ಬ್ರೇಕಿಂಗ್ ನ್ಯೂಸ್
02-02-26 05:09 pm Mangalore Correspondent ಕರಾವಳಿ
ಮಂಗಳೂರು, ಫೆ.2 : ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಹುಪರಾಕ್ ನೀಡಿದ್ದಾರೆ. ಸುದ್ದಿಗೋಷ್ಟಿ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ, ರಾಜ್ಯ ಬಿಜೆಪಿಯನ್ನು ವಿಜಯೇಂದ್ರ ಉತ್ತಮವಾಗಿ ಸಂಘಟಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಬಿಜೆಪಿ ಚಟುವಟಿಕೆ ಉತ್ತಮಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ಬದಲಾವಣೆ ಅಂತ ಯಾರೋ ಕೆಲವರು ಹೇಳುತ್ತಿರುತ್ತಾರೆ. ಅದಕ್ಕೇನೂ ತಲೆಕೆಡಿಸಿಕೊಳ್ಳಬೇಕಿಲ್ಲ. ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಒಂದೇ ವಾರದಲ್ಲಿ ಬದಲಾವಣೆ ಆಗುತ್ತೆ ಎಂದು ನಿಮ್ಮ ಪತ್ರಿಕೆಯವರೇ ಬರೆಯತೊಡಗಿದ್ದರು. ಆನಂತರವೂ ಬದಲಾವಣೆ ಸುದ್ದಿ ಬರ್ತಾನೇ ಇತ್ತು. ಆದರೆ ನಾಲ್ಕು ವರ್ಷ, ನಾಲ್ಕು ತಿಂಗಳ ಕಾಲ ಅಧ್ಯಕ್ಷ ಸ್ಥಾನದಲ್ಲಿದ್ದೆ. ವಿಜಯೇಂದ್ರ ಅವರನ್ನು ನಮ್ಮ ರಾಷ್ಟ್ರೀಯ ನಾಯಕರು ನೇಮಕ ಮಾಡಿದ್ದಾರೆ, ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಅವರು ಒಳ್ಳೆದಾಗಿಯೇ ಸಂಘಟನಾ ಚಟುವಟಿಕೆ ಮಾಡುತ್ತಿದ್ದಾರೆ. ಅದೇ ರೀತಿ ನಮ್ಮ ಇಲ್ಲಿನ ಸಂಸದರು ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದು ಹೊಸ ಹೊಸ ಯೋಜನೆಗಳನ್ನು ಜಿಲ್ಲೆಗೆ ತರುತ್ತಿದ್ದಾರೆ ಎಂದು ಹೇಳುವ ಮೂಲಕ ಮಂಗಳೂರಿನ ಹಾಲಿ ಸಂಸದ ಕ್ಯಾ.ಬ್ರಿಜೇಶ್ ಚೌಟರನ್ನೂ ನಳಿನ್ ಕುಮಾರ್ ಹೊಗಳಿದ್ದಾರೆ. ಆಮೂಲಕ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬಣದಿಂದ ದೂರವಿದ್ದ ನಳಿನ್ ಬಹಿರಂಗವಾಗಿಯೇ ಬೆಂಬಲ ನೀಡಿದಂತಾಗಿದೆ.
ಕೇಂದ್ರ ಬಜೆಟ್ ದೂರದೃಷ್ಟಿಯಿಂದ ಕೂಡಿದ್ದು, 2047ರ ವೇಳೆಗೆ ದೇಶವನ್ನು ಅಭಿವೃದ್ಧಿಯತ್ತ ಒಯ್ಯಲಿದೆ. ಕೃಷಿ, ಕೈಗಾರಿಕೆ, ಉತ್ಪಾದನೆ, ಮೂಲಸೌಕರ್ಯ, ರೈಲ್ವೇ ಹೀಗೆ ಎಲ್ಲ ಕ್ಷೇತ್ರಗಳಿಗೂ ಸಮಗ್ರ ರೀತಿಯ ಯೋಜನೆಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದ ನಳಿನ್ ಕುಮಾರ್, ಬೆಂಗಳೂರು- ಚೆನ್ನೈ- ಪುಣೆ- ಮುಂಬೈ- ಹೈದ್ರಾಬಾದ್ ನಗರಗಳನ್ನು ಜೋಡಿಸಲು ಹೈಸ್ಪೀಡ್ ರೈಲು ಯೋಜನೆ ಪ್ರಕಟಿಸಿದ್ದು ದೊಡ್ಡ ಕೊಡುಗೆ. ಈ ಭಾಗದಲ್ಲಿ ಹೈಸ್ಪೀಡ್ ರೈಲು ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ಹೇಳಿದರು.
ಹೈಸ್ಪೀಡ್ ರೈಲ್ವೇಯಲ್ಲಿ ರಾಜ್ಯದ ಪಾಲಿರುವುದಕ್ಕೆ ಡಿಸಿಎಂ ಡಿಕೆಶಿ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ನಳಿನ್, ಕಾಂಗ್ರೆಸಿಗರು ಟೀಕೆ ಮಾಡುವುದನ್ನಷ್ಟೇ ಮಾಡುತ್ತಿದ್ದಾರೆ. ರೈಲ್ವೇಯ ಎಲ್ಲ ಯೋಜನೆಗಳಿಗೂ ರಾಜ್ಯ ಮತ್ತು ಕೇಂದ್ರದ ಪಾಲಿದೆ. ಇದನ್ನು ಮಲ್ಲಿಕಾರ್ಜುನ ಖರ್ಗೆ ರೈಲ್ವೇ ಸಚಿವರಾಗಿದ್ದಾಗಲೇ ಮಾಡಿರುವುದು. ಇದಕ್ಕೆ ಆಗ ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಂಬಲಿಸಿದ್ದರಿಂದ ರಾಜ್ಯದಲ್ಲಿ ರೈಲ್ವೇ ಅಭಿವೃದ್ಧಿ ಸಾಧ್ಯವಾಯಿತು. ಡಿಕೆಶಿ ಸಹಕಾರ ಕೊಡುವುದಿಲ್ಲ ಎಂದರೆ ರೈಲ್ವೇ ಕೆಲಸಗಳನ್ನು ಕುಂಠಿತ ಮಾಡಿದಂತೆ ಎಂದು ಟೀಕಿಸಿದರು.
ಬಜೆಟ್ ಶ್ವೇತಪತ್ರ ಹೊರಡಿಸಲಿ
ರಾಜ್ಯದಲ್ಲಿ ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿಯಾಗಲು ಕೇಂದ್ರ ಅನುದಾನ ಕಡಿಮೆಯಾಗಿರುವುದು ಕಾರಣ ಎಂಬ ಸಿದ್ದರಾಮಯ್ಯ ಟೀಕೆ ಕುರಿತ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟಿನ ಶ್ವೇತ ಪತ್ರವನ್ನು ಹೊರಡಿಸಲಿ. ರಾಜ್ಯದ ಹಣ ಎಲ್ಲೆಲ್ಲಿ ಪೋಲಾಗುತ್ತಿದೆ ಎನ್ನುವುದನ್ನು ತೋರಿಸುತ್ತೇವೆ. ಅತಿ ಹೆಚ್ಚು ಬಜೆಟ್ ಮಂಡಿಸಿರುವ ಸಿದ್ದರಾಮಯ್ಯರಿಗೆ ಹಣಕಾಸಿನ ಸ್ಥಿತಿಗತಿ ತಿಳಿದಿಲ್ಲವೇ.. ಆದರೂ ಕೇಂದ್ರದ ಬಗ್ಗೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜಿಎಸ್ಟಿ ಅನುದಾನ ಬಂದಿಲ್ಲ ಎನ್ನುವ ಇವರು, ಕಳೆದ ಬಾರಿ ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಬಂದು ಸುದ್ದಿಗೋಷ್ಟಿ ಮಾಡಿದಾಗ ಪ್ರಶ್ನೆ ಮಾಡಬೇಕಿತ್ತು. ಜಿಎಸ್ಟಿ ಪಾಲು ಎಲ್ಲರಿಗೂ ಸಮಾನವಾಗಿಯೇ ಇರುತ್ತದೆ. ಅದರ ಬಗ್ಗೆ ಸಚಿವರು ಸ್ಪಷ್ಟನೆಯನ್ನೂ ನೀಡಿದ್ದರು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ವಸಂತ ಪೂಜಾರಿ ಇದ್ದರು.
Former MP and ex-state BJP president Nalin Kumar Kateel has openly praised state BJP president B.Y. Vijayendra’s leadership, stating that the party is being effectively organized under him. He said criticism of party presidents is common and should not be taken seriously.
19-07-26 08:34 pm
HK News Desk
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
21-07-26 09:03 pm
HK News Staffer
ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಹೊರತು ಪ್ರತಿಭಟನೆ ನಿ...
21-07-26 06:23 pm
ಮತ್ತೆ ಕೋವಿಡ್ ಸದ್ದು; ಆಂಧ್ರದಲ್ಲಿ RF.5 ರೂಪಾಂತರ ಪ...
20-07-26 03:42 pm
ನೀಟ್ ಪರೀಕ್ಷೆ ಅಕ್ರಮ ; ರಾಜಧಾನಿ ದೆಹಲಿಯಲ್ಲಿ ಬೀದಿಗ...
20-07-26 02:22 pm
ಕೇರಳದಲ್ಲಿ ಫುಟ್ಬಾಲ್ ಜ್ವರ ; ಮಧ್ಯರಾತ್ರಿ ಫೈನಲ್ ವೀ...
19-07-26 09:37 pm
21-07-26 11:02 pm
HK News Desk
ಸಾಣೂರು-ಬಿಕರ್ನಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ; ಬನ್...
21-07-26 09:41 pm
ನೀಟ್ ಪರೀಕ್ಷೆ ಅಕ್ರಮ ; ಸೋನಂ ವಾಂಗ್ಚುಕ್ ಹೋರಾಟಕ್ಕೆ...
20-07-26 09:32 pm
ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಕಾರು; ಅಪಘ...
20-07-26 03:14 pm
ಲಾವಣ್ಯ ಹತ್ಯೆ ; ಅವನನ್ನ ನಮ್ಮ ಕೈಗೆ ಒಪ್ಪಿಸಿ, ಊರಿನ...
17-07-26 10:25 pm
21-07-26 08:03 pm
Mangaluru Staffer
ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಶುರುವಾದ ಪ್ರೀತಿ ; ಮದು...
21-07-26 04:54 pm
Ravi Shetty, Accident, Mangalore: ನಿಯಂತ್ರಣ ತಪ...
21-07-26 12:18 pm
ಉಕ್ರೇನ್ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ;...
21-07-26 11:47 am
ತ್ರಿಪುರಾ ಡಿಜಿಪಿ ಅನುರಾಗ್ ಧನಕರ್ ಕಚೇರಿಯಲ್ಲಿ ಗುಂಡ...
20-07-26 10:17 pm