ಬ್ರೇಕಿಂಗ್ ನ್ಯೂಸ್
08-12-23 06:44 pm Mangaluru Correspondent ಕರಾವಳಿ
ಮಂಗಳೂರು, ಡಿ.8: ಕೋಮು ದ್ವೇಷದ ನೆಲದಲ್ಲಿ ಸೌಹಾರ್ದ ಸಾರುವ ಮದುವೆಯೊಂದು ಸದ್ದಿಲ್ಲದೆ ನಡೆದಿದೆ. ಹಿಂದು ಯುವಕ ಮತ್ತು ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸುತ್ತಿದ್ದವರು ಹತ್ತು ದಿನಗಳಿಂದ ನಾಪತ್ತೆಯಾಗಿದ್ದರು. ಇದೀಗ ಯುವ ಜೋಡಿ ಮದುವೆಯಾಗಿ ಪ್ರತ್ಷಕ್ಷರಾಗಿದ್ದು ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದ ನಿವಾಸಿಗಳಾಗಿರುವ ಯುವಕ – ಯುವತಿ ಹತ್ತು ದಿನಗಳಿಂದ ನಾಪತ್ತೆಯಾಗಿದ್ದರು. ಇವರು ಮದುವೆಯಾಗಿರುವ ಸುದ್ದಿಯನ್ನು ಮಂಗಳೂರಿನ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಾಕ್ಕೊಂಡಿದ್ದು ಆಯೆಷಾ ಎಂಬ ಮುಸ್ಲಿಂ ಯುವತಿ ಅಕ್ಷತಾ ಎಂದು ಬದಲಾಗಿರುವುದನ್ನು ಹೇಳಿಕೊಂಡಿದ್ದಾರೆ. ಯುವತಿಯ ಕುಟುಂಬ ಕಾರವಾರ ಮೂಲದವರಾಗಿದ್ದು, ತಂದೆ, ತಾಯಿ ಕಾಟಿಪಳ್ಳದಲ್ಲಿಯೇ ಹಲವು ವರ್ಷಗಳಿಂದ ನೆಲೆಸಿದ್ದರು. ಈ ನಡುವೆ, ಇಬ್ಬರ ನಡುವೆ ಪ್ರೀತಿ ಬೆಳೆದಿದ್ದರೂ ಮದುವೆಗೆ ಧರ್ಮ ಅಡ್ಡಿಯಾಗಿತ್ತು. ಶರಣ್ ಪಂಪ್ವೆಲ್ ತನ್ನ ಫೇಸ್ಬುಕ್ ಪೇಜ್ ನಲ್ಲಿ ಇಬ್ಬರ ಫೋಟೋ ಹಾಕಿ ಮದುವೆ ಬಗ್ಗೆ ಟಾಂ ಟಾಂ ಮಾಡಿದ್ದಕ್ಕೆ ಟೀಕೆಯೂ ಕೇಳಿಬಂದಿದೆ.
ಹುಡುಗ ಪ್ರಶಾಂತ್ ಬಜರಂಗದಳ ಕಾರ್ಯಕರ್ತನಾಗಿದ್ದು, ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಕಾರ್ಯಕರ್ತನ ಕೆಲಸಕ್ಕೆ ಬಜರಂಗದಳ ಕಡೆಯಿಂದ ಶಹಭಾಸ್ ಗಿರಿ ಸಿಕ್ಕಿದ್ದರೆ, ಹುಡುಗ- ಹುಡುಗಿಯ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಜಾಲತಾಣದಲ್ಲಿ ಪರ- ವಿರೋಧ ಚರ್ಚೆಗೆ ಗ್ರಾಸವಾಗಿದೆ. ಯುವಕನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೊಲೆಯತ್ನ ಮತ್ತಿತರ ಕೇಸುಗಳಿದ್ದು, ರೌಡಿ ಲಿಸ್ಟ್ ನಲ್ಲಿಯೂ ಇದ್ದಾನೆ.
ಮುಸ್ಲಿಂ ಯುವಕರು ಹಿಂದು ಯುವತಿಯನ್ನು ಮದುವೆಯಾಗಿ ಅರ್ಧದಲ್ಲಿ ಕೈಬಿಟ್ಟು ಹೋಗುವುದನ್ನು ಬಜರಂಗದಳ ಲವ್ ಜಿಹಾದ್ ಕೃತ್ಯ ಎಂದು ಜರೆಯುತ್ತಿದ್ದರೆ, ಒಳ್ಳೆಯ ರೀತಿಯಲ್ಲಿ ನೋಡಿಕೊಂಡ ಮುಸ್ಲಿಮರೂ ನಮ್ಮ ಸಮಾಜದಲ್ಲಿದ್ದಾರೆ. ಇದೇ ವೇಳೆ, ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾಗಿ ಒಳ್ಳೆಯ ರೀತಿಯಲ್ಲೇ ನೋಡಿಕೊಂಡರೆ ಆ ರೀತಿಯ ಹಣೆಪಟ್ಟಿ ಬರಲಿಕ್ಕಿಲ್ಲ.
Hindu Muslim Marriage Mangalore, Bajrang dal activist marries Muslim girl from Surathkal in Magalore. Sharan Pumpwell share images of both couple which has sparked controversy on social media.
15-01-25 12:19 pm
HK News Desk
Hassan Accident, Mangalore: ಕ್ಯಾಂಟಿನ್ಗೆ ನುಗ್...
14-01-25 03:36 pm
Lakshmi Hebbalkar Car Accident: ಅಡ್ಡ ಬಂದ ನಾಯಿ...
14-01-25 12:32 pm
Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲು...
13-01-25 10:30 pm
Hassan Mangalore Suicide: ಹುಡ್ಗೀರು ಏನ್ಮಾಡಿದ್ರ...
13-01-25 06:21 pm
14-01-25 07:18 pm
HK News Desk
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
ನನ್ನ ಹೆಂಡತಿ ಸುಂದರಿಯಾಗಿದ್ದಾಳೆ, ಅವಳನ್ನು ನೋಡಲು ಇ...
13-01-25 09:58 am
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
15-01-25 12:09 pm
Mangaluru Correspondent
Mangalore News, Savayava Sante: ಫೆಬ್ರವರಿ ತಿಂಗ...
14-01-25 08:36 pm
\MP Brijesh Chowta, Kadaba, Solar Park: ಕಡಬ ತ...
14-01-25 02:27 pm
BJP protest, Mangalore, cow udders row: ಹಸುವ...
13-01-25 09:08 pm
Kadri Kalamele 2025, Mangalore: ಕದ್ರಿ ಕಲಾಮೇಳಕ...
13-01-25 08:43 pm
14-01-25 10:40 pm
HK News Desk
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm