ಬ್ರೇಕಿಂಗ್ ನ್ಯೂಸ್
02-04-24 10:15 pm Mangalore Correspondent ಕರಾವಳಿ
ಪುತ್ತೂರು, ಎ.2: ಪುತ್ತೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮೈಸೂರು ಸಂಸದ ಪ್ರತಾಪಸಿಂಹ ಅವರು, ತನ್ನಂತೆಯೇ ಸೀಟು ಕಳಕೊಂಡ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಹಾಡಿ ಹೊಗಳಿದ್ದಾರೆ. ನಾವು ಪಾರ್ಟಿ-ಗೀರ್ಟಿಯಾದರೂ ಮಾಡ್ತಾ ಇದ್ವಿ.. ಆದರೆ ನಳಿನಣ್ಣ ಡೆಲ್ಲಿಗೆ ಬಂದ್ರೂ ಗಂಜಿ ಊಟ, ಬೆಂಗಳೂರಿಗೆ ಬಂದ್ರೂ ಗಂಜಿ ಊಟ. ನಿಮ್ಮ ಜೀವನದಲ್ಲಿ ಒಳ್ಳೆ ಬಟ್ಟೆ ಹಾಕಲಿಲ್ಲ, ಓಡಾಡ್ಲಿಲ್ಲ.
ಯಾವಾಗಲೂ ಯಕ್ಷಗಾನ, ನಾಗಮಂಡಲ ಕಾರ್ಯಕ್ರಮಗಳು ಅಂತ ಓಡಾಡ್ತಾನೆ ಇದ್ರು. ಒಬ್ಬ ಶಾಸಕ , ಸಂಸದನಾಗೋದು ಸುಲಭ ಇಲ್ಲ, ಅವರ ಹೆಂಡತಿ ಮಕ್ಕಳತ್ರ ಅವರ ಕಷ್ಟ ಕೇಳಬೇಕು. 2013ರಲ್ಲಿ ಎಲ್ಲಾ ಕಡೆ ಬಿಜೆಪಿ ಖಾಲಿಯಾಗ್ತಾ ಹೋಯ್ತು, ಶಾಸಕರೇ ಇಲ್ಲದ ಹಾಗೆ ಆಗಿ ಹೋಯ್ತು. ಆ ಸಂದರ್ಭದಲ್ಲಿಯೂ ನಳಿನ್ ಕುಮಾರ್ ಕಟೀಲ್ ಒಬ್ಬರೇ ನಿಂತು ಓಡಾಡಿದ್ದಾರೆ. ಒಬ್ಬ ಮನುಷ್ಯ ಎಷ್ಟು ಓಡಾಟ ನಡೆಸಬಹುದು ನೀವೇ ಯೋಚನೆ ಮಾಡಿ. ಅವರ ಅವಧಿಯಲ್ಲಿ 18,000 ಕೋಟಿ ರೂಪಾಯಿ ಕೇವಲ ರಸ್ತೆ ಕಾಮಗಾರಿಗಾಗಿ ತಂದಿದ್ದಾರೆ.
ನಳಿನ್ ಕುಮಾರ್ ಬರೋ ಮುಂಚೆ ಎಷ್ಟು ರಸ್ತೆ ನಿರ್ಮಾಣವಾಗಿತ್ತು? ನೀವೇ ಯೋಚನೆ ಮಾಡಿ. 2009 ರಿಂದ 2013 ರ ತನಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗ ಪಕ್ಷ ಕಟ್ಟೋದು ಬಿಟ್ರೆ ಅಭಿವೃದ್ಧಿ ಮಾಡೋದಕ್ಕೆ ಸಾಧ್ಯವಿರಲಿಲ್ಲ. ಆ ಸಂದರ್ಭದಲ್ಲೂ ನಳಿನ್ ಕುಮಾರ್ ಕಟೀಲ್ ಹೋರಾಟ ಮಾಡಿದ್ರು.
ಆದರೆ ನಳಿನ್ ಅಣ್ಣ ಸಾವಿರಾರು ಜನರ ಬೈಗುಳ ತಿಂದಿದ್ದಾರೆ. ಪಂಪ್ ವೆಲ್ ಪಂಪವೆಲ್ ಅಂತ ಎಷ್ಟೆಷ್ಟು ಮೀಮ್ಸ್ ಮಾಡಿ ಬೈದ್ರಿ.. ಪಂಪ್ ವೆಲ್ ಯಾರ ಪಾಪದ ಕೂಸು ನಿಮಗೆ ಗೊತ್ತಾ? ಯುಪಿಎ ಬಿಓಟಿ ಮಾಡೆಲ್ ಪರಿಣಾಮ ಕೆಲಸ ವಿಳಂಬವಾಗಿತ್ತು. ನವಯುಗ ಕನ್ಸ್ಟ್ರಕ್ಷನ್ಸ್ ಸರಿಯಾಗಿ ಕೆಲಸ ಮಾಡ್ಲಿಲ್ಲ. ಆದರೆ ನೀವು ಬೆಳಗಾನ ಎದ್ದು ನಳಿನ್ ಅಣ್ಣನ್ನ ಬೈತಿದ್ರಿ. ಅಲ್ಲಿ ನೀರು ನಿಲ್ತು ಅಂದ್ರೆ ನಳಿನ್ ಅಣ್ಣಂಗೆ ಬೈಗುಳ, ಎಲ್ಲದಕ್ಕೂ ನಳಿನ್ ಅಣ್ಣನ್ನ ಬೈತಿದ್ರಿ..
15 ವರ್ಷ ನಳಿನ್ ಗೆ ಹೂವಿನ ಹಾಸಿಗೆಯಾಗಿರಲಿಲ್ಲ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಕಾಲೇಜಿಗೆ ಹೋಗ್ತಾಯಿದ್ದಾರೆ. ಅವರ ಅಪ್ಪನ ಅನುಪಸ್ಥಿತಿಯಲ್ಲೇ ಬೆಳೆದು ಬಿಟ್ಟಿದ್ದಾರೆ. ಅವರೊಬ್ಬ ಅಪ್ಪ ಆಗಿ ಅವರ ಕರ್ತವ್ಯವನ್ನ ಮಾಡಲಾಗಲಿಲ್ಲ. ಇವತ್ತು ಬೇರೊಬ್ಬ ಅಭ್ಯರ್ಥಿಗೆ ಅವಕಾಶ ಆಗಿದ್ರೂ ನಳಿನ್ ಕುಮಾರ್ ಕಟೀಲ್ ತೆಪ್ಪಗೆ ಪಕ್ಷ ಹೇಳಿದ್ದನ್ನು ಕೇಳಿ ಜೊತೆಗೆ ನಿಂತಿದ್ದಾರೆ. ಅವರೇನು ಕಷ್ಟ ಪಟ್ಟಿದ್ದಾರೆ, ಅದಕ್ಕೆ ಕಿಂಚಿತ್ತೂ ಸಹನಾಭೂತಿಯಾದ್ರು ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಭರ್ಜರಿಯಾಗಿ ನಳಿನ್ ಪರವಾಗಿ ಭಾಷಣ ಮಾಡಿದ್ದಾರೆ.
ಸಂಸದನಾಗಿರುವ ಮಧ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ಮಾಡಿದ್ದರು. ಅವರ ಓಡಾಟ ಕಂಡು ನಿಮಗೆ ಹುಚ್ಚು ಹಿಡಿದಿದ್ಯಾ ಅಂತ ನಾನೇ ಕೇಳ್ತಾ ಇದ್ದೆ. ಆದರೆ ಅವರು ಪಕ್ಷ ಕಟ್ಟಬೇಕು, ಪಕ್ಷದ ಪರಿಸ್ಥಿತಿ ಹೀಗಿದೆ ಅಂತಾ ಇದ್ರು. ನಮ್ಮ ಬಿಜೆಪಿ ಪಕ್ಷ ಕಟ್ಟಿದ ಹಿರಿಯ ನಾಯಕರು ಜೀವಿತಾವಧಿಯಲ್ಲಿ ಮಾಡಿದ ಓಡಾಟವನ್ನ ನಳಿನ್ ಕುಮಾರ್ ಕಟೀಲ್ ಕೇವಲ ರಾಜ್ಯಾಧ್ಯಕ್ಷರಾಗಿದ್ದ ನಾಲ್ಕು ವರ್ಷದಲ್ಲಿ ಮಾಡಿದ್ದಾರೆ. ಒಬ್ಬ ಮನುಷ್ಯನಿಂದ ಸಂಘಟನೆ ಬಹಳಷ್ಟು ನಿರೀಕ್ಷೆ ಮಾಡಿದಾಗ ಅದೇ ಸಂಘಟನೆ ಅವರನ್ನ ಇಡೀ ರಾಜ್ಯವನ್ನ ಸಂಘಟನೆ ಮಾಡೋದಕ್ಕೆ ಕಳುಹಿಸುತ್ತೆ. ನಳಿನ್ ಕುಮಾರ್ ಸ್ಥಿತಿಯೂ ಆದೇ ಆಗಿ ಬಿಟ್ಟಿತ್ತು. ಇನ್ನು ಮುಂದೆಯಾದರೂ ನಳಿನ್ ಕುಮಾರ್ ಕಟೀಲ್ ಮೇಲೆ ನಾವು ಸಹಾನುಭೂತಿ ಇಟ್ಟುಕೊಳ್ಳಬೇಕಾಗುತ್ತೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಯಾವ ರೀತಿ ಟೀಕೆ ಮಾಡಿದ್ರಿ ಹಾಗೆ ಮಾಡಬೇಡಿ. ಹೊಸ ಅಭ್ಯರ್ಥಿ ಬ್ರಿಜೇಶ್ ಚೌಟಾಗೆ ಕ್ಷೇತ್ರವನ್ನ ಅರ್ಥ ಮಾಡಿಕೊಳ್ಳೋದಕ್ಕೆ ಅವಕಾಶ ಕೊಡಿ ಎಂದು ಹೇಳಿದರು.
