ಬ್ರೇಕಿಂಗ್ ನ್ಯೂಸ್
21-01-26 10:55 pm Mangalore Correspondent ಕರಾವಳಿ
ಪುತ್ತೂರು, ಜ.21 : ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಜ.12ರಂದು ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್ ದ್ವೇಷ ಪೂರಿತ ಭಾಷಣ ಮಾಡಿದ್ದಾರೆಂದು ಮಾನವ ಬಂಧುತ್ವ ವೇದಿಕೆಯ ರಾಮಚಂದ್ರ ಕೆ ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಜ.12ರಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕಲ್ಲಡ ಪ್ರಭಾಕರ ಭಟ್, ಕಾರ್ಯಕ್ರಮದಲ್ಲಿ ನೆರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುವಂತಹ, ಕೋಮುದ್ವೇಷದ ಹಾಗೂ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿರುತ್ತಾರೆ. ಸದ್ರಿ ಭಾಷಣವನ್ನು "VIKASANA TV" ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರ ಮಾಡಿರುತ್ತಾರೆ. ಸದ್ರಿ ಕಾರ್ಯಕ್ರಮದಲ್ಲಿ ಹಿಂದು - ಮುಸ್ಲಿಂ ಮಧ್ಯೆ ಕೋಮು ದ್ವೇಷ ಬಿತ್ತುವ ರೀತಿ ಮಾತನಾಡಿದ್ದಾರೆ.
ಅಲ್ಲದೆ, ಮುಸ್ಲಿಂ ಮತ್ತು ಕ್ರಿಸ್ತಿಯನ್ ಮತಾಂತರ, ದೇಶ ವಿಭಜನೆ ಬಗ್ಗೆ ಹಿಂಸೆಗೆ ಪ್ರಚೋದಿಸುವಂತೆ ಭಾಷಣ ಮಾಡಿದ್ದಾರೆಂದು ಡಾ.ಕಲ್ಲಡ ಪ್ರಭಾಕರ ಭಟ್ ವಿರುದ್ದ, ಸದ್ರಿ ಭಾಷಣವನ್ನು ಪ್ರಸಾರ ಮಾಡಿದ "VIKASANA TV" (ವಿಕಸನ ಟಿವಿ)ಎಂಬ ಹೆಸರಿನ ಯೂಟ್ಯೂಬ್ ಚಾನಲ್ ಹಾಗೂ ಸದ್ರಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಆಯೋಜಕರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 10/2026, ಕಲಂ:196, 299, 302, 353(2), 3(5) BNS ರಂತೆ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಪುತ್ತೂರು ಠಾಣೆಯಲ್ಲಿ ಕೋಮು ದ್ವೇಷದ ಭಾಷಣ ನೆಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದರಲ್ಲಿ ಜಾಮೀನು ಸಿಗಲು ಎರಡು ತಿಂಗಳು ಬೇಕಾಗಿತ್ತು. ಕೊನೆಗೆ, ಜಾಮೀನು ನೀಡುವ ಸಂದರ್ಭದಲ್ಲಿ ಇಂತಹ ಭಾಷಣ ಮಾಡಬಾರದು, ಕೇಸು ದಾಖಲಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಎಚ್ಚರಿಕೆ ನೀಡಿತ್ತು.
Another FIR has been registered against RSS leader Dr. Kalladka Prabhakar Bhat for allegedly delivering a hate speech during a Vivekananda Jayanti programme held at Vivekananda College, Puttur, on January 12.
21-01-26 01:31 pm
HK News Desk
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
ಬಾರ್ ಲೈಸನ್ಸ್ ನೀಡಲು 1.5 ಕೋಟಿ ಲಂಚ ; 25 ಲಕ್ಷ ರೂ....
20-01-26 02:15 pm
ರಾಸಲೀಲೆಯ ಬಿರುಗಾಳಿ ಬೆನ್ನಲ್ಲೇ ರಾಮಚಂದ್ರ ರಾವ್ ತಲ...
20-01-26 12:20 pm
ಮೈಸೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸುಗಮ ಬಸ್...
20-01-26 12:18 pm
21-01-26 11:10 am
HK News Desk
KSRTC Hikes Kasaragod Mangaluru: ಕುಂಬಳೆ ಟೋಲ್...
20-01-26 07:04 pm
ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಎಂದು ವಿಡಿಯೋ ; ನೊಂದು...
19-01-26 11:03 pm
A.R. Rahmans Communal Bias: ‘ಕಮ್ಯುನಲ್ ಕಾರಣಕ್ಕ...
18-01-26 08:20 pm
ಗ್ರೀನ್ಲ್ಯಾಂಡ್ ವಶಕ್ಕೆ ವಿರೋಧ ; ನ್ಯಾಟೋ ಮಿತ್ರ ರಾ...
18-01-26 06:03 pm
21-01-26 10:55 pm
Mangalore Correspondent
ಸ್ವಚ್ಛತೆ, ತ್ಯಾಜ್ಯಮುಕ್ತ ಗ್ರಾಮ, ಪರಿಸರ ಸ್ನೇಹಿ ಆಡ...
21-01-26 06:18 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸಿಕ್ಕಿದ ಏಳು ಅಸ್ಥಿಪಂಜರಗ...
21-01-26 11:53 am
158 ವರ್ಷಗಳ ಇತಿಹಾಸವುಳ್ಳ ದೇಶದ ಮೊದಲ ಮಂಗಳೂರು ಟೈಲ್...
20-01-26 10:59 pm
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ನಿಂದ ಟ್ರಾಫಿಕ್ ಸಮ...
20-01-26 10:33 pm
21-01-26 09:35 pm
HK News Desk
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm
ಸಿಎಂ ಕ್ಲಾಸ್ ಬೆನ್ನಲ್ಲೇ ಅಲರ್ಟ್ ಆದ ಬೆಂಗಳೂರು ಖಾಕಿ...
20-01-26 05:01 pm
100ಕ್ಕೂ ಹೆಚ್ಚು ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳ...
19-01-26 10:20 pm
ಹುಣಸೂರು ಸ್ಕೈ ಗೋಲ್ಡ್ ಜುವೆಲ್ಲರಿ ದರೋಡೆ ; ಬಿಹಾರ ಮ...
19-01-26 04:16 pm