ಬ್ರೇಕಿಂಗ್ ನ್ಯೂಸ್
26-02-24 10:03 pm Udupi Correspondent ಕರಾವಳಿ
ಉಡುಪಿ, ಫೆ.26: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಂಡು ಕೇಳರಿಯದ ಮತ್ಸ್ಯಕ್ಷಾಮ ಎದುರಾಗಿದೆ. ಬೋಟ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಗದೆ ಹೆಚ್ಚಿನ ಬೋಟ್‌ಗಳು ಲಂಗರು ಹಾಕಿವೆ. ನಷ್ಟದ ಹೊರೆ ತಪ್ಪಿಸುವುದಕ್ಕೆ ಮೀನುಗಾರಿಕೆಯ ಋುತುವಿನಲ್ಲೇ ಅಘೋಷಿತ ರಜೆ ಘೋಷಣೆಯಾಗಿದೆ.
ಹಿಂದೆಲ್ಲ ಆಳ ಸಮುದ್ರ ಮೀನುಗಾರಿಕೆಗೆ ಕನಿಷ್ಠ ನಾಲ್ಕು ತಿಂಗಳು ರಜೆ ಇರುತ್ತಿತ್ತು. ಮೀನುಗಳು ಸಂತಾನಾಭಿವೃದ್ಧಿ ನಡೆಸುವ ಮಳೆಗಾಲದಲ್ಲಂತೂ ಮೀನುಗಾರಿಕೆ ಸುತಾರಾಂ ನಡೆಯುತ್ತಿರಲಿಲ್ಲ. ಈ ಸಂಪ್ರದಾಯ ಈಗ ಉಲ್ಲಂಘನೆಯಾಗಿದೆ. ರಜಾ ಅವಧಿ ಎರಡು ತಿಂಗಳಿಗೆ ಮೊಟಕುಗೊಂಡಿದೆ. ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಭೀಕರ ಪೆಟ್ಟು ನೀಡುತ್ತಿದೆ. ಮೀನುಗಳ ಸಂತಾನಾಭಿವೃದ್ಧಿಗೆ ಪೆಟ್ಟು ಬಿದ್ದಿದ್ದು, ಮತ್ಸ್ಯಕ್ಷಾಮಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ತಜ್ಞರು. ಹವಾಮಾನ ವೈಪರೀತ್ಯವೂ ಗಾಯದ ಮೇಲೆ ಬರೆ ಎಳೆದಿದೆ.
ಪರಿಸ್ಥಿತಿ ಸುಧಾರಿಸದಿದ್ದರೆ ಮುಂದಿನ ಕೆಲವು ವರ್ಷಗಳಲ್ಲಿ ಸಮುದ್ರದಲ್ಲಿ ಮತ್ಸ್ಯ ಸಂಪತ್ತೇ ಬರಿದಾಗಲಿದೆ. ಕಡಲಿನ ಪರಿಸರ ವ್ಯವಸ್ಥೆ ಸಂರಕ್ಷಿಸದೇ ಇದ್ದರೆ ಸಮುದ್ರ ಆಹಾರ ಕಳೆದುಕೊಳ್ಳುತ್ತೇವೆ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಎಚ್ಚರಿಸಿದೆ. ಮಿತಿಮೀರಿದ ಮೀನುಗಾರಿಕೆಯಿಂದ ಶಾರ್ಕ್ ಸಹಿತ ಅಪರೂಪದ ಮೀನಿನ ತಳಿಗಳು ಅಳಿವಿನಂಚಿಗೆ ತಲುಪಿವೆ. ಮಿತಿಮೀರಿದ ಮೀನುಗಾರಿಕೆ ತಡೆಯಲು ಸರಕಾರಗಳು ಮತ್ತು ಪ್ರಾದೇಶಿಕ ಮೀನುಗಾರಿಕೆ ಸಂಸ್ಥೆಗಳು ಮುತುವರ್ಜಿ ವಹಿಸಬೇಕೆಂದು ಸಂಸ್ಥೆ ಸಲಹೆ ಮಾಡಿದೆ.
ಆಗಸ್ಟ್‌ನಿಂದ ಡಿಸೆಂಬರ್ ವರೆಗಿನ ಅವಧಿಯು ಮೀನುಗಾರರಿಗೆ ಸುಗ್ಗಿ ಸಂದರ್ಭ. ಆದರೆ ಈ ಬಾರಿ ಅಲ್ಪಪ್ರಮಾಣದ ಬಂಗುಡೆ ಬಿಟ್ಟರೆ ಬೂತಾಯಿ, ಪಾಂಪ್ಲೆಟ್, ಅಂಜಲ್ ತೀರಾ ಅಪರೂಪ. ಬಿಳಿ ಅಂಜಲ್ ಕಂಡಿಲ್ಲಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ.
