ಬ್ರೇಕಿಂಗ್ ನ್ಯೂಸ್
03-12-23 11:22 am By Giridhar Shetty, Mangaluru ಕರಾವಳಿ
ಮಂಗಳೂರು, ಡಿ.3: ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಪಕ್ಷದ ಸ್ಥಳೀಯ ಮುಖಂಡರ ಅಹವಾಲು ಕೇಳಲು ಜಿಲ್ಲೆಯ ಉಸ್ತುವಾರಿ ಮಧು ಬಂಗಾರಪ್ಪ ಪಕ್ಷದ ಜಿಲ್ಲಾ ಕಚೇರಿಗೆ ಆಗಮಿಸಿದ್ದರು. ಶನಿವಾರ ಸಂಜೆ ಏಳು ಗಂಟೆಗೆ ಮಲ್ಲಿಕಟ್ಟೆ ಕಚೇರಿಗೆ ಆಗಮಿಸಿದ ಸಚಿವರು, ಪಕ್ಷದ ಬ್ಲಾಕ್ ಮಟ್ಟದ ಪ್ರಮುಖರು, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರ ಅಭಿಪ್ರಾಯ ಆಲಿಸಿದರು.
ಸಚಿವ ಮಧು ಬಂಗಾರಪ್ಪ ಒಬ್ಬರೇ ವೇದಿಕೆಯಲ್ಲಿ ಕುಳಿತು ಪ್ರಮುಖ ಸಮಿತಿಗಳ ಅಭಿಪ್ರಾಯಗಳನ್ನು ಪ್ರೇತ್ಯೇಕವಾಗಿ ಆಲಿಸಿದರು. ಈ ವೇಳೆ, ಹಲವು ನಾಯಕರ ಹೆಸರುಗಳು ಪ್ರಸ್ತಾಪವಾಗಿದ್ದು, ಹೆಚ್ಚಿನವರು ಹೊಸ ಮುಖವನ್ನು ಕಣಕ್ಕಿಳಿಸಬೇಕು ಎನ್ನುವ ಆಗ್ರಹ ಮಾಡಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಸದಸ್ಯರು ಮತ್ತು ಬ್ಲಾಕ್ ಮಟ್ಟದ ಪ್ರಮುಖರು ಹೊಸ ಮುಖವನ್ನು ಕಣಕ್ಕಿಳಿಸಿದಲ್ಲಿ ಈ ಬಾರಿ ಗೆಲುವು ಖಚಿತ ಎನ್ನುವ ಅಭಿಪ್ರಾಯ ನೀಡಿದ್ದಾರೆ. ವಕೀಲ ಆರ್. ಪದ್ಮರಾಜ್ ಹೆಸರು ಹೆಚ್ಚು ಪ್ರಸ್ತಾಪವಾಗಿದ್ದು ಬಿಜೆಪಿಯಲ್ಲಿ ಹಾಲಿ ಸಂಸದರ ಬಗೆಗಿರುವ ಭಿನ್ನಮತ ತಮಗೆ ವರವಾಗಬಹುದು ಎಂದು ಅಭಿಪ್ರಾಯ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಬಂಟ್ವಾಳ, ಪುತ್ತೂರು ಭಾಗದ ಪಕ್ಷದ ಪ್ರಮುಖರು ಮಾಜಿ ಸಚಿವ ರಮಾನಾಥ ರೈ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಇದಲ್ಲದೆ, ಕೆಲವು ನಾಯಕರು ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿನಯ ಕುಮಾರ್ ಸೊರಕೆ ಹೆಸರನ್ನೂ ಹೇಳಿದ್ದಾರೆ. ಯುವ ಮುಖಂಡ ರಕ್ಷಿತ್ ಶಿವರಾಂ ಹೆಸರೂ ಕೇಳಿಬಂದಿದೆ. ಮುಸ್ಲಿಂ ಸಮುದಾಯದಿಂದ ಕಣಚೂರು ಮೋನು, ಇನಾಯತ್ ಆಲಿ ಹೆಸರೂ ಪ್ರಸ್ತಾಪವಾಗಿದೆ. ಮಹಿಳೆಯರಿಗೆ ನೀಡುವುದಾದರೆ ಮಮತಾ ಗಟ್ಟಿ, ಶಕುಂತಳಾ ಶೆಟ್ಟಿಗೆ ನೀಡಬೇಕೆಂಬ ಮಾತು ಕೇಳಿಬಂದಿದೆ. ಎಲ್ಲರ ಅಭಿಪ್ರಾಯವನ್ನೂ ಮಧು ಬಂಗಾರಪ್ಪ ಆಲಿಸಿದ್ದು, ಕೆಪಿಸಿಸಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ಗಂಗಾಧರ ಗೌಡ, ಮಾಜಿ ಸಂಸದ ಬಿ. ಇಬ್ರಾಹಿಂ, ಅಭಯಚಂದ್ರ ಜೈನ್, ಇಬ್ರಾಹಿಂ ಕೋಡಿಜಾಲ್, ಜೆ.ಆರ್ ಲೋಬೊ, ಜಿಎ ಬಾವ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಆಲಿ, ಮಮತಾ ಗಟ್ಟಿ, ಜಿ. ಕೃಷ್ಣಪ್ಪ, ಕಣಚೂರು ಮೋನು, ಪದ್ಮರಾಜ್ ಆರ್. ಸೇರಿದಂತೆ ಪಕ್ಷದ ಹಲವು ಸಮಿತಿಗಳ ಮುಖಂಡರು ಉಪಸ್ಥಿತರಿದ್ದರು.
Congress Ramanath Rai and Padmaraj names proposed for Loksabha election candidates from Mangalore, Madhu Bangarappa.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm