ಬಂಡೆಗೆ ಡಿಕ್ಕಿಯಾದ ನಾಡದೋಣಿ, ನಾಲ್ವರು ಮೀನುಗಾರರು ಕಣ್ಮರೆ 

16-08-20 07:17 pm       Udupi Reporter   ಕರಾವಳಿ

ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಹಿಂದಿರುಗುತ್ತಿದ್ದಾಗ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾದ ಘಟನೆ ಕಿರಿಮಂಜೇಶ್ವರ ಸಮೀಪದ ಕೊಡೇರಿಯಲ್ಲಿ ನಡೆದಿದೆ. 

ಉಡುಪಿ, ಆಗಸ್ಟ್ 16: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಹಿಂದಿರುಗುತ್ತಿದ್ದಾಗ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಕಣ್ಮರೆಯಾದ ಘಟನೆ ಕಿರಿಮಂಜೇಶ್ವರ ಸಮೀಪದ ಕೊಡೇರಿಯಲ್ಲಿ ನಡೆದಿದೆ. 

ದೋಣಿಯಲ್ಲಿ ಹನ್ನೊಂದು ಮಂದಿ ಮೀನುಗಾರಿಕೆಗೆ ತೆರಳಿದ್ದರು. ಹಿಂತಿರುಗಿ ಬರುತ್ತಿದ್ದಾಗ ಬಿರುಗಾಳಿಗೆ ಸಿಲುಕಿದ ದೋಣಿ ಅಲೆಗಳ ಹೊಡೆತಕ್ಕೆ ಬಂಡೆಗೆ ಅಪ್ಪಳಿಸಿದೆ. ದೋಣಿ ಪಲ್ಟಿಯಾಗಿದ್ದು ಅದರಲ್ಲಿದ್ದವರು ಸಮುದ್ರಕ್ಕೆ ಬಿದ್ದಿದ್ದಾರೆ. ಈ ಪೈಕಿ ಏಳು ಮಂದಿ ಅಲೆಗಳ ಮಧ್ಯೆ ಈಜುತ್ತಿದ್ದಾಗ ಸ್ಥಳೀಯ ದೋಣಿಗಳ ಮೂಲಕ ರಕ್ಷಣೆ ಮಾಡಲಾಗಿದೆ. ಈ ವೇಳೆ ನಾಲ್ವರು ಮೀನುಗಾರರು ಕಣ್ಮರೆಯಾಗಿದ್ದಾರೆ. ಇಬ್ಬರು ದೋಣಿಯ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗ್ತಿದೆ. ಬಲೆಯಲ್ಲಿ ಸಿಲುಕಿದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮಳೆ ಮತ್ತು ಗಾಳಿಯಿಂದಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಕಾರ್ಯಾಚರಣೆಗೆ ತೊಡಕಾಗುತ್ತಿದೆ. ಸ್ಥಳದಲ್ಲಿ ಮೀನುಗಾರರು ಮತ್ತು ಪೊಲೀಸರು ಸೇರಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ‌.

VIDEO: