ಬ್ರೇಕಿಂಗ್ ನ್ಯೂಸ್
09-01-26 01:15 pm Mangalore Correspondent ಕರಾವಳಿ
ಮಂಗಳೂರು, ಜ.9 : ಮಾನವ – ಪ್ರಾಣಿ ಸಂಘರ್ಷ ತಡೆಯಲು ಮತ್ತು ಈ ಬಗ್ಗೆ ರಾಜ್ಯಾದ್ಯಂತ ನಿಗಾ ವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದ್ದೇವೆ. ಯಾವುದೇ ಭಾಗದಿಂದ 1926 ಸಂಖ್ಯೆಗೆ ಕರೆ ಮಾಡಿದರೂ ತಕ್ಷಣ ಕಾರ್ಯ ಪ್ರವೃತ್ತರಾಗಲು ವ್ಯವಸ್ಥೆ ಮಾಡಿದ್ದೇವೆ. ಇದನ್ನು ಈಗಾಗಲೇ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದೇವೆ ಎಂದು ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದ್ದಾರೆ.
ಮಂಗಳೂರಿನ ಕದ್ರಿಯಲ್ಲಿ ಉಪ ಅರಣ್ಯ ಅಧಿಕಾರಿಗಳ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕರಾವಳಿ, ಮಲೆನಾಡು ಭಾಗದಲ್ಲಿ ಹುಲಿ, ಆನೆಗಳ ಸಮಸ್ಯೆ ಇದೆ. ಇದರ ಬಗ್ಗೆ ಇಲ್ಲಿನ ಐವಾನ್ ಡಿಸೋಜ ಸೇರಿ ಈ ಭಾಗದ ಜನಪ್ರತಿನಿಧಿಗಳು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಆನೆಗಳ ದಾಳಿಯನ್ನು ತಡೆಯುವುದಕ್ಕಾಗಿ ಆನೆ ಕಾರ್ಯಪಡೆ ಮಾಡಿದ್ದೇವೆ. ಇದರ ಜೊತೆಗೆ ಕಮಾಂಡ್ ಸೆಂಟರ್ ಇದೆ. 1926 ನಂಬರಿಗೆ ಕರೆ ಮಾಡಿದರೆ ಕೂಡಲೇ ಸ್ಪಂದನೆ ಸಿಗಲಿದೆ.



ಯಾರೇ ದೂರು ಕೊಟ್ಟರೂ ಸಂಬಂಧಪಟ್ಟ ವಿಭಾಗಕ್ಕೆ ಹೋಗುತ್ತದೆ. ಆಯಾ ಭಾಗದ ಆರ್ ಎಫ್ಓ ಅಧಿಕಾರಿಗಳು ತಕ್ಷಣ ಆ ಸ್ಥಳಕ್ಕೆ ಹೋಗುತ್ತಾರೆ, ಅಲ್ಲಿ ಆಗಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಾರೆ, ಆನೆಗಳನ್ನು ಮರಳಿ ಕಾಡಿಗಟ್ಟುವುದು ಅಥವಾ ವಶಕ್ಕೆ ಪಡೆಯುವ ಬಗ್ಗೆ ನಿರ್ಧಾರ ಕೈಗೊಂಡು ಸರ್ಕಾರದಿಂದ ಅನುಮತಿ ಪಡೆಯುತ್ತಾರೆ. ಕಮಾಂಡ್ ಸೆಂಟರಿನಿಂದ ತಕ್ಷಣ ಪ್ರತಿಕ್ರಿಯೆ ಆಗುತ್ತದೆ, ಆಗದಿದ್ದರೆ ಯಾಕೆ ಆಗಿಲ್ಲ ಎನ್ನುವುದರ ವಿವರಣೆ ನೀಡಬೇಕಾಗುತ್ತದೆ ಎಂದು ಸಚಿವ ಖಂಡ್ರೆ ಹೇಳಿದರು.
ಇದಲ್ಲದೆ, ಕುದುರೆಮುಖ ಭಾಗದಲ್ಲಿ ಅರಣ್ಯ ವಾಸಿಗಳನ್ನು ಸ್ಥಳಾಂತರ ಮಾಡಲು ಯೋಜನೆ ಮಾಡಿದ್ದೇವೆ. ಅವರಿಗೆ ಪುನರ್ವಸತಿ ಕಲ್ಪಿಸಲು ಯೋಜನೆಗಳಿದ್ದು ಶೀಘ್ರದಲ್ಲೇ ಜಾರಿಗೆ ತರುತ್ತೇವೆ ಎಂದೂ ಹೇಳಿದರು. ಕದ್ರಿ ಸರ್ಕಿಟ್ ಹೌಸ್ ಆವರಣದಲ್ಲಿ ನಿರ್ಮಿಸಲಾದ ನೂತನ ಅರಣ್ಯ ಭವನವನ್ನು ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಐವಾನ್ ಡಿಸೋಜ ಮತ್ತಿತರರಿದ್ದರು.
Forest and Environment Minister Eshwar B. Khandre announced in Mangaluru that a state-level command centre has been established to monitor and prevent human–wildlife conflict, with immediate response ensured through the 1926 helpline. He said the system is already operational in Bengaluru and will enable quick action by forest officials.
09-01-26 04:42 pm
Bangalore Correspondent
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
09-01-26 11:00 pm
HK News Desk
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
09-01-26 09:18 pm
Mangalore Correspondent
ಉದ್ಯೋಗ ಖಾತ್ರಿ ಯೋಜನೆಯನ್ನೇ ಮೋದಿ ಕೊಂದಾಕಿದ್ದಾರೆ,...
09-01-26 05:47 pm
ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರ...
09-01-26 03:21 pm
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm