ಬ್ರೇಕಿಂಗ್ ನ್ಯೂಸ್
02-12-23 10:48 am Mangalore Correspondent ಕರಾವಳಿ
ಮಂಗಳೂರು, ಡಿ.2: ತುಳುನಾಡಿನ ದೈವಾರಾಧನೆಯನ್ನೇ ಮಾರ್ಕೆಟ್ ಮಾಡಲು ಟ್ರಾವೆಲ್ ಏಜನ್ಸಿಯೊಂದು ಮುಂದಾಗಿದೆ. ಬೆಂಗಳೂರಿನ ಟ್ರಾವೆಲ್ ಬುಡ್ಡಿ ಹೆಸರಿನ ಸಂಸ್ಥೆಯ ಹೆಸರಲ್ಲಿ ದೈವದ ಕೋಲವನ್ನೇ ಮುಂದಿಟ್ಟು ಟೂರ್ ಪ್ಯಾಕೇಜ್ ಆಯೋಜಿಸಲಾಗಿದ್ದು, ಅದರ ಪೋಸ್ಟ್ ಅನ್ನು ಜಾಲತಾಣದಲ್ಲಿ ಹಾಕಲಾಗಿದೆ. ಫೇಸ್ಬುಕ್, ಇನ್ ಸ್ಟಾ ಗ್ರಾಮ್ ಪೇಜಲ್ಲಿ ಹಾಕಿರುವ ಟೂರ್ ಪ್ಯಾಕೇಜ್ ಪೋಸ್ಟ್ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಿದೆ.
ಟ್ರಾವೆಲ್ ಸಂಸ್ಥೆಯಿಂದ 2024ರ ಫೆಬ್ರವರಿ 10-11ರಂದು ಎರಡು ದಿನದ ಟೂರ್ ಪ್ಯಾಕೇಜ್ ಹಮ್ಮಿಕೊಂಡಿದ್ದು, ಉಪ್ಪಿನಂಗಡಿ ಕಂಬಳ, ನದಿಯಲ್ಲಿ ಬೋಟಿಂಗ್, ಬೊಳ್ಳಾಡಿ ಫಾರ್ಮ್ ನಲ್ಲಿ ಪಾರ್ಟಿ, ಬೊಳ್ಳಾಡಿ ಮನೆಯಲ್ಲಿ ಭೂತ ಕೋಲ, ಬೀರಮಲೆ ಬೆಟ್ಟಕ್ಕೆ ಟ್ರಕ್ಕಿಂಗ್ ಇರಲಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಟೂರ್ ಪ್ಯಾಕೇಜ್ ಮೊತ್ತ ಒಬ್ಬನಿಗೆ 2899 ರೂ. ಆಗಿರುತ್ತದೆ. ಕೂಡಲೇ ಬುಕ್ಕಿಂಗ್ ಮಾಡಿ ಎಂದು ಎಡ್ರಸ್ ಬುಕ್ ಮೈ ಶೋ ಎಡ್ರಸ್ ಹಾಕಲಾಗಿದೆ. ಇದಲ್ಲದೆ, ದೈವದ ಕೋಲದ ಚಿತ್ರವನ್ನು ಹಾಕಿದ್ದು, ಕಾಂತಾರ ಸಿನಿಮಾ ರೀತಿಯಲ್ಲೇ ದೈವದ ಕಾರಣಿಕದ ಚಿತ್ರಣ ಲೈವ್ ಆಗಿ ಅನುಭವಿಸಲಿದ್ದೀರಿ ಎಂದು ಹೇಳಿ ಆಕರ್ಷಣೆ ಗಿಟ್ಟಿಸುವ ಯತ್ನ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ದೈವ ಕೋಲವನ್ನು ಮಾರ್ಕೆಟ್ ಮಾಡುವ ಮತ್ತು ವ್ಯವಹಾರದ ಉದ್ದೇಶದಿಂದ ಟೂರ್ ಪ್ಯಾಕೇಜ್ ಘೋಷಿಸಿರುವ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ನಗರ ಪ್ರದೇಶಗಳಲ್ಲಿ ಈ ಟೂರ್ ಪ್ಯಾಕೇಜ್ ಬಗ್ಗೆ ಪೋಸ್ಟ್ ಹರಿದಾಡುತ್ತಿದ್ದು, ಹಲವರು ಬುಕ್ಕಿಂಗ್ ಮಾಡಿಕೊಂಡಿದ್ದರೆ ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈವಾರಾಧನೆ ಅನ್ನುವುದು ಪ್ರದರ್ಶನ ಕಲೆಯಲ್ಲ, ಭಕ್ತಿ ಭಾವದ ಸಂಕೇತ. ಅದನ್ನು ಪ್ರದರ್ಶನದ ರೂಪದಲ್ಲಿ ಪ್ರವಾಸಿಗರು ಬಂದು ನೋಡಿದಲ್ಲಿ ಅದರ ಕಲೆ, ಕಾರಣಿಕಕ್ಕೆ ಬೆಲೆ ಬರುವುದಿಲ್ಲ. ತುಳುವರ ಧಾರ್ಮಿಕ ಭಾವನೆಗೆ ಪೆಟ್ಟು ಬೀಳುತ್ತದೆ ಎಂದು ಒಂದಷ್ಟು ಮಂದಿ ಕಮೆಂಟ್ ಹಾಕಿದ್ದಾರೆ.
