ಬ್ರೇಕಿಂಗ್ ನ್ಯೂಸ್
30-12-23 12:29 pm Mangalore Correspondent ಕರಾವಳಿ
ಉಳ್ಳಾಲ, ಡಿ.30: ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ 16 ಸ್ಥಾನಗಳಲ್ಲಿ ಜಯಿಸಿ ಬಹುಮತ ಗಳಿಸಿ ವಿಜಯಪತಾಕೆ ಹಾರಿಸಿದ್ದು, ಕಾಂಗ್ರೆಸ್ 7 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ.
ರಾಜ್ಯದ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರವು ಪುರಸಭೆಯಾಗಿ ಮೇಲ್ದರ್ಜೆಗೇರಿ ಬರೋಬ್ಬರಿ ನಾಲ್ಕು ವರುಷದ ಬಳಿಕ ಡಿ.27 ರಂದು 23 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಕಳೆದ ಮೂವತ್ತು ವರುಷಗಳಿಂದ ಸೋಮೇಶ್ವರ ಸ್ಥಳೀಯಾಡಳಿತವು ಬಿಜೆಪಿ ವಶದಲ್ಲಿದ್ದು ಇದೀಗ ಮತ್ತೆ ನೂತನ ಸೋಮೇಶ್ವರ ಪುರಸಭೆಯಲ್ಲೂ ಬಿಜೆಪಿ ಬಹುಮತ ಪಡೆದು ಆಡಳಿತ ನಡೆಸಲು ಮುಂದಾಗಿದೆ.
ವಾರ್ಡ್ 1ರಲ್ಲಿ ಕಾಂಗ್ರೆಸ್ ನ ಹಾಮೀನ ಬಶೀರ್, 2ರಲ್ಲಿ ಬಿಜೆಪಿಯ ಯಶವಂತ್, 3ರಲ್ಲಿ ಬಿಜೆಪಿಯ ಸ್ವಪ್ನ ಶೆಟ್ಟಿ, 4ರಲ್ಲಿ ಕಾಂಗ್ರೆಸಿನ ಪುರುಷೋತ್ತಮ್ ಶೆಟ್ಟಿ 5ರಲ್ಲಿ ಬಿಜೆಪಿಯ ಜಯ ಪೂಜಾರಿ, 6ರಲ್ಲಿ ಬಿಜೆಪಿಯ ಮಾಲತಿ ನಾಯ್ಕ್, 7ರಲ್ಲಿ ಬಿಜೆಪಿಯ ಕಮಲಾ ನಾಯಕ್, 8ರಲ್ಲಿ ಬಿಜೆಪಿಯ ಮೋಹನ್ ಶೆಟ್ಟಿ, 9ರಲ್ಲಿ ಕಾಂಗ್ರೆಸಿನ ಪರ್ವಿನ್ ಶಾಜಿದ್, 10ರಲ್ಲಿ ಬಿಜೆಪಿಯ ಮನೋಜ್ ಕಟ್ಟೆಮನೆ, 11ರಲ್ಲಿ ಬಿಜೆಪಿಯ ಹರೀಶ್ ಕುಂಪಲ, 12ರಲ್ಲಿ ಬಿಜೆಪಿಯ ಅನಿಲ್ ಕೊಲ್ಯ, 13ರಲ್ಲಿ ಕಾಂಗ್ರೆಸಿನ ದೀಪಕ್ ಪಿಲಾರ್, 14ರಲ್ಲಿ ಬಿಜೆಪಿಯ ಅಮಿತಾ, 15ರಲ್ಲಿ ಬಿಜೆಪಿಯ ಸೋನಾ ಶುಭಾಷಿನಿ, 16ರಲ್ಲಿ ಬಿಜೆಪಿಯ ಅನಿಲ್, 17ರಲ್ಲಿ ಬಿಜೆಪಿಯ ಪುರುಷೋತ್ತಮ್ ಗಟ್ಟಿ, 18ರಲ್ಲಿ ಬಿಜೆಪಿಯ ರವಿಶಂಕರ್ ಸೋಮೇಶ್ವರ, 19ರಲ್ಲಿ ಬಿಜೆಪಿಯ ಶ್ರೀಲತಾ ದಿನೇಶ್ ಗಟ್ಟಿ, 20ರಲ್ಲಿ ಕಾಂಗ್ರೆಸಿನ ಅಬ್ದುಲ್ ಸಲಾಂ, 21ರಲ್ಲಿ ಕಾಂಗ್ರೆಸ್ನ ರಮ್ಲತ್, 22ರಲ್ಲಿ ಕಾಂಗ್ರೆಸಿನ ತಾಹಿರಾ, 23ರಲ್ಲಿ ಬಿಜೆಪಿಯ ಜಯಶ್ರೀ ಜಯ ಗಳಿಸಿದ್ದಾರೆ.
ವಾರ್ಡ್ ಸಂಖ್ಯೆ 13ರ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಪಿಲಾರ್ ಮತ್ತು ಬಿಜೆಪಿಯ ಅಭ್ಯರ್ಥಿ ರಾಜೇಶ್ ಕುಮಾರ್ ತಲಾ 247 ಮತಗಳನ್ನ ಪಡೆದು ಸಮಬಲ ಸಾಧಿಸಿದ್ದು ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಕೈ ಅಭ್ಯರ್ಥಿ ದೀಪಕ್ ಪಿಲಾರ್ ಅದೃಷ್ಟದ ಜಯ ಸಾಧಿಸಿದರು. ಸ್ಪೀಕರ್ ಯುಟಿ ಖಾದರ್ ಪ್ರತಿನಿಧಿಸುವ ಉಳ್ಳಾಲ ಕ್ಷೇತ್ರದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ.
ಪತ್ನಿಗೆ ಗೆಲುವು, ಪತಿಗೆ ಒಂದು ಮತದಲ್ಲಿ ಸೋಲು !
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ದಂಪತಿ ಪೈಕಿ ಪತ್ನಿ ಜಯಶಾಲಿಯಾದರೆ, ಪತಿ ಒಂದು ಮತದ ಅಂತರದಲ್ಲಿ ಸೋಲನುಭವಿಸಿದ್ದಾರೆ. ಒಂದನೇ ಮುಂಡೋಳಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೀನಾ ಬಶೀರ್ ಬಿಜೆಪಿ ಅಭ್ಯರ್ಥಿ ಸುನಿತಾ ರಾಜೇಶ್ ಎದುರು 271 ಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. 2ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಅಮೀನಾ ಅವರ ಪತಿ ಬಶೀರ್ ಮುಂಡೋಳಿ ಅವರು ಬಿಜೆಪಿಯ ಯಶವಂತ್ ಪ್ರಕಾಶ್ ನಗರ ಎದುರು ಒಂದು ಮತದ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.
Mangalore BJP wins Someshwara town municipal council election having 16 seats and Congres with 7 seats. While the BJP has fielded its candidates from all 23 wards, Congress has contested from 22 wards. The polling was held in Government Higher Primary School and High School at Kumpala, St Mary’s English Medium School, Uchila Bovi English medium school, Anandashram School and Pilar Government Higher Primary School.
01-08-25 02:55 pm
Bangalore Correspondent
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 04:27 pm
HK News Desk
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm