Sansad Khel Mahotsav Mangalore: ಮಂಗಳೂರಿನಲ್ಲಿ ಡಿ.25ರಂದು ಸಂಸದ್‌ ಖೇಲ್‌ ಮಹೋತ್ಸವ ಸಮಾರೋಪ ; ಕ್ರೀಡಾಸಕ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಲೈವ್ 

23-12-25 10:40 pm       Mangalore Correspondent   ಕರಾವಳಿ

ನಮೋ ಖೇಲ್ ಸರಣಿ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಡಿ.25ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹ ಹಾಗೂ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಮಂಗಳೂರು, ಡಿ.23: ನಮೋ ಖೇಲ್ ಸರಣಿ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭ ಡಿ.25ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವ ಸಮೂಹ ಹಾಗೂ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಕಸಿತ ಭಾರತಕ್ಕಾಗಿ ಫಿಟ್ ಯುವ ಪರಿಕಲ್ಪನೆಯಡಿ ಜಿಲ್ಲೆಯಲ್ಲಿ ನ.23 ರಿಂದ ಈ ಸಂಸದ್ ಕ್ರೀಡಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಕ್ರೀಡಾ ಮಹೋತ್ಸವದಲ್ಲಿ ಚೆಸ್, ಕಬ್ಬಡ್ಡಿ, ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮುಂತಾದ ಸ್ಪರ್ಧೆಗಳು ನಡೆದಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಮಕ್ಕಳು, ಮಹಿಳೆಯರು, ಯುವಕರು ಸೇರಿ ಸಾವಿರಾರು ಕ್ರೀಡಾಸಕ್ತರು ಆಸಕ್ತರು ಭಾಗಿಯಾಗಿದ್ದರು. ಇದೀಗ ಕ್ರೀಡೋತ್ಸವದ ಸಮಾರೋಪವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದಂದೇ ಆಯೋಜಿಸಲಾಗಿದೆ. ಅದರಂತೆ, ಮಂಗಳೂರಿನಲ್ಲಿ ಡಿ.25ರಂದು ಯುಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಅವರ ಈ ಲೈವ್‌ ಕಾರ್ಯಕ್ರಮದಲ್ಲಿ ಯುಎಸ್ ಮಲ್ಯ ಕ್ರೀಡಾಂಗಣದಲ್ಲಿ ನಡೆಯುವ ಸಮಾರೋಪದ ದೃಶ್ಯಗಳೂ ಪ್ರಸಾರವಾಗಲಿದೆ. ಆ ಮೂಲಕ ಪ್ರಧಾನಿ ಮೋದಿ ಅವರು ದೇಶದಾದ್ಯಂತ ಇರುವ ಕ್ರೀಡಾಪಟುಗಳಿಗೆ ಮತ್ತು ಯುವಜನತೆಗೆ ಸ್ಫೂರ್ತಿಯ ಮಾತುಗಳನ್ನು ಆಡಲಿದ್ದಾರೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. 

ಈ ಬಾರಿ ಸಂಸತ್‌ ಕ್ರೀಡೋತ್ಸವವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಹಿನ್ನಲೆಯಲ್ಲಿ ಕ್ರೀಡಾ ಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಸಕ್ತರು ಹಾಗೂ ವಿವಿಧ ಕ್ರೀಡೆಗಳನ್ನು ವ್ಯವಸ್ಥಿತವಾಗಿ ನಡೆಸುವ ಮೂಲಕ ಅದರ ಯಶಸ್ವಿಗೆ ಕಾರಣರಾಗಿರುವ ಪ್ರತಿಯೊಬ್ಬರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಅಟಲ್ ಜೀ ಅವರ ಜನ್ಮದಿನದ ಶುಭ ಸಂದರ್ಭದಲ್ಲಿ ಕ್ರೀಡೋತ್ಸವದ ಸಮಾರೋಪ ನಡೆಯಲಿದ್ದು, ಪ್ರಧಾನಿ ಮೋದಿ ಅವರ ನೇರಪ್ರಸಾರ ಕಾರ್ಯಕ್ರಮದಲ್ಲಿ  ನಮ್ಮ ಜಿಲ್ಲೆಯ ಸಮಾರೋಪದ ದೃಶ್ಯಗಳೂ ಪ್ರಸಾರವಾಗಲಿರುವುದು ಹೆಮ್ಮೆಯ ವಿಷಯ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಜಿಲ್ಲೆಯ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ  ಭಾಗಿಯಾಗಬಹುದು ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

The concluding ceremony of the Sansad Khel Mahotsav, organised under the Namo Khel series in Dakshina Kannada district, will be held in Mangaluru on December 25. On the occasion, Prime Minister Narendra Modi will address the youth and sportspersons of the country through a live interaction.