ಅರುಣ್ ಪುತ್ತಿಲಗೆ ಟಾಂಗ್ ಇಟ್ಟ ಪ್ರತಾಪ !
ಇದೇ ಸಮಾವೇಶದಲ್ಲಿ ಪುತ್ತೂರಿನಲ್ಲಿ ರೆಬಲ್ ನಾಯಕರಾಗಿದ್ದ ಅರುಣ್ ಪುತ್ತಿಲ ಅವರಿಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದು ನಾವು ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ, ಪಕ್ಷವೇ ದೊಡ್ಡದು. ನಾವು ವೈಯುಕ್ತಿಕವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಅಂತ ಹೊರಟಿದ್ರೆ ಮೈಸೂರಲ್ಲಿ ನಾನೂ ಶಕ್ತಿ ಪ್ರದರ್ಶನ ಮಾಡ್ತಿದ್ದೆ. ಅರುಣ್ ಕುಮಾರ್ ಪುತ್ತಿಲರವರೇ, ನೀವು ಪುತ್ತೂರಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನ ಮೈಸೂರಲ್ಲಿ ಮಾಡೋ ಅಷ್ಟೇ ಶಕ್ತಿ ನನ್ನತ್ರನೂ ಇದೆ. ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡ್ಲಿಲ್ಲ, ಯಾಕಂದ್ರೆ ನಮಗೆ ಪಕ್ಷ ನಿಷ್ಠೆ ಮುಖ್ಯ. ಸಂಘಟನೆಯೇ ಸೆಟೆದು ನಿಂತು ಒಬ್ಬ ವ್ಯಕ್ತಿಯ ಪರವಾಗಿ ನಿಂತ ಕ್ಷೇತ್ರ ಇದ್ರೆ ಅದು ಪುತ್ತೂರು. ಅಷ್ಟು ಪ್ರೀತಿ ವಿಶ್ವಾಸವನ್ನ ನೀವು ಕಾರ್ಯಕರ್ತರ ಜೊತೆ ಬೆಳೆಸಿಕೊಂಡಿದ್ದೀರಿ ಎಂದು ಹೇಳಿದರು.
Pratap Simha praises glorifes Nalin Kateel and his work at BJP meeting held in puttur. Pratap Simha praised kateel said he had to get trolled for Pumpwell bridge and so on.
21-01-25 10:59 pm
HK News Desk
BJP MLA BP Harish, B. Y. Vijayendra, Yatnal:...
20-01-25 07:00 pm
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
21-01-25 11:02 pm
HK News Desk
ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್ಗಳ ನಿರಂತ...
19-01-25 08:17 pm
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
21-01-25 11:51 pm
Mangalore Correspondent
Mangalore Praveen Nettaru murder case, NIA ar...
21-01-25 09:43 pm
Mangalore University, Phd courses: ಪಿಎಚ್ ಡಿ ಪ...
21-01-25 08:11 pm
Mangalore Kotekar bank robbery, president: 15...
21-01-25 07:43 pm
Mangalore Kotekar Bank Robbery, Accused Photo...
21-01-25 12:21 pm
21-01-25 06:00 pm
Mangaluru Correspondent
Hubballi Bank Robbery, Kotekar, Bidar: ಬೀದರ್...
20-01-25 10:18 pm
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm