ಬ್ರೇಕಿಂಗ್ ನ್ಯೂಸ್
13-03-26 09:58 pm Mangalore Correspondent ಕರಾವಳಿ
ಮಂಗಳೂರು, ಮಾರ್ಚ್ 13: ಸುರತ್ಕಲ್ ಬಳಿಯ ಚೇಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ಗ್ರಾಮದಲ್ಲಿ ಕೊರಗ ನಿವಾಸಿಗಳ ಕಾಲನಿಗೆ ಬಿಲ್ ಕಟ್ಟಿಲ್ಲವೆಂದು ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಿ ಅಧಿಕಾರಿಗಳು ಅಮಾನವೀಯ ವರ್ತನೆ ತೋರಿದ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾಧ್ಯಮದ ಗಮನ ಸೆಳೆದಿದ್ದಲ್ಲದೆ, ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಕೊರಗ ಕಾಲನಿಯಲ್ಲಿ 26 ಮನೆಗಳಿದ್ದು 120ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಒಂದು ಕೊಳವೆ ಬಾವಿಯನ್ನು ಕೊರೆಸಿದ್ದು, ಅದರಲ್ಲಿ ಬರುವ ನೀರೂ ಕೆಂಪಾಗಿದ್ದು ಕಲುಷಿತವಾಗಿದೆ.




ಕಲುಷಿತ ನೀರಾಗಿದ್ದರೂ, ತಿಂಗಳಿಗೆ ಪ್ರತಿ ಮನೆಯಿಂದ ನೂರು ರೂಪಾಯಿ ಬಿಲ್ ನೀಡಬೇಕೆಂದು ಪಂಚಾಯತ್ ಅಧಿಕಾರಿಗಳು ವಸೂಲಿ ಮಾಡುತ್ತಿದ್ದರು. ನೀರು ಸರಿ ಇಲ್ಲ, ಉತ್ತಮ ನೀರನ್ನು ಕೊಡಿ ಎಂದು ಸ್ಥಳೀಯರು ಕೇಳಿದರೂ, ದಪ್ಪ ಚರ್ಮದ ಅಧಿಕಾರಿಗಳು ಕೊರಗ ಸಮುದಾಯದ ನಿವಾಸಿಗಳಿಗೆ ತಾರತಮ್ಯ ಎಸಗಿದ್ದಾರೆ. ಕೆಲವು ಮನೆಗಳವರು ನೀರಿನ ಬಿಲ್ ಕೊಡದೆ ಪ್ರತಿಭಟನೆ ತೋರಿದ್ದರು.
ಇದೇ ನೆಪದಲ್ಲಿ ಪಂಚಾಯತ್ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ನೀರಿನ ಸಂಪರ್ಕವನ್ನೇ ಕಡಿತಗೊಳಿಸಿ ಅಮಾನವೀಯತೆ ತೋರಿದ್ದಾರೆ. ಅಲ್ಲದೆ, ಅಲ್ಲಿಯೇ ಪರಿಸರದಲ್ಲಿರುವ ಸಾರ್ವಜನಿಕ ಟ್ಯಾಂಕಿನ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ. ಇದರಿಂದ ಕಂಗೆಟ್ಟ ನಿವಾಸಿಗಳು ನೀರಿಗಾಗಿ ಹಾಹಾಕಾರ ಮಾಡಿದ್ದು, ಸಾಮಾಜಿಕ ಕಾರ್ಯಕರ್ತರ ಗಮನಕ್ಕೆ ತಂದಿದ್ದಾರೆ. ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಾಮಾಜಿಕ ಕಾರ್ಯಕರ್ತರು ಸ್ಥಳಕ್ಕೆ ತೆರಳಿ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
