ರಾತ್ರಿ ಮಲಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

04-12-20 01:59 pm       Mangalore Correspondent   ಕರಾವಳಿ

ಯುವಕನೊಬ್ಬ ಮನನೊಂದು ಗೇರುಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆಮ್ಮುಂಡೇಲು ಉಳ್ಳೂರು ಎಂಬಲ್ಲಿ ನಡೆದಿದೆ.

ಪಡುಬಿದ್ರಿ, ಡಿ.3 :  ಯುವಕನೊಬ್ಬ ಮನನೊಂದು ಮನೆ ಸಮೀಪದ ಗೇರುಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೂರು ಗ್ರಾಮದ ಕೆಮ್ಮುಂಡೇಲು ಉಳ್ಳೂರು ಎಂಬಲ್ಲಿ ನಡೆದಿದೆ.

ಇಲ್ಲಿನ ಮಂಜುನಾಥ ಆಚಾರ್ಯ ಎಂಬವರ ಪುತ್ರ ಶಿವಾನಂದ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಡಿ.2ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ.

ಬಳಿಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿ ಮನೆಗೆ ಮರಳಿದ್ದು ರಾತ್ರಿ ಊಟ ಮಾಡಿ ಮಲಗಿದ್ದ. ಆದರೆ ಬೆಳಗ್ಗೆ ಕಾಣಿಸದೇ ಇದ್ದಾಗ ಮನೆಯವರು ಹುಡುಕಾಡಿದ್ದು ಮನೆ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

A Young You committed Suicide due to Depression. The deceased has been identified as Shivanand (23) from Padubidri.