ದೈವಾರಾಧನೆ ಮತ್ತು ಅದರ ಕಾರಣಿಕವನ್ನು ತೋರಿಸುವ ಕಾಂತಾರ ಸಿನಿಮಾ ಹಿಟ್ ಆದಬಳಿಕ ತುಳುವರ ದೈವದ ಕೋಲದ ಬಗ್ಗೆ ಇತರ ಕಡೆಯ ಜನರಿಗೂ ಆಕರ್ಷಣೆ ಹೆಚ್ಚಿದೆ. ಕರಾವಳಿ ಬಿಟ್ಟು ಇತರ ಕಡೆಗಳಲ್ಲೂ ದೈವಗಳನ್ನು ಆರಾಧಿಸುವುದು, ದೈವಗಳ ಕ್ಷೇತ್ರಗಳಿಗೆ ಸಿನಿಮಾ ನಟ- ನಟಿಯರು ಭೇಟಿ ಕೊಟ್ಟು ಭಯ ಭಕ್ತಿ ತೋರಿಸುವುದು ಕಂಡುಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಟ್ರಾವೆಲ್ ಏಜನ್ಸಿ ಈಗ ದೈವದ ಕೋಲವನ್ನೇ ಮಾರ್ಕೆಟ್ ಮಾಡಿದ್ದು, ಅದನ್ನು ತೋರಿಸುವ ನೆಪದಲ್ಲಿ ಟೂರ್ ಪ್ಯಾಕೇಜ್ ಫೋಷಣೆ ಮಾಡಿದೆ. ಉಪ್ಪಿನಂಗಡಿ ಕಂಬಳದ ಸಂದರ್ಭದಲ್ಲೇ ಆಸುಪಾಸಿನಲ್ಲಿ ನಡೆಯುವ ದೈವದ ಕೋಲ ಮುಂದಿಟ್ಟು ಟ್ರಕ್ಕಿಂಗ್, ಕಂಬಳ, ಪಾರ್ಟಿ ಎಲ್ಲವನ್ನೂ ಒಂದೇ ರೂಟಿನಲ್ಲಿ ತಂದಿಟ್ಟಿದೆ. ಡ್ರಿಂಕ್ಸ್ ಬೇಕಿದ್ದರೆ, ಸ್ಥಳದಲ್ಲೇ ಲಭ್ಯ ಇದೆಯೆಂದು ಹೇಳಿದ್ದು, ಆಮೂಲಕ ಪ್ರವಾಸಕ್ಕೆ ಬರುವವರಿಗೆ ಪಾರ್ಟಿ ಆಕರ್ಷಣೆಯನ್ನೂ ತೋರಿಸಲಾಗಿದೆ. ದೈವದ ಬಗ್ಗೆ ನಂಬಿಕೆಯಿದ್ದರೆ, ಕೋಲ ನೋಡಬೇಕೆಂಬ ಆಸಕ್ತಿಯಿದ್ದರೆ ಅಂಥವರಿಗೆ ನೇರವಾಗಿ ಬಂದು ನೋಡಬಹುದು. ಆದರೆ ಇಲ್ಲಿ ಟೂರ್ ಪ್ಯಾಕೇಜ್ ಮಾಡಿ, ಪ್ರವಾಸಿಗರಿಗೆ ದೈವದ ಕೋಲವನ್ನು ಪ್ರದರ್ಶನ ವಸ್ತುವಾಗಿಸಿರುವುದು ವಿರೋಧಕ್ಕೆ ಕಾರಣವಾಗಿದೆ.
ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಅದ್ದೂರಿ ಕಂಬಳ ನಡೆದು ಸಾಫ್ಟ್ ವೇರ್ ಟೆಕ್ಕಿಗಳ ಆಕರ್ಷಣೆ ಗಿಟ್ಟಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಊರಿನದ್ದೇ ಕಂಬಳ, ಜೊತೆಗೆ ದೈವದ ಕೋಲವನ್ನೂ ತೋರಿಸುವ ಯತ್ನ ನಡೆದಿದೆ. ಈ ಟೂರ್ ಪ್ಯಾಕೇಜಿಗೆ ಹೆಚ್ಚಾಗಿ ಸಾಫ್ಟ್ ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕ, ಉತ್ತರ ಭಾರತೀಯರು, ಬೇರೆ ಬೇರೆ ರಾಜ್ಯಗಳ ಟೆಕ್ಕಿಗಳು ಆಕರ್ಷಿತರಾಗಿದ್ದು, ಪ್ಯಾಕೇಜ್ ಬುಕ್ಕಿಂಗ್ ಮಾಡುತ್ತಿದ್ದಾರೆ.
Tour company called BEATRAVEL buddy organises package tour to Bhoota Kola in for 2899 Rs sparks controversy on social media
01-02-25 05:12 pm
HK News Desk
ಕಾಂಗ್ರೆಸ್ ನಿಂದ ಬಿಜೆಪಿ ಹೋದವರಿಗೆ ಅಲ್ಲಿ ಯಾವ ಸ್ಥಾ...
31-01-25 10:10 pm
Sriramulu, BJP, B. Y. Vijayendra: ವಿಜಯೇಂದ್ರ ಸ...
31-01-25 08:03 pm
SC directive for patients, Karnataka Health D...
31-01-25 06:07 pm
Cheque bounce, Snehamahi Krishna: ಮುಡಾ ಹಗರಣ ಹ...
31-01-25 02:02 pm
01-02-25 09:51 pm
HK News Desk
ಎರ್ನಾಕುಲಂ ಜಿಲ್ಲೆಯಲ್ಲಿ ಒಂದೇ ದಿನ 27 ಬಾಂಗ್ಲಾ ದೇಶ...
01-02-25 09:35 pm
2025ರ ಕೇಂದ್ರ ಬಜೆಟ್ ಗುಂಡಿನ ಗಾಯಕ್ಕೆ ಹಾಕಿದ ಬ್ಯಾಂ...
01-02-25 05:51 pm
ಕೇಂದ್ರ ಬಜೆಟ್ ಮಂಡನೆ ; ಕೃಷಿಕರು, ಮಧ್ಯಮ ವರ್ಗಕ್ಕೆ...
01-02-25 02:10 pm
Sonia Gandhi, president Murmu: ರಾಷ್ಟ್ರಪತಿ ಬಗ್...
31-01-25 09:10 pm
01-02-25 07:47 pm
Mangalore Correspondent
Kotekar Bank Robbery, Murgan D Devar: ಕೋಟೆಕಾರ...
01-02-25 02:32 pm
Mangalore builder Jitendra Kottary, prasanna...
31-01-25 11:05 pm
Mangalore Prasad attavar, RTI Snehamayi Krish...
31-01-25 10:49 pm
Ullal Panchyath, Mangalore; ಉಳ್ಳಾಲ ನಗರಸಭೆ ಸೀಲ...
31-01-25 09:49 pm
01-02-25 10:11 pm
Mangalore Correspondent
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am
Ankola, Mangalore Car, Cash, Crime: ಅಂಕೋಲಾದಲ್...
29-01-25 04:12 pm
Mangalore News, Crime, Court: 14 ವರ್ಷದ ಬಾಲಕಿಯ...
28-01-25 05:17 pm