ಬ್ರೇಕಿಂಗ್ ನ್ಯೂಸ್
28-11-23 10:39 pm Mangalore Correspondent ಕರಾವಳಿ
ಮಂಗಳೂರು, ನ.28: ಛಾಯಾಚಿತ್ರಗಳ ಮೂಲಕ ಇತಿಹಾಸವನ್ನು ಕಟ್ಟಿಕೊಡುವ ಅಪೂರ್ವ ಕೆಲಸವನ್ನು ಮಾಡಲು ಸಾಧ್ಯವಿದೆ. ಇಂತಹ ಪರಿಶ್ರಮ ಸಾರ್ವಕಾಲಿಕ ದಾಖಲೆಯಾಗಿ ಉಳಿಯಲಿದೆ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಹೇಳಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ರೋಶನಿ ನಿಲಯ ಕಾಲೇಜು ಆಶ್ರಯದಲ್ಲಿ ನಡೆದ 'ಛಾಯಾಲೋಕ' ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಯಾವತ್ತೂ ಇತಿಹಾಸ ಪ್ರಜ್ಞೆ ಮರೆಯಬಾರದು. ಇತಿಹಾಸ ಮರೆತರೆ ನಾವು ದೇಶ, ಪರಂಪರೆ, ಸಂಸ್ಕೃತಿ ಎಲ್ಲದರ ಸ್ಫೂರ್ತಿಯನ್ನೇ ಮರೆತಂತೆ. ನಮ್ಮ ದೇಶದಲ್ಲಿ ಅಸಂಖ್ಯಾತ ಕೋಟೆ ಕೊತ್ತಲಗಳಿವೆ. ನಾವು ಚೀನಾದ ಗೋಡೆಯನ್ನು ಮಹಾನ್ ಗೋಡೆ ಎನ್ನುತ್ತೇವೆ. ಆದರೆ ನಮ್ಮಲ್ಲಿ ಅದನ್ನು ಮೀರಿಸುವ ಕೋಟೆಗಳಿವೆ, ಮಹಾನ್ ಗೋಡೆಗಳೂ ಇವೆ. ನಾವು ಅದನ್ನು ಮರೆಯುತ್ತಿದ್ದೇವೆ. ನಾವು ಇದೇ ಕೋಟೆಗಳನ್ನು ಐತಿಹಾಸಿಕ ಪ್ರವಾಸಿ ಕೇಂದ್ರವಾಗಿ ಮಾಡಿದರೆ, ದೇಶಕ್ಕೆ ಬೇರಾವುದೇ ಆದಾಯ ಬೇಕಾಗಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರ ಸಾಧನೆ ಅನನ್ಯವಾದುದು. ಅವರು ಕಟ್ಟಿಕೊಟ್ಟ ಚಿತ್ರಗಳೇ ಮುಂದಿನ ತಲೆಮಾರಿಗೆ ಬೆಲೆ ಕಟ್ಟಲಾಗದ ದೊಡ್ಡ ಕೊಡುಗೆ. ಈ ಪುಸ್ತಕ ನೋಡಿದರೆ ಇಡೀ ರಾಜ್ಯ ಸುತ್ತಿದಂತೆ ಆಗುತ್ತದೆ. ಮುಂದೆ ಇದನ್ನೇ ಕೋಟಿ ರೂಪಾಯಿಗೆ ಕೊಳ್ಳುವ ದಿನವೂ ಬರಬಹುದು ಎಂದು ತುಕಾರಾಂ ಪೂಜಾರಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಇರ್ವತ್ತೂರು ಅವರು ಮಾತನಾಡಿ, ಪತ್ರಕರ್ತನ ವೃತ್ತಿ ಇಂದು ಮಾರ್ಕೆಟಿಂಗ್ ಆಗಿದೆ, ಪತ್ರಿಕಾ ವೃತ್ತಿಯಾಗಿ ಉಳಿದಿಲ್ಲ. ಪತ್ರಕರ್ತ ಜನರಿಗಾಗಿ ಜನರ ಜೊತೆಗಿರುವಾತ. ಈಗಿನ ಕಾಲದಲ್ಲಿ ಅಂತಹ ಸ್ಥಿತಿ ಇದೆಯೇ ಎಂದು ಕೇಳಿಕೊಳ್ಳಬೇಕಾಗಿದೆ. ಹಾಗಾಗಿ ಪತ್ರಿಕೋದ್ಯಮ ಕಲಿಯುವವರು ಏಂಕರ್, ದೊಡ್ಡ ಹುದ್ದೆಯ ಮೇಲೆ ಕಣ್ಣಿಟ್ಟು ಬರುವುದು ಸರಿಯಲ್ಲ. ಭಾಷೆಯ ಹಿಡಿತ, ಜನರ ಮೇಲಿನ ಕಾಳಜಿ ಇಟ್ಟುಕೊಂಡಿರಬೇಕು ಎಂದರು. ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಅವರ ಕರ್ನಾಟಕದ ಕೋಟೆಗಳು ಹಾಗೂ ಪಕ್ಷಿಗಳ ಸಮಗ್ರ ಛಾಯಾಚಿತ್ರ ಕೃತಿ ಒಬ್ಬ ಸೃಜನಶೀಲ ಹಾಗೂ ಸೂಕ್ಷ್ಮ ಪ್ರಜ್ಞೆಯ ಪ್ರತೀಕವಾಗಿದೆ. ಇದೊಂದು ಅತ್ಯುತ್ತಮ ದಾಖಲೀಕರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ ಹಾಗೂ ಜಿನೇಶ್ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾವು ದೇಶ- ವಿದೇಶದಲ್ಲಿ ತೆಗೆದ ಛಾಯಾಚಿತ್ರಗಳನ್ನು ಡಿಜಿಟಲ್ ಪರದೆಯಲ್ಲಿ ಪ್ರದರ್ಶನ ಮಾಡಿದ್ದಲ್ಲದೆ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಯುವ ವಕೀಲ ನವನೀತ್ ಬಿ.ಹಿಂಗ್ಹಾಣಿ ಪೊಟೋಗ್ರಾಪಿ ಮತ್ತು ಕಾಪಿರೈಟ್ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಹಾಗೂ ಪಕ್ಷಿ ವೀಕ್ಷಕಿ ವೈಭವಿ ಜಿ. ಅವರು ಕರ್ನಾಟಕದ ಪಕ್ಷಿಗಳ ಕೃತಿ ಬಗ್ಗೆ ಮಾತನಾಡಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹಾಗೂ ರೋಶನಿ ನಿಲಯದ ಕುಲಸಚಿವೆ ಪ್ರೊ.ವಿನುತಾ ರೈ ಉಪಸ್ಥಿತರಿದ್ದರು. ವಿವಿಧ ಕಾಲೇಜಿನ ಇತಿಹಾಸ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ಸ್ವಾಗತಿಸಿದರು. ಸುಳ್ಯ ತಾಲೂಕು ಅಧ್ಯಕ್ಷ ಈಶ್ವರ್ ವಾರಾಣಾಸಿ ವಂದಿಸಿದರು.
Photo journalist Tukaram Poojary felicitated by Karnataka journalist union in Mangalore.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am