದ್ದೇವೆ. ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಐದು ಗ್ಯಾರಂಟಿ ಯೋಜನೆಯನ್ನೂ ಕೊಟ್ಟಿದ್ದೇವೆ. ಬಿಜೆಪಿಯವರು ಏನು ಕೊಟ್ಟಿದ್ದಾರೆ ಜನರಿಗೆ. ಆದರೆ ಸಾಲವನ್ನು ಮಾತ್ರ ಕೇವಲ ಐದು ವರ್ಷದಲ್ಲಿ ದುಪ್ಪಟ್ಟು ಮಾಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರಕಾರದ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಎಲ್ಲ ಹಗರಣದ ಬಗ್ಗೆಯೂ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದೇವೆ. ಬಿಟ್ ಕಾಯಿನ್, ಪಿಎಸ್ಐ ಹಗರಣ, ನಲ್ವತ್ತು ಪರ್ಸೆಂಟ್ ಹಗರಣ ಎಲ್ಲವನ್ನೂ ತನಿಖೆ ಮಾಡುತ್ತಿದ್ದು ಈಗಾಗಲೇ ಯಾರೆಲ್ಲ ಆರೋಪಿಗಳಿದ್ದಾರೆ ಅವರಿಗೆ ನೋಟಿಸ್ ಕೊಡಲಾಗಿದೆ. ಡಿಸೆಂಬರ್ ವೇಳೆಗೆ ತನಿಖೆ ತಾರ್ಕಿಕ ಅಂತ್ಯಕ್ಕೆ ಬರಲಿದೆ, ನಿಮ್ಮ ಮುಂದಿಡುತ್ತೇವೆ. ಈಗ ತನಿಖಾ ಹಂತದಲ್ಲಿ ಅದರ ಬಗ್ಗೆ ಹೇಳುವುದು ಸರಿಯಾಗಲ್ಲ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕೆಕೆ ಮಂಜುನಾಥ್, ಜೆಆರ್ ಲೋಬೊ, ಇಬ್ರಾಹಿಂ ಕೋಡಿಜಾಲ್, ಲುಕ್ಮಾನ್ ಬಂಟ್ವಾಳ, ಪ್ರವೀಣಚಂದ್ರ ಆಳ್ವ ಮತ್ತಿತರರಿದ್ದರು.
Laxman Savadi slams S. L. Bhojegowda in Mangalore.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 02:20 pm
Mangalore Correspondent
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm