Hassan teacher Kidnap Case, Arrest: ಮದುವೆಗೆ ಒಲ್ಲದ ಹೆಣ್ಣನ್ನು ಅಪಹರಿಸಿದ್ದ ಸೋದರ ಮಾವ ; ಹಾಸನದ ಶಿಕ್ಷಕಿ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್, ಕೆಲವೇ ಗಂಟೆಗಳಲ್ಲಿ ಆರೋಪಿ ಅರೆಸ್ಟ್

01-12-23 08:06 pm       Mangalore Correspondent   ಕರಾವಳಿ

ಹಾಸನದಲ್ಲಿ ನಡೆದ ಶಾಲಾ ಶಿಕ್ಷಕಿಯ ಅಪಹರಣ ಪ್ರಕರಣದಲ್ಲಿ ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ರಾಮು ಎಂಬಾತನಾಗಿದ್ದು ಅಪಹರಣಕ್ಕೀಡಾದ ಶಿಕ್ಷಕಿ ಅರ್ಪಿತಾಗೆ ಸೋದರ ಮಾವ ಎಂದು ತಿಳಿದುಬಂದಿದೆ.

ಪುತ್ತೂರು, ಡಿ.1: ಹಾಸನದಲ್ಲಿ ನಡೆದ ಶಾಲಾ ಶಿಕ್ಷಕಿಯ ಅಪಹರಣ ಪ್ರಕರಣದಲ್ಲಿ ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿ ರಾಮು ಎಂಬಾತನಾಗಿದ್ದು ಅಪಹರಣಕ್ಕೀಡಾದ ಶಿಕ್ಷಕಿ ಅರ್ಪಿತಾಗೆ ಸೋದರ ಮಾವ ಎಂದು ತಿಳಿದುಬಂದಿದೆ.

ಆರೋಪಿ ರಾಮು, ಅರ್ಪಿತಾಳನ್ನ ಮದುವೆಯಾಗಲು ಬಯಸಿದ್ದ. ಆದರೆ ಆಕೆ ಮತ್ತು ಪೋಷಕರು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಸಿಟ್ಟುಗೊಂಡ ಆರೋಪಿ ರಾಮು ಹೇಗಾದರು ಸರಿ ಆಕೆಯನ್ನು ಮದುವೆಯಾಗಲೇ ಬೇಕೆಂದು ಗುರುವಾರ ಶಾಲೆಗೆ ಹೋಗುತ್ತಿದ್ದ ಅರ್ಪಿತಾಳನ್ನು ಇನ್ನೋವಾ ಕಾರಿನಲ್ಲಿ ಅಪಹರಿಸಿದ್ದ. ಆರೋಪಿ ರಾಮು ಕಾರಿನಲ್ಲೇ ಯುವತಿಯ ಮನವೊಲಿಸಿ ತಾಳಿಕಟ್ಟಲು ಮುಂದಾಗಿದ್ದ. ಆದರೆ ಯುವತಿ ಇದಕ್ಕೆ ಒಪ್ಪಿರಲಿಲ್ಲ. 

ಅಪಹರಣ ವಿಚಾರ ತಿಳಿಯುತ್ತಿದ್ದಂತೆ ಬೆನ್ನು ಹತ್ತಿದ್ದ ಹಾಸನ ಪೊಲೀಸರು ಬಲೆ ಬೀಸಿದ್ದರು. ಹಾಸನದಿಂದ ಸಕಲೇಶಪುರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯತ್ತ ಸಾಗುತ್ತಿದ್ದಾರೆ ಎಂಬ ವಿಚಾರ ತಿಳಿದು ಬೆನ್ನು ಹತ್ತಿದ್ದರು. ಪೊಲೀಸರು ಬೆನ್ನತ್ತಿದ್ದನ್ನು ತಿಳಿದು ಕಾರಿನಲ್ಲಿ ಜೊತೆಗಿದ್ದವರು ರಾಮುನನ್ನು ಮಾತ್ರ ಬಿಟ್ಟು ಪರಾರಿಯಾಗಿದ್ದರು. ಕೊನೆಗೆ ಅದೇ ದಿನ ಸಂಜೆ ಐದು ಗಂಟೆ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಗುರುವಾರ ರಾತ್ರಿಯೇ ಅರ್ಪಿತಾಳನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಹಾಸನ ನಗರ ಪೊಲೀಸರ ಕಾರ್ಯಾಚರಣೆಗೆ ಕುಟುಂಬ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Hassan teacher kidnap case, accused arrested by police in few hours of kidnap. The city police have arrested a man after he allegedly abducted a private school teacher for turning down his marriage proposal. The accused has been identified as Ramu, who is a close relative of the woman who was kidnapped. Hassan Town police traced the kidnapper using his mobile phone and the number plate of the car used for the kidnapping,