ಸಂಜೆ ವೇಳೆಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ಸ್ಥಳಕ್ಕೆ ತೆರಳಿದ್ದು ಸ್ಥಳೀಯರು ತಮಗಾದ ಅನ್ಯಾಯದ ಬಗ್ಗೆ ಅಧಿಕಾರಿಯಲ್ಲಿ ಅಲವತ್ತುಕೊಂಡಿದ್ದಾರೆ. ಕೂಡಲೇ ನೀರಿನ ಸಂಪರ್ಕವನ್ನು ಮರು ಸ್ಥಾಪಿಸಲು ಅಧಿಕಾರಿ ಪಂಚಾಯತ್ ಸಿಬಂದಿಗೆ ಸೂಚಿಸಿದ್ದು, ನೀರಿನ ಬಿಲ್ಲನ್ನು ಅರ್ಧದಷ್ಟು ಸರಕಾರದ ವತಿಯಿಂದ ಕಟ್ಟಲಾಗುವುದು. ಉಳಿದ ಅರ್ಧ ಭಾಗವನ್ನು ಮುಂದಿನ ಮಾರ್ಚ್ 17ರ ವೇಳೆಗೆ ಪಂಚಾಯತ್ ನಲ್ಲಿ ಕಟ್ಟುವಂತೆ ಹೇಳಿದ್ದಾರೆ.
ಕುಡಿಯುವ ನೀರು ಒದಗಿಸುವುದು ಮೂಲಭೂತ ಕರ್ತವ್ಯವಾಗಿದ್ದು, ಪಂಚಾಯತ್ ಆಗಲೀ, ಜಿಲ್ಲಾಡಳಿತ ಆಗಲೀ ನೀರಿನ ಸಂಪರ್ಕವನ್ನು ಕಡಿತ ಮಾಡುವುದಕ್ಕೆ ಅವಕಾಶ ಇಲ್ಲ. ಸ್ಥಳೀಯರು ಹೇಳುವಂತೆ, ಅಲ್ಲಿನ ನೀರಿನ ಮೂಲವೇ ಅತ್ಯಂತ ಕಲುಷಿತವಾಗಿದ್ದು, ಬಾಟಲಿಯಲ್ಲಿ ಸಂಗ್ರಹಿಸಿದರೆ ಕಸದ ರೀತಿ ಧೂಳಿನ ಕಣಗಳಿದ್ದು ಕೆಂಪಗಿರುವುದನ್ನು ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಗಮನಿಸಿದ್ದಾರೆ.
ಹಾಗಿದ್ದರೂ, ಈ ನೀರಿಗಾಗಿ ಬಿಲ್ ತೆರುವಂತೆ ಸತಾಯಿಸಿದ್ದು ಅಕ್ಷಮ್ಯ. ತೀರಾ ಹಿಂದುಳಿದ, ಕರಾವಳಿ ಭಾಗದ ಅತ್ಯಂತ ತಳ ಸಮುದಾಯ ಆಗಿರುವ ಕೊರಗರ ಅಭಿವೃದ್ಧಿಗೆ ಸಾಕಷ್ಟು ಅನುದಾನ, ಸರ್ಕಾರದಲ್ಲಿ ಪ್ರತ್ಯೇಕ ಇಲಾಖೆ ಇದ್ದರೂ ಮಧ್ಯ ಗ್ರಾಮದಲ್ಲಿ ನಿವಾಸಿಗಳನ್ನೇ ನೀರಿನ ಬಿಲ್ ನೀಡಿಲ್ಲವೆಂದು ಕಲುಷಿತ ನೀರು ಕೊಟ್ಟು ಸತಾಯಿಸಿದ್ದಲ್ಲದೆ, ಅದರ ಸಂಪರ್ಕವನ್ನೂ ಕಡಿತಗೊಳಿಸಿರುವುದು ಶೋಷಿತ ಸಮುದಾಯಕ್ಕೆ ಎಸಗಿದ ಅನ್ಯಾಯ. ಇದಕ್ಕಾಗಿ ಪಂಚಾಯತ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am