ಬ್ರೇಕಿಂಗ್ ನ್ಯೂಸ್
01-12-23 06:33 pm Mangalore Correspondent ಕರಾವಳಿ
ಮಂಗಳೂರು, ಡಿ.1: ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಡಿ.1ರಂದು ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಬ್ರಹತ್ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ದ.ಕ. ಜಿಲ್ಲಾ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಸುಮಾರು 500ಕ್ಕೂ ಮಿಕ್ಕಿದ ಪ್ರತಿಭಟನಾಕಾರರು ಸೇರಿದ್ದರು.


ಪ್ರತಿಭಟನೆಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್, ಸರಕಾರದ ಎಲ್ಲಾ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಹಾಗೂ ಸರಕಾರದ ಪರವಾಗಿ ಬಹಳ ನಿಷ್ಠೆಯಿಂದ ದುಡಿಯುವ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಕಳೆದ 5 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದರೂ, ಸರಕಾರ ಮಾತ್ರ ಅವರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸುತ್ತಿಲ್ಲ. ಗೌರವ ಧನದ ಹೆಸರಿನಲ್ಲಿ 5000, 2500 ರೂ. ನೀಡಿ ದುಡಿಯುವ ಜನತೆಗೆ ಅಗೌರವ ತೋರಿಸುತ್ತಿದೆ. ವಿವಿಧ ರೀತಿಯ ಗ್ಯಾರಂಟಿಗಳನ್ನು ನೀಡುವ ರಾಜ್ಯ ಸರಕಾರ ದುಡಿಯುವ ಜನತೆಗೆ ಬದುಕುವ ಗ್ಯಾರಂಟಿ ನೀಡದಿರುವುದು ವಿಪರ್ಯಾಸ. ಇವರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೆರಾವ್ ಹಾಕಿ ಹೋರಾಟ ನಡೆಸಬೇಕಾದಿತು ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಸೌಮ್ಯ ಯಶವಂತ ಮಾತನಾಡಿ, ಸರಕಾರದ ಎಲ್ಲಾ ಕೆಲಸಗಳನ್ನು ಮಾಡಿಸುವ ಸರಕಾರ ನಮ್ಮ ಹುದ್ದೆಗಳನ್ನು ಖಾಯಂಗೊಳಿಸಿ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಮುಖ್ಯ ಪುಸ್ತಕ ಬರಹಗಾರರಿಗೆ ಮಾಸಿಕ ರೂ.20,000 ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಮಾಸಿಕ ರೂ.15,000 ವೇತನ ನೀಡಬೇಕು. ಅದರ ಜೊತೆಗೆ ESI, PF, ಸಮವಸ್ತ್ರ, ಗುರುತು ಚೀಟಿಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸ್ಪಂದಿಸಬೇಕು ಎಂದು ಹೇಳಿದರು.
ಒಕ್ಕೂಟದ ಜಿಲ್ಲಾ ನಾಯಕಿ ಸಂಧ್ಯಾ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಮುಖಂಡರಾದ ಗೀತಾ ಸುಳ್ಯ, ಶೋಭಾ, ಇಂದಿರಾ, ಜಯಂತಿ, ಗೀತಾಂಜಲಿ ಮೂಡಬಿದ್ರೆ, ನಳಿನಾಕ್ಷಿ ಮುನ್ನೂರು ಮುಂತಾದವರು ವಹಿಸಿದ್ದರು. ಪ್ರತಿಭಟನೆಯ ಕೊನೆಯಲ್ಲಿ ಜಿಲ್ಲಾ ಮಟ್ಟದ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಿತು.
Mangalore Protest by gram panchayat book writers, community resource persons; Gherao warning if the demand is not met.
28-12-25 09:03 pm
Bangalore Correspondent
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
29-12-25 01:24 pm
Udupi Correspondent
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
ಮಂಗಳೂರು ಕಂಬಳದಲ್ಲಿ ಹೊಸ ಇತಿಹಾಸ ; ಹುಸೇನ್ ಬೋಲ್ಟ್...
28-12-25 09:37 pm
ಮನೆ ಕಂಪೌಂಡ್ ಹೊರಗೆ ನಿಲ್ಲಿಸಿದ್ದ ಆಟೋ ರಿಕ್ಷಾ ಕಳವು...
28-12-25 09:12 pm
ಸಂಸದ ಬ್ರಿಜೇಶ್ ಚೌಟರ 'ಬ್ಯಾಕ್ ಟು ಊರು' ಪರಿಕಲ್ಪನೆ...
28-12-25 03:44 pm
28-12-25 05:19 pm
HK News Desk
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm
ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮ...
27-12-25 02:28 pm
ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ರಿಸೆಪ್ಷನ್, ಶ್...
26-12-25 11:21 pm
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm