ಬ್ರೇಕಿಂಗ್ ನ್ಯೂಸ್
29-11-23 10:54 pm Mangalore Correspondent ಕರಾವಳಿ
ಮಂಗಳೂರು, ನ.29: ನಮ್ಮ ನಡುವೆ ನಡೆಯುವ ಕೆಲ ಘಟನೆಗಳು ಹಲವಾರು ಪ್ರಶ್ನೆಗಳನ್ನು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಕೆಲವು ಕಾನೂನು ನಿಯಮಾವಳಿಗಳು ಎಲ್ಲರಿಗೂ ಸಮಾನವಾಗಿವೆಯೇ? ಇಂತಹ ಪ್ರಶ್ನೆ ಮೂಡಲು ಕಾರಣ ಮಂಗಳೂರು ಹೊರವಲಯದಲ್ಲಿ ಕಡಲ ಬದಿಯಲ್ಲೇ ತಲೆ ಎತ್ತಿರುವ ಬೃಹತ್ ಕಟ್ಟಡ ಸಂಕೀರ್ಣ. ಇಲ್ಲಿ ಸಿರಿವಂತರಿಗೊಂದು, ಬಡವರಿಗೊಂದು ಕಾನೂನು ಇದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್ ಸರ್ಫಿಂಗ್ ಕಾರಣಕ್ಕೆ ದೇಶದಲ್ಲೇ ಫೇಮಸ್. ಆದರೆ, ಅದೇ ಬೀಚ್ ನಲ್ಲೀಗ ನಾಯಿ ಕೊಡೆಗಳಂತೆ ರೆಸಾರ್ಟ್ ಗಳು ತಲೆಯೆತ್ತಿ ನಿಂತಿವೆ. ಅದರ ನಡುವೆಯೇ ಪ್ರಭಾವಿಗಳು ಸಿಆರ್ ಝೆಡ್ ಕಾನೂನನ್ನೇ ಉಲ್ಲಂಘಿಸಿ ಅದ್ದೂರಿ ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾರೆ. ಬಿಲ್ಡರುಗಳು ಐಷಾರಾಮಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ.
ಸಸಿಹಿತ್ಲು ಭಗವತಿ ದೇವಸ್ಥಾನದ ದ್ವಾರದ ಸಮೀಪದ ಬೀಚ್ ರಸ್ತೆಯಲ್ಲೇ ಐದು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ತಲೆಯೆತ್ತಿದ್ದು, ಕಾನೂನು ಉಲ್ಲಂಘಿಸಿ ಕಟ್ಟಲಾಗುತ್ತಿದೆ ಅನ್ನುವ ಆರೋಪ ಕೇಳಿಬಂದಿದೆ. ಸಿಆರ್ ಝೆಡ್ ಕಾನೂನು ಪ್ರಕಾರ, ಸಮುದ್ರ ದಡದಿಂದ 500 ಮೀಟರ್ ದೂರದಲ್ಲಿ ಮಾತ್ರ ಬೃಹತ್ ಕಟ್ಟಡ ಕಟ್ಟಲು ಅನುಮತಿ ಇದೆಯಂತೆ. ಆದರೆ, ಇಲ್ಲಿ ಕೇವಲ 40 ಮೀಟರ್ ಅಂತರದಲ್ಲಿ ಐದು ಅಂತಸ್ತಿನ ಐಷಾರಾಮಿ ಅಪಾರ್ಟ್ಮೆಂಟ್ ನಿರ್ಮಾಣಗೊಂಡಿದೆ. ಈ ಬಗ್ಗೆ ಸ್ಥಳೀಯರು ಹಳೆಯಂಗಡಿ ಪಂಚಾಯತ್ ಆಡಳಿತಕ್ಕೂ ದೂರು ನೀಡಿದ್ದಾರೆ.
ಮಂಗಳೂರಿನ 10ಕ್ಕೂ ಹೆಚ್ಚು ವೈದ್ಯರು ಸೇರಿಕೊಂಡು ಉನ್ನತ ಮಟ್ಟದ ಪ್ರಭಾವ ಬಳಸ್ಕೊಂಡು ಈ ಅಪಾರ್ಟ್ಮೆಂಟ್ ಕಟ್ಟುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಈ ಬಗ್ಗೆ ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಅವರಲ್ಲಿ ಕೇಳಿದಾಗ, ನಾವು ಅಧಿಕಾರಕ್ಕೆ ಬರುವ ಮೊದಲೇ ಎರಡು ಅಂತಸ್ತಿನ ಕಟ್ಟಡಕ್ಕೆ ಅನುಮತಿ ನೀಡಲಾಗಿತ್ತು. ಆನಂತರ, ಸಿಆರ್ ಝೆಡ್ ಕಡೆಯಿಂದ ನಿರಾಕ್ಷೇಪಣ ಪತ್ರವನ್ನು ತಂದು ಮತ್ತೆ ಮೂರು ಅಂತಸ್ತಿಗೆ ಪರವಾನಗಿ ಪಡೆದಿದ್ದಾರೆ. ಅಧಿಕೃತ ಮಂಡಳಿಯಿಂದ ಎನ್ಓಸಿ ಪಡೆದ ಬಳಿಕ ನಾವು ಪರ್ಮಿಶನ್ ನೀಡಬೇಕಾಗುತ್ತದೆ ಎಂದಿದ್ದಾರೆ.
ಆದರೆ ಸ್ಥಳೀಯ ಮೀನುಗಾರ ಸಮುದಾಯದ ರಾಮಕೃಷ್ಣ ಸಾಲಿಯಾನ್ ಹೇಳುವ ಪ್ರಕಾರ, ನಾವು ಸಣ್ಣ ಮನೆಯ ಶೆಡ್ ನಿರ್ಮಿಸಿದರೂ ಪಂಚಾಯತ್ ಮಂದಿ ಓಡಿಕೊಂಡು ಬರುತ್ತಾರೆ. ಇಲ್ಲಿ ಇಷ್ಟು ದೊಡ್ಡ ಬಿಲ್ಡಿಂಗ್ ಕಟ್ಟಲು ಅನುಮತಿ ನೀಡಿದ್ದಾರೆ. ಇದಲ್ಲದೆ, ನಮಗೆ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಸಿಗೋದು. ನೀರು ಇಲ್ಲದೆ ಕಷ್ಟ ಪಡುತ್ತಿದ್ದೇವೆ. ಇದರ ನಡುವೆ, ಇಷ್ಟು ದೊಡ್ಡ ಬಿಲ್ಡಿಂಗ್ ಕಟ್ಟಿ ಇವರಿಗೆಲ್ಲಿಂದ ನೀರು ಕೊಡುತ್ತಾರೆ. ಸಿಆರ್ ಝೆಡ್ ಕಚೇರಿಗೆ ಕೇಳಿದರೆ, 500 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದಿದ್ದಾರೆ. ಇಲ್ಲಿ ಪಂಚಾಯತ್ ಪರವಾನಗಿ ಕೊಟ್ಟಿದ್ದು ಹೇಗೆ.. ಹಣ ಇದ್ದವರು ಏನು ಮಾಡಿದ್ರೂ ನಡೆಯುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಸಮುದ್ರಕ್ಕೆ ತಾಗಿಕೊಂಡೇ ಅಕ್ರಮ ಕಟ್ಟಡ
ಅಲ್ಲಿಯೇ ಪಕ್ಕದಲ್ಲಿ ಮತ್ತೊಂದು ಅಕ್ರಮ ಕಟ್ಟಡ ತಲೆಯೆತ್ತಿ ನಿಂತಿದೆ. ಬೀಚ್ ರಸ್ತೆಯ ಎಡಭಾಗದಲ್ಲಿ ಸಮುದ್ರಕ್ಕೆ ತಾಗಿಕೊಂಡು ಕಾಟೇಜ್ ಮಾದರಿಯಲ್ಲಿ ಕಟ್ಟಡ ಕಟ್ಟಲಾಗಿದ್ದು, ನಿಯಮವನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಸಮುದ್ರ ಬದಿಯಲ್ಲಿ ಯಾವುದೇ ಕಟ್ಟಡ ಕಟ್ಟುವುದಕ್ಕೆ ಅವಕಾಶ ಇರುವುದಿಲ್ಲ. ಸ್ಥಳೀಯರ ಪ್ರಕಾರ, ಈ ಜಾಗದಲ್ಲಿ ಹಿಂದೆ ಕಮಲಾಕ್ಷಿ ಎಂಬ ಮಹಿಳೆಯ ಸಣ್ಣ ಮನೆ ಇತ್ತಂತೆ. ಅದೇ ಜಾಗದಲ್ಲಿ ಈಗ ಸುಂದರ ಕಾಟೇಜ್ ತಲೆಯೆತ್ತಿ ನಿಂತಿದೆ. ಅಲ್ಲದೆ, ಸುತ್ತ ಕಂಪೌಂಡ್ ಗೋಡೆಯನ್ನೂ ಹಾಕಲಾಗಿದೆ. ಇದನ್ನು ಮಂಗಳೂರಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತ ಮತ್ತು ಬಿಲ್ಡರ್ ಆಗಿರುವ ವ್ಯಕ್ತಿ ಕಟ್ಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಮಲಾಕ್ಷಿ ಎಂಬ ಮಹಿಳೆಯ ಹೆಸರಿನ ಡೋರ್ ನಂಬರಿನಲ್ಲೇ ಬೇರೆಯವರು ಹಣ ಹೂಡಿಕೆ ಮಾಡಿದ್ದು, ಏಳೆಂಟು ತಿಂಗಳಲ್ಲಿ ಎರಡಂತಸ್ತಿನ ಮನೆ ನಿರ್ಮಿಸಲಾಗಿದೆ ಎನ್ನುತ್ತಿದ್ದಾರೆ. ಇದಕ್ಕೆ ರೆಸಾರ್ಟ್ ಮಾಡೋದಕ್ಕಾಗಲೀ, ಮನೆ ಕಟ್ಟುವುದಕ್ಕಾಗಲೀ ಪರ್ಮಿಶನ್ ಕೊಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ.
ಸಾಮಾನ್ಯವಾಗಿ ಬೀಚ್ ರಸ್ತೆಯ ಬಲಭಾಗದಲ್ಲಿ ಮಾತ್ರ ರೆಸಾರ್ಟ್ ಕಟ್ಟಲಾಗುತ್ತದೆ. ಎಡಭಾಗದಲ್ಲಿ 40 ಮೀಟರ್ ಅಂತರದಲ್ಲಿ ಸಮುದ್ರ ಇರುವುದರಿಂದ ಅಲ್ಲಿನ ಮರಳ ರಾಶಿಯ ಮೇಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಇಲ್ಲಿ ಕಟ್ಟಡ ಕಟ್ಟಿದರೂ ಅಪಾಯವೇ ಜಾಸ್ತಿ. ಹಿಂದಿನಿಂದಲೂ ಮನೆ ಮಾಡಿಕೊಂಡಿದ್ದವರು ಇದ್ದ ರೀತಿಯಲ್ಲೇ ನವೀಕರಣ ಮಾಡುವುದಕ್ಕಷ್ಟೇ ಸಿಆರ್ ಝೆಡ್ ಕಾನೂನಿನಲ್ಲಿ ಅವಕಾಶ ಇದೆ. ಇಲ್ಲಿನ ಸ್ಥಿತಿ ನೋಡಿದರೆ, ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎನ್ನುವ ದಾಸವಾಣಿ ನೆನಪಿಗೆ ಬರುತ್ತದೆ
Rules governing Mangalore Sasihithlu Beach CRZ are broken; a luxurious flat-built apartment is in violation. The CRZ regulations state that structures must be built 500 meters back from the beach; nevertheless, in this case, the buildings are only 40 meters away.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am