ಬ್ರೇಕಿಂಗ್ ನ್ಯೂಸ್
06-12-23 01:41 pm Mangalore Correspondent ಕರಾವಳಿ
ಮಂಗಳೂರು, ಡಿ.6: ಸಂಪತ್ತು ಮುಸ್ಲಿಮರಿಗೆ ಹಂಚುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬಿಜೆಪಿ ಮುಖಂಡ ಸಿಟಿ ರವಿ ಕಿಡಿಕಾರಿದ್ದಾರೆ. ಈ ರೀತಿಯ ಹೇಳಿಕೆ ಅಪಾಯಕಾರಿ. ಕಾಂಗ್ರೆಸಿನ ಕೋಮುವಾದ ನೀತಿಯ ನಿದರ್ಶನ. ಇಂತಹ ಮಾನಸಿಕತೆಯೇ ದೇಶ ವಿಭಜನೆಗೆ ಕಾರಣವಾಗಿದ್ದು ಎಂದು ಸಿಟಿ ರವಿ ಹೇಳಿದ್ದಾರೆ.
ಬಿಜೆಪಿ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲಿನ ಚುನಾವಣಾ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಸ್ಮರಣ ಮಹಾಪರಿನಿರ್ವಾಣ ಸಭೆಯ ಬಳಿಕ ಮಾಧ್ಯಮಕ್ಕೆ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಓಲೈಕೆ ರಾಜಕಾರಣ, ವೋಟ್ ಬ್ಯಾಂಕಿಗಾಗಿ ಇಂತಹ ಹೇಳಿಕೆ ನೀಡಿದ್ದಾರೆ. ಈ ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು. ಭಾರತೀಯತೆಯನ್ನ ಒಪ್ಪಿದವರಿಗೆ ಸೇರಿದ್ದು. ಭಾರತದಲ್ಲೇ ಇದ್ದು ಭಾರತ ದೇಶಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ.
ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಬೇಕು, ಅದು ನಮ್ಮ ನೀತಿ. ತುಷ್ಟೀಕರಣ, ಓಲೈಕೆ ರಾಜನೀತಿಯ ಪರಿಣಾಮ ಕೋಟ್ಯಂತರ ಜನ ನಿರ್ವಸತಿಯಾಗೋದಕ್ಕೆ ಕಾರಣವಾಗಿದೆ. ಕಾಂಗ್ರೆಸಿನ ನೀತಿ ದೇಶವನ್ನು ವಿಭಜನೆ ಮಾಡುವಂಥದ್ದು. ಹೀಗಾಗಿ ಕಾಂಗ್ರೆಸ್ ಇಸ್ ರಿಯಲ್ ಕಮ್ಯುನಲ್ ಪಾರ್ಟಿ ಎಂದು ಟೀಕಿಸಿದರು.
ಮುಖ್ಯಮಂತ್ರಿ ಭಾಗವಹಿಸಿದ್ದ ಹುಬ್ಬಳ್ಳಿಯ ಸಭೆಯಲ್ಲಿ ಐಎಸ್ಐ ಏಜೆಂಟ್ ಇದ್ದರು ಎಂಬ ಯತ್ನಾಳ್ ಆರೋಪದ ಬಗ್ಗೆ ಸಿಟಿ ರವಿ ಪ್ರತಿಕ್ರಿಯಿಸಿದ್ದು ಯತ್ನಾಳ್ ಅವರೂ ಸುಮ್ಮನೆ ಆರೋಪ ಮಾಡಿದ್ದಾರೆ ಅಂತ ಅನಿಸೋದಿಲ್ಲ. ಈ ವಿಷಯದ ಬಗ್ಗೆ ಸಿಬಿಐ ಹಾಗು ಎನ್ಐಎ ತನಿಖೆ ನಡೆಸುವ ಅವಶ್ಯಕತೆಯಿದೆ. ಆ ಕಾರ್ಯಕ್ರಮದಲ್ಲಿ ಯಾರ್ಯಾರು ಇದ್ದರು, ಅವರ ಹಿನ್ನಲೆ ಏನು ಅನ್ನೋದರ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದು ಹೇಳಿದರು.
ಸೋಮಣ್ಣ ಪಾರ್ಟಿ ಬಿಡಲ್ಲ..
ಸೋಮಣ್ಣ ಬಿಜೆಪಿ ಬಿಡ್ತಾರೆ ಅನ್ನೋದು ತಪ್ಪು ಮಾಹಿತಿ. ಪಾರ್ಟಿ ಹೇಳಿದ್ದಕ್ಕೆ ಅವರು ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಬಿಡ್ತಾರೆ ಅನ್ನೋದು ಉಹಾಪೋಹ. ದೆಹಲಿಗೆ ಯಾವಾಗ ಹೋಗ್ತಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿಗೆ ಬರುವವರು ಕೇವಲ ರಾಜಕೀಯ ಕಾರಣಕ್ಕೆ ಬರಲ್ಲ. ಬಿಜೆಪಿಯ ವಿಚಾರಧಾರೆ ಒಪ್ಪಿಕೊಂಡು ಬರುತ್ತಾರೆ. ಪಂಚರಾಜ್ಯ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರಕಾರ ಇರುತ್ತೆ ಅನ್ನೋ ವಿಶ್ವಾಸ ಕಾಂಗ್ರೆಸ್ ನವರಿಗೆ ಇಲ್ಲ. ಹಲವು ನಾಯಕರು ಈಗಾಗಲೇ ಬಂಡಾಯ ಎದ್ದಿದ್ದಾರೆ. ಬಸವರಾಯರೆಡ್ಡಿ, ಬಿ.ಆರ್ ಪಾಟೀಲ್ ಬಂಡಾಯ ಎದ್ದಿದ್ದಾರೆ. ಪತ್ರ ಚಳುವಳಿ ಮಾಡ್ತಾಯಿದ್ದಾರೆ. ಅದನ್ನ ನಾವೇನು ಹೇಳಿಕೊಟ್ಟು ಮಾಡಿದ್ದು ಅಲ್ಲ. ಕಾಂಗ್ರೆಸ್ ನವರೇ ಹೇಳ್ತಾರೆ ಈ ಹಾಳಾದ ಸರಕಾರ ಯಾಕ್ ಬಂತೋ ಏನೋ ಅಂತ. ಒಂದು ರೂಪಾಯಿ ಕೆಲಸ ಆಗ್ತಾಯಿಲ್ಲ ಎಂದು ಕಾಂಗ್ರೆಸ್ ನವರೇ ಬೈತಾಯಿದ್ದಾರೆ. ಇದು ನನ್ನ ಮಾತಲ್ಲ ಕಾಂಗ್ರೆಸ್ಸಿಗರ ಮಾತು ಎಂದು ಮೂದಲಿಸಿದರು.
Siddaramaiah over remarks to raise grants for Muslim community, CT Ravi in Mangalore says Congress is a communial party. CM Had announced that he would ensure increased grants for the Muslim community. Calling the move ‘appeasement politics’, the Opposition demanded an explanation during the ongoing assembly session in Belagavi.
29-07-25 01:31 pm
Bangalore Correspondent
Nikhil Kumaraswamy: ಸಿಎಂ ಮತ್ತು ಡಿಸಿಎಂ ಮ್ಯೂಸಿಕ...
28-07-25 11:07 am
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
29-07-25 11:58 am
HK News Desk
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
29-07-25 09:56 pm
Mangalore Correspondent
Dharmasthala case, SIT Begins Excavation, Upd...
29-07-25 02:20 pm
Dharmasthala Burial Case, 13 Suspected Grave...
28-07-25 10:41 pm
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
29-07-25 08:54 pm
HK News Desk
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm
ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 8 ಲಕ್ಷ ಗೆಲು...
28-07-25 11:20 pm
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm