ಬ್ರೇಕಿಂಗ್ ನ್ಯೂಸ್
10-06-25 07:55 pm Mangalore Correspondent ಕರಾವಳಿ
ಮಂಗಳೂರು, ಜೂನ್ 10 : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ನಾಯಕರಾದ ಶಾಹುಲ್ ಹಮೀದ್ ಮತ್ತು ಕೆ. ಅಶ್ರಫ್ ವಿರುದ್ಧ ಮತ್ತೊಮ್ಮೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಮೇ 31ರಂದು ನೋಟೀಸ್ ನೀಡಿದ್ದಕ್ಕೆ ಉತ್ತರ ನೀಡಿಲ್ಲವೆಂದು ಎರಡನೇ ಬಾರಿಗೆ ನೋಟಿಸ್ ಕೊಟ್ಟಿದ್ದು ಇದಕ್ಕೆ ಉತ್ತರ ನೀಡದೇ ಇದ್ದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೂಚನೆಯಂತೆ, ಜಿಲ್ಲಾ ಕಾರ್ಯದರ್ಶಿ ಟಿ.ಡಿ. ವಿಕಾಸ್ ಶೆಟ್ಟಿ ಮತ್ತೆ ನೋಟೀಸ್ ನೀಡಿದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ ಕಾರಣ ಕೇಳಿ ಉತ್ತರಿಸಲು ಏಳು ದಿನದ ಅವಕಾಶ ನೀಡಲಾಗಿತ್ತು. ಆದರೆ ತಾವು ಪಕ್ಷದ ನೋಟಿಸಿಗೆ ಇದುವರೆಗೆ ಉತ್ತರ ನೀಡಿಲ್ಲ. ಅಲ್ಲದೆ, ನೋಟೀಸನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿ ಪ್ರಶ್ನೆ ಮಾಡಿರುತ್ತೀರಿ. ಇದರಿಂದ ನೀವು ಮತ್ತಷ್ಟು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಕಂಡುಬರುತ್ತದೆ. ಈ ನೋಟೀಸಿಗೆ ಉತ್ತರಿಸಲು ನಿಮಗೆ ಮತ್ತೆ ಐದು ದಿನದ ಕಾಲಾವಕಾಶ ನೀಡಲಾಗುವುದು. ಇದಕ್ಕೂ ತಮ್ಮ ಪ್ರತಿಕ್ರಿಯ ಲಭಿಸದೇ ಇದ್ದಲ್ಲಿ ಈ ನೋಟೀಸಿಗೆ ತಮ್ಮ ಸಮ್ಮತಿ ಇದೆಯೆಂದು ಭಾವಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಅಬ್ದುಲ್ ರಹಿಮಾನ್ ಕೊಲೆಯಾದ ಸಂದರ್ಭದಲ್ಲಿ ಮಂಗಳೂರಿನ ಶಾದಿ ಮಹಲ್ ಹಾಲ್ ನಲ್ಲಿ ಸೇರಿದ್ದ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದರಲ್ಲದೆ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ಹುದ್ದೆಗೆ ರಾಜಿನಾಮೆ ನೀಡುವುದಾಗಿ ಹೇಳಿ ಸಭೆಯಲ್ಲೇ ರಾಜಿನಾಮೆ ಘೋಷಣೆ ಮಾಡಿದ್ದರು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ. ಅಶ್ರಫ್, ಎಂ.ಎಸ್ ಮಹಮ್ಮದ್ ಮತ್ತಿತರರು ಸಭೆಯಲ್ಲಿದ್ದರು. ಆದರೆ ಸಭೆಯನ್ನು ಶಾಹುಲ್ ಹಮೀದ್ ನೇತೃತ್ವದಲ್ಲೇ ಕರೆಯಲಾಗಿತ್ತು ಎನ್ನುವ ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಆರೋಪಿಸಿ ಇಬ್ಬರಿಗೆ ಮಾತ್ರ ನೋಟಿಸ್ ನೀಡಲಾಗಿತ್ತು.
ಆನಂತರ, ಕೆಪಿಸಿಸಿ ಕಡೆಯಿಂದ ಬಂದಿದ್ದ ನಾಸಿರ್ ಹುಸೇನ್ ಮತ್ತು ಸಿಎಂ ಸೂಚನೆಯಂತೆ ಅಲ್ಪಸಂಖ್ಯಾತ ಮುಖಂಡರನ್ನು ಭೇಟಿಯಾಗಲು ಬಂದಿದ್ದ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್, ಜಿಲ್ಲಾ ಕಾಂಗ್ರೆಸಿನ ನೋಟೀಸಿಗೆ ಉತ್ತರ ನೀಡುವುದು ಬೇಡ. ಅದನ್ನು ಕೆಪಿಸಿಸಿ ಮಟ್ಟದಲ್ಲಿ ಮಾತನಾಡಿ ಸರಿಪಡಿಸುವುದಾಗಿಯೂ ಭರವಸೆ ನೀಡಿದ್ದರು. ಹಾಗಿದ್ದರೂ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತೊಮ್ಮೆ ನೋಟೀಸ್ ನೀಡಿದ್ದು, ಅಲ್ಪಸಂಖ್ಯಾತ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಸಿಟ್ಟಾಗಿಸಿದೆ. ಆದರೆ ಇದರ ಹಿಂದೆ ಜಿಲ್ಲಾ ಕಾಂಗ್ರೆಸಿನ ಮೂಗುದಾರ ತನ್ನ ಕೈಯಲ್ಲೇ ಇರಬೇಕು ಎನ್ನುವ ಪ್ರಭಾವಿ ನಾಯಕರ ಚಿತಾವಣೆ ಇದೆ ಎನ್ನಲಾಗುತ್ತಿದೆ.
ಬಿಕೆ ಹರಿಪ್ರಸಾದ್ ಜಿಲ್ಲೆಗೆ ಬಂದು ಅಲ್ಪಸಂಖ್ಯಾತ ಮುಖಂಡರ ವಿಶ್ವಾಸ ಪಡೆದು ಹೋದಲ್ಲಿ ಜಿಲ್ಲಾ ಕಾಂಗ್ರೆಸ್ ಮೂಗುದಾರ ಅವರಿಗೆ ಬಿಟ್ಟುಕೊಟ್ಟಂತೆ ಆಗುತ್ತದೆ ಎನ್ನುವ ದೂರಗಾಮಿ ಕಲ್ಪನೆ ಇದರ ಹಿಂದೆ ಕೆಲಸ ಮಾಡಿದೆ. ಹೀಗಾಗಿ ಜಿಲ್ಲೆಯ ಹಿಡಿತವನ್ನು ಉಸ್ತುವಾರಿ ಮೂಲಕ ತನ್ನಲ್ಲೇ ಇಟ್ಟುಕೊಂಡಿರುವ ಪ್ರಭಾವಿ ನಾಯಕರೊಬ್ಬರು ಜಿಲ್ಲಾ ಕಾಂಗ್ರೆಸಿನಿಂದ ಮತ್ತೊಮ್ಮೆ ನೋಟೀಸ್ ಕೊಡಿಸಿ, ಅಲ್ಪಸಂಖ್ಯಾತ ಮುಖಂಡರು ಏನಿದ್ದರೂ ತನ್ನಲ್ಲಿಗೇ ಬರುವಂತೆ ಮಾಡಬೇಕು ಎನ್ನುವ ಹಿಡನ್ ಅಜೆಂಡಾವನ್ನು ಜಾರಿಗೊಳಿಸಿದ್ದಾರೆ. ತನ್ನ ನೇಪಥ್ಯದಲ್ಲಿ ಹಲವು ಬೆಳವಣಿಗೆ ಆಗಿದ್ದರೂ ಜಿಲ್ಲೆಯ ಹಿಡಿತವನ್ನು ತಾನೇ ಇಟ್ಟುಕೊಳ್ಳುವುದರಲ್ಲಿ ಆ ವ್ಯಕ್ತಿ ಮತ್ತೊಮ್ಮೆ ನೋಟಿಸ್ ಕೊಡಿಸುವ ಮೂಲಕ ಯಶಸ್ಸು ಕಂಡಿದ್ದಾರೆ ಎನ್ನಲಾಗುತ್ತಿದೆ.
ಬಿಕೆ ಮತ್ತು ಡಿಕೆ ಹಿಡಿಸಿದ್ದು ಯಾರು ?
ಕೊಲೆ ಸರಣಿ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉಸ್ತುವಾರಿ ದಿನೇಶ್ ಗುಂಡೂರಾವ್ ಹೊರತಾಗಿ ಬಿಕೆ ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಕಳಿಸಿಕೊಟ್ಟಿದ್ದೂ ಕೆಲವು ನಾಯಕರ ಕಣ್ಣು ಕೆಂಪಾಗಿಸಿತ್ತು. ಮೊದಲೇ ದಿನೇಶ್ ಗುಂಡೂರಾವ್ ಮತ್ತು ಹರಿಪ್ರಸಾದ್ ಸಂಬಂಧ ಅಷ್ಟಕ್ಕಷ್ಟೇ. ಹರಿಪ್ರಸಾದ್ ಮೇಲೆ ಮುಖ್ಯಮಂತ್ರಿ ಹೊಸ ಟಾಸ್ಕ್ ಕೊಟ್ಟಿದ್ದು ಸರಕಾರದ ಮಟ್ಟದಲ್ಲಿ ಉಸ್ತುವಾರಿ ಸಚಿವ ವಿಫಲ ಎನ್ನುವಂತೆ ಬಿಂಬಿಸಿದಂತಾಗಿತ್ತು. ಹೀಗಾಗಿ ಪ್ರಭಾವಿ ಸಚಿವನಾಗಿದ್ದರೂ ತನ್ನನ್ನು ಕಡೆಗಣಿಸಿ ಹರಿಪ್ರಸಾದ್ ಅವರನ್ನು ಜಿಲ್ಲೆಗೆ ಕಳಿಸಿಕೊಟ್ಟಿದ್ದು ದಿನೇಶ್ ಗುಂಡೂರಾವ್ ಅವರಿಗೂ ಅತೃಪ್ತಿ ತಂದಿತ್ತು. ಇದೇ ಕಾರಣಕ್ಕೆ ಅಲ್ಪಸಂಖ್ಯಾತ ಮುಖಂಡರು ರಾಜಿನಾಮೆ ನೀಡುತ್ತಿದ್ದರೂ, ಅದಕ್ಕೂ ತನಗೂ ಸಂಬಂಧ ಇಲ್ಲ. ತಾನು ರಾಜ್ಯ ಸರಕಾರದ ಪ್ರತಿನಿಧಿಯಾಗಿ ಬಂದಿದ್ದೇನೆ ಎಂದು ಗುಂಡೂರಾವ್ ಪ್ರತಿಕ್ರಿಯಿಸಿದ್ದರು.