ಕರ್ನಾಟಕ ರಾಜ್ಯವು ಕರಾವಳಿ, ಹಿನ್ನೀರು ಹಾಗೂ ಒಳನಾಡು ಮೀನುಗಾರಿಕೆ ಸಂಪನ್ಮೂಲಗಳನ್ನು ಹೊಂದಿದ್ದು, ಕೃಷಿಯ ಒಟ್ಟು ಅಂತರಿಕ ಉತ್ಪನ್ನಕ್ಕೆ ಈ ವಲಯದ ಕೊಡುಗೆ ಶೇ. 4-5 ರಷ್ಟಿರುತ್ತದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.0.7ರಷ್ಟಿದೆ. ಕರ್ನಾಟಕ ಒಳನಾಡು ಮೀನು ಉತ್ಪಾದನೆಯಲ್ಲಿ7ನೇ ಸ್ಥಾನ ಹಾಗೂ ಕರಾವಳಿ ಮೀನು ಉತ್ಪಾದನೆಯಲ್ಲಿ3ನೇ ಸ್ಥಾನದಲ್ಲಿದ್ದು, ಒಟ್ಟು ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ.
2022-23 ನೇ ಸಾಲಿನಲ್ಲಿ12.25 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದಿಸಲಾಗಿದೆ. ರಾಜ್ಯದಿಂದ 3761.55 ಕೋಟಿ ಮೌಲ್ಯದ 2.27 ಲಕ್ಷ ಮೆಟ್ರಿಕ್ ಟನ್ ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಕರಾವಳಿಯಲ್ಲಿ ಸರಕಾರಿ ಅಂಕಿ ಅಂಶದ ಪ್ರಕಾರ 4765 ಯಾಂತ್ರೀಕೃತ ದೋಣಿಗಳು, 10770 ಮೋಟರೀಕೃತ ದೋಣಿಗಳು ಹಾಗೂ 15,122 ನಾಡದೋಣಿಗಳು ಕಾರ್ಯಾಚರಿಸುತ್ತಿವೆ. ರಾಜ್ಯದಲ್ಲಿ9 ಮೀನುಗಾರಿಕೆ ಬಂದರುಗಳು ಮತ್ತು 25 ಮೀನುಗಾರಿಕೆ ಇಳಿದಾಣ ಕೇಂದ್ರಗಳಿವೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 176ಕ್ಕೂ ಅಧಿಕ ಮಂಜುಗಡ್ಡೆ ಸ್ಥಾವರ ಇವೆ. ಕಳೆದ 3 ವರ್ಷಗಳ ಹಿಂದೆ ಇವುಗಳ ಸಂಖ್ಯೆ 200 ಆಗಿತ್ತು. ಮತ್ಸ್ಯಕ್ಷಾಮ, ವಿದ್ಯುತ್ ಬಿಲ್, ಕಚ್ಛಾವಸ್ತುಗಳ ಬೆಲೆಯೇರಿಕೆಯಿಂದಾಗಿ ಮಂಜುಗಡ್ಡೆ ಸ್ಥಾವರಗಳ ಸಂಖ್ಯೆ ಕುಗ್ಗಿವೆ. ನಿತ್ಯ 30ರಿಂದ 50 ಟನ್‌ಗಳಷ್ಟು ಮಂಜುಗಡ್ಡೆಯನ್ನು ಸ್ಥಾವರಗಳಲ್ಲಿ ತಯಾರಿಸಲಾಗುತ್ತಿತ್ತು ಎನ್ನುತ್ತಾರೆ ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್.
ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಸಹಿತ ಅನೇಕ ಅವೈಜ್ಞಾನಿಕ ಮೀನುಗಾರಿಕೆಯ ಪರಿಣಾಮವನ್ನು ಅರ್ಥೈಸಿಕೊಂಡಿದ್ದ ಕೆಲ ಮೀನುಗಾರರು ಕೋರ್ಟ್‌ನ ಮೊರೆ ಹೋಗಿದ್ದು, ಅವೈಜ್ಞಾನಿಕ ಮೀನುಗಾರಿಕೆ ನಿಲ್ಲಿಸುವಂತೆ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಇದು ದುರಂತ. ದುರಾಸೆಗೆ ಬಿದ್ದು ಜಲಸಂಪತ್ತನ್ನು ಖಾಲಿ ಮಾಡುತ್ತಿದ್ದೇವೆ. 5-6 ವರ್ಷಗಳಿಂದ ಮತ್ಸ್ಯ ಸಂಪತ್ತು ಬರಿದಾಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಮೀನುಗಾರಿಕೆ ಇಲಾಖೆ ಮತ್ತು ಮೀನುಗಾರರು ಸಮನ್ವಯತೆಯಿಂದ ಕಾನೂನು ಪಾಲನೆ ಮಾಡುವುದು ಅನಿವಾರ್ಯವಾಗಿದೆ ಎಂದು ಮೀನುಗಾರಿಕಾ ಫೆಡರೇಶನ್‌ನ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಕಳಕಳಿಯಿಂದ ಕೇಳಿದ್ದಾರೆ. (ಕೃಪೆ ; ವಿಜಯಕರ್ನಾಟಕ ವರದಿ)
Udupi, Dakshina Kannada and Uttara Kannada districts are facing an unprecedented fish shortage this year as compared to the last four to five years. Most of the boats are anchored as the boats do not get the expected quantity of fish. An undeclared holiday has been declared during the fishing season itself to avoid the burden of losses.
25-12-25 12:12 pm
HK News Desk
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
ಗಾಳಿಯಲ್ಲಿ ಗುಂಡು ಹಾರಿಸಿ ಉಡಚಣ ಸ್ವಾಮೀಜಿ ರಂಪಾಟ ;...
22-12-25 11:09 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm