MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್ ಕೈಗೊಂಬೆ ; ದೇವಸ್ಥಾನದ ಫ್ಲೆಕ್ಸ್ ತೆಗೆಯೋರಿಗೆ ಕಾಂಗ್ರೆಸಿಗರ ಫ್ಲೆಕ್ಸ್ ಯಾಕೆ ಕಾಣಲ್ಲ? ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಯಾಕೆ ? 

23-12-25 10:51 pm       Mangalore Correspondent   ಕರಾವಳಿ

ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಪಾರ್ಕ್, ಲೇಡಿಹಿಲ್ ಸೇರಿದಂತೆ ಬಹುತೇಕ ಭಾಗದಲ್ಲಿ ಕಾಂಗ್ರೆಸ್ ನಾಯಕರ ಸೂಚನೆಯಂತೆ ಕೆಲವು ಕಡೆಗಳಲ್ಲಿ ಮಾತ್ರ ಗೂಡಂಗಡಿ ತೆರವು ಮಾಡಿದ್ದಾರೆ. ಹಾಗೆಯೇ, ಕಾಂಗ್ರೆಸ್ ನಾಯಕರು ಫ್ಲೆಕ್ಸ್ ಹಾಕಿದರೆ ತೆಗೆಯಲ್ಲ. ಇತರೇ ದೇವಸ್ಥಾನ ಕಮಿಟಿಯವರು, ಬಿಜೆಪಿಗರ ಫ್ಲೆಕ್ಸ್ ತೆರವು ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಅನ್ನುವ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು, ಡಿ‌23: ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿಪಾರ್ಕ್, ಲೇಡಿಹಿಲ್ ಸೇರಿದಂತೆ ಬಹುತೇಕ ಭಾಗದಲ್ಲಿ ಕಾಂಗ್ರೆಸ್ ನಾಯಕರ ಸೂಚನೆಯಂತೆ ಕೆಲವು ಕಡೆಗಳಲ್ಲಿ ಮಾತ್ರ ಗೂಡಂಗಡಿ ತೆರವು ಮಾಡಿದ್ದಾರೆ. ಹಾಗೆಯೇ, ಕಾಂಗ್ರೆಸ್ ನಾಯಕರು ಫ್ಲೆಕ್ಸ್ ಹಾಕಿದರೆ ತೆಗೆಯಲ್ಲ. ಇತರೇ ದೇವಸ್ಥಾನ ಕಮಿಟಿಯವರು, ಬಿಜೆಪಿಗರ ಫ್ಲೆಕ್ಸ್ ತೆರವು ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಅನ್ನುವ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಟಿ ನಡೆಸಿದ ಅವರು, ಫ್ಲೆಕ್ಸ್, ಗೂಡಂಗಡಿ ತೆರವು ಮಾಡವುದಿದ್ದರೆ ಎಲ್ಲವನ್ನೂ ತೆರವುಗೊಳಿಸಿ. ಅದು ಬಿಟ್ಟು ದುಡಿದು ತಿನ್ನುವ ಬಡ ವ್ಯಾಪಾರಿಗಳ ಮಧ್ಯೆಯೂ ಯಾಕೆ ತಾರತಮ್ಯ? ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಆಡಳಿತ ನಡೆಯುತ್ತಿದ್ದು ಪಕ್ಷದ ನಾಯಕರ ಅಣತಿಯ ವರ್ತಿಸುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿ ಬಂದಾಗ ಎಲ್ಲ ಕಡೆ ಫ್ಲೆಕ್ಸ್ ರಾರಾಜಿಸಿದ್ದವು. ಪಾಲಿಕೆ ನಿಷೇಧ ವಿಧಿಸಿದ ಬಳಿಕ ಬಿಜೆಪಿ ವತಿಯಿಂದ ಫ್ಲೆಕ್ಸ್ ಹಾಕಿಯೇ ಇಲ್ಲ. ಈಗ ಉರ್ವ ದೇವಸ್ಥಾನದಲ್ಲಿ ದೊಡ್ಡ ಕಾರ್ಯಕ್ರಮ ಆಗುತ್ತಿದ್ದು ಅವರು ಹಾಕಿದ್ದ ಫ್ಲೆಕ್ಸ್ ಕಿತ್ತುಕೊಂಡು ಹೋಗಿದ್ದಾರೆ. ಇದೇ ವೇಳೆ, ಜನರ ವಿರೋಧದ ಮಧ್ಯೆಯೂ ಕದ್ರಿ ಪಾರ್ಕ್ ನಲ್ಲಿ ಪಾರ್ಕಿಂಗ್ ಶುಲ್ಕ ಆರಂಭಿಸಲಾಗಿದೆ. ಎಲ್ಲ ಜನವಿರೋಧಿ ನಡೆಯ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಮತ್ ಹೇಳಿದರು. 

ಬೈರತಿ ಸುರೇಶ್ ಕರಾವಳಿಗೆ ಬೆಂಕಿ ಹಚ್ಚಿದವರು ಎಂದು ಜರೆದರೂ ಇಲ್ಲಿನವರೇ ಆದ ಸ್ಪೀಕರ್ ಖಾದರ್ ಸುಮ್ಮನೆ ಉಳಿದಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಮಂಗಳೂರಿನ ಜನರಿಗೆ ಅಪಮಾನ ಮಾಡಿದ್ರೂ ಮೌನ ತಾಳಿದ್ದು ತಪ್ಪು. ಅವರು ತಮ್ಮ ಪಕ್ಷದವರು ಅಂತ ಮೃದು ಧೋರಣೆ ತೋರಿದ್ದಾರೆ. ದ್ವೇಷ ಭಾಷಣ ಮಸೂದೆ ಮಾಡಿದವರಿಗೆ ವಿಧಾನಸಭೆ ಒಳಗಡೆಯೇ ಇಂಥ ದ್ವೇಷ ಭಾಷಣ ಮಾಡಿದ್ದು ಕಾಣಲ್ಲ ಎಂದು ಟೀಕಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಭಾಸ್ಕರಚಂದ್ರ ಶೆಟ್ಟಿ, ಉಪಸ್ಥಿತರಿದ್ದರು.

MLA Vedavyas Kamath on Monday accused the Mangaluru City Corporation of functioning as a “puppet of the Congress party” and adopting a discriminatory approach in the removal of flex banners and roadside stalls across the city.