ಉಸ್ತುವಾರಿ ಸಚಿವರ ಅತೃಪ್ತಿಯನ್ನೇ ಬಂಡವಾಳ ಮಾಡಿಕೊಂಡ ಜಿಲ್ಲೆಯ ಅತಿ ಪ್ರಭಾವಿ ನಾಯಕರೊಬ್ಬರು ಮತ್ತೆ ಕೈಯಾಡಿಸಿದ್ದು, ಜಿಲ್ಲಾ ಕಾಂಗ್ರೆಸ್ ತನ್ನದೇ ಹಿಡಿತದಲ್ಲಿದೆ ಎನ್ನುವುದನ್ನು ತೋರಿಸಿಕೊಳ್ಳಲು ಅಲ್ಪಸಂಖ್ಯಾತ ನಾಯಕರಿಗೆ ಮತ್ತೊಮ್ಮೆ ನೋಟೀಸ್ ಕೊಡಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಏನು ಮಾಡಿದ್ದರೂ ಅದು ಕೆಪಿಸಿಸಿ ಸೂಚನೆಯಂತಲೇ ನಡೆದಿರುತ್ತದೆ. ಬಿಕೆ ಹರಿಪ್ರಸಾದ್ ಅವರನ್ನು ಸಿಎಂ ಸಿದ್ದರಾಮಯ್ಯ ಹಠಾತ್ ಮೀಟ್ ಆಗಿದ್ದು ಮತ್ತು ಕೆಪಿಸಿಸಿ ಅಧ್ಯಕ್ಷನಾಗಿ ತನ್ನ ಜೊತೆಗೆ ಚರ್ಚಿಸದೆ ನೇರವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಕಳಿಸಿಕೊಟ್ಟಿದ್ದು ಡಿಕೆಶಿಗೂ ಕೋಪ ತರಿಸಿತ್ತು. ಪಕ್ಷ ಅಂದ ಮೇಲೆ ತನ್ನ ಹಿಡಿತದಲ್ಲೇ ಇರಬೇಕು ಎಂದುಕೊಂಡಿರುವ ಡಿಕೆಶಿ, ಅದೇ ಸಂದರ್ಭದಲ್ಲಿ ಕೆಪಿಸಿಸಿ ಕಡೆಯಿಂದ ಮತ್ತೊಂದು ಕಮಿಟಿಯನ್ನು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಕಳಿಸಿಕೊಟ್ಟಿದ್ದರು. ಈ ವಿಚಾರದಲ್ಲಿ ಮೊದಲೇ ಸಮನ್ವಯ ಮಾಡಿಕೊಂಡಿರುತ್ತಿದ್ದರೆ, ಬಿಕೆ ಹರಿಪ್ರಸಾದ್ ನೇತೃತ್ವದಲ್ಲೇ ಕೆಪಿಸಿಸಿ ಕಮಿಟಿ ಮಾಡುತ್ತಿತ್ತೋ ಏನೋ..
ಒಬ್ಬರ ಅತೃಪ್ತಿ, ಇನ್ನೊಬ್ಬರ ಅಸಮಾಧಾನ, ಜಿಲ್ಲಾ ಕಾಂಗ್ರೆಸಿನಲ್ಲಿ ರಮಾನಾಥ ರೈ ಅವರನ್ನು ನೇಪಥ್ಯಕ್ಕೆ ಸರಿಸಿದ ಬಳಿಕ ಮತ್ತೊಬ್ಬರು ಹಿಡಿತ ಸಾಧಿಸಲೆತ್ನಿಸುವುದನ್ನು ತಪ್ಪಿಸಲು ಇದೇ ದಾಳ ಎನ್ನುವುದನ್ನು ಅರಿತುಕೊಂಡ ಕೆಲವು ನಾಯಕರು ಬಿಕೆ ಹರಿಪ್ರಸಾದ್ ಆಟ ನಡೆಯದಂತೆ ಇಲ್ಲಿ ಕಡ್ಡಿ ಆಡಿಸಿದ್ದಾರೆಂಬ ಮಾತು ಕೇಳಿಬಂದಿದೆ.
The internal rift within the Dakshina Kannada District Congress took a fresh turn as senior minority leaders Shahul Hameed and K. Ashraf were once again served show-cause notices for alleged anti-party activities. The district leadership, acting under the directive of President Harish Kumar, has warned that disciplinary action will follow if the two leaders fail to respond within five days.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm