ಬ್ರೇಕಿಂಗ್ ನ್ಯೂಸ್
19-02-21 01:39 am Mangaluru Correspondent ಕರಾವಳಿ
ಮಂಗಳೂರು, ಫೆ.18: ಮೆಡಿಕಲ್ ಕಾಲೇಜುಗಳನ್ನು ಗುರಿಯಾಗಿಸಿ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ನಡೆಸುತ್ತಿರುವ ಐಟಿ ದಾಳಿ ಪ್ರಕರಣದಲ್ಲಿ ಇಲಾಖೆಯ ದೆಹಲಿ ವಿಭಾಗದಿಂದ ಅಧಿಕೃತ ಮಾಹಿತಿಯನ್ನು ನೀಡಲಾಗಿದೆ. ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳನ್ನು ಬ್ಲಾಕ್ ಮಾಡಿ, ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಜಾಲವನ್ನು ತನಿಖೆಯಲ್ಲಿ ಪತ್ತೆ ಹಚ್ಚಲಾಗಿದೆ. ಕಾಲೇಜಿನ ಆಡಳಿತಗಳು ಬೇನಾಮಿ ಹೆಸರಲ್ಲಿ ನಗದು ಹಣ ಪಡೆದು ಭಾರೀ ಪ್ರಮಾಣದ ಗೋಲ್ಮಾಲ್ ಮಾಡುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜುಗಳ ಹೆಸರಲ್ಲಿ 9 ಟ್ರಸ್ಟ್ ಗಳನ್ನು ರಿಜಿಸ್ಟರ್ ಮಾಡಲಾಗಿದ್ದು, ಇವುಗಳಿಗೆ ಸಂಬಂಧಿಸಿ ಕರ್ನಾಟಕ ಮತ್ತು ಕೇರಳದ 56 ವಿವಿಧ ಕಡೆ ದಾಳಿ ನಡೆಸಲಾಗಿದೆ. ವೈದ್ಯಕೀಯ ಕಾಲೇಜುಗಳ ಸೀಟುಗಳನ್ನು ಉದ್ದೇಶಪೂರ್ವಕವಾಗಿ ಬುಕ್ಕಿಂಗ್ ಮಾಡಿಟ್ಟು ಹೆಚ್ಚು ಮೊತ್ತದ ಹಣಕ್ಕೆ ಮಾರಾಟ ಮಾಡುವ ಅಂಶ ಬಯಲಾಗಿದೆ. ವಿದ್ಯಾರ್ಥಿಗಳಿಂದ ಹೀಗೆ ಪಡೆದ ಹಣವನ್ನು ಬೇನಾಮಿ ಹೆಸರಲ್ಲಿ ಟ್ರಸ್ಟ್ ಗಳಿಗೆ ರವಾನೆ ಮಾಡುತ್ತಿದ್ದು, ಎರಡು ದಿನಗಳ ಪರಿಶೀಲನೆಯಲ್ಲಿ ಸುಮಾರು 402 ಕೋಟಿ ರೂಪಾಯಿ ಬೇನಾಮಿ ಆಸ್ತಿ ಕಂಡುಬಂದಿದೆ. ಈ ರೀತಿ ಟ್ರಸ್ಟ್ ಗಳಿಗೆ ಹಣ ಹೂಡಿಕೆ ಮಾಡುವ ಮೂಲಕ ಕಾಲೇಜು ಆಡಳಿತಗಳು ಆದಾಯ ತೆರಿಗೆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುತ್ತಿದ್ದವು. ಇದಲ್ಲದೆ, ಟ್ರಸ್ಟ್ ಗಳ ಉಸ್ತುವಾರಿ ಹೊಂದಿದ್ದ ಟ್ರಸ್ಚಿಗಳ ಮನೆಯಲ್ಲಿ ಪರಿಶೀಲನೆ ವೇಳೆ, ವಿವಿಧೆಡೆಗಳಲ್ಲಾಗಿ 15.09 ಕೋಟಿ ರೂ. ನಗದು ಹಣ ಪತ್ತೆಯಾಗಿದೆ. 30 ಕೋಟಿ ಮೌಲ್ಯದ 81 ಕೇಜಿ ಚಿನ್ನಾಭರಣಗಳು, 50 ಕ್ಯಾರಟ್ ವಜ್ರ ಮತ್ತು 40 ಕೇಜಿ ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡಲಾಗಿದೆ.
ಇದಲ್ಲದೆ, ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಭಾರೀ ಹೂಡಿಕೆ ಮಾಡಿರುವುದನ್ನೂ ಪತ್ತೆ ಮಾಡಲಾಗಿದೆ. ಘಾನಾ ದೇಶದಲ್ಲಿ 2.39 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ದಾಖಲೆ ಪತ್ರಗಳು ಸಿಕ್ಕಿವೆ. ಬೇನಾಮಿ ಹೆಸರಲ್ಲಿ 35 ಲಕ್ಸುರಿ ಕಾರುಗಳನ್ನು ಹೊಂದಿರುವುದನ್ನು ಕೂಡ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ತನಿಖೆ ಇನ್ನೂ ಮುಂದುವರಿಯಲಿದೆ ಎಂದು ಆದಾಯ ತೆರಿಗೆ ಇಲಾಖೆ, ದೆಹಲಿ ವಿಭಾಗದಿಂದ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೀಟು ಬ್ಲಾಕ್ ಮಾಡಿ ಭಾರೀ ಮೊತ್ತಕ್ಕೆ ಮಾರಾಟ
ವೈದ್ಯಕೀಯ ಸೀಟುಗಳನ್ನು ಪಾರದರ್ಶಕವಾಗಿ ನೀಟ್ ಮೂಲಕ ನಡೆಸಲು ಮಾರ್ಗದರ್ಶಿ ಇದ್ದರೂ, ಅದನ್ನು ಮೆಡಿಕಲ್ ಕಾಲೇಜುಗಳು ಪಾಲನೆ ಮಾಡುತ್ತಿರಲಿಲ್ಲ. ಕಾಲೇಜಿನ ಮುಖ್ಯಸ್ಥರು ಏಜಂಟರ ಮೂಲಕ ಸೀಟುಗಳನ್ನು ಬುಕ್ ಮಾಡಿಸುತ್ತಿದ್ದರು. ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಮಂದಿಯ ಹೆಸರಲ್ಲಿ ಅವರಿಗೆ ತಿಳಿಯದಿದ್ದರೂ, ಸೀಟು ಬುಕ್ ಮಾಡಿಟ್ಟು ಇತರೇ ಅಭ್ಯರ್ಥಿಗಳಿಗೆ ತಮ್ಮ ಕಾಲೇಜಿನಲ್ಲಿ ಸೀಟು ಬುಕ್ ಆಗಿರುವಂತೆ ತೋರಿಸುತ್ತಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕೌನ್ಸಿಲಿಂಗ್ ಸಂದರ್ಭದಲ್ಲಿ ಬೇನಾಮಿ ವ್ಯಕ್ತಿಗಳು, ಏಜಂಟರು, ಕಾಲೇಜು ಮುಖ್ಯಸ್ಥರು ಆಪ್ತರು ಅಥವಾ ಇನ್ನಾವುದೇ ಬ್ರೋಕರ್ ವ್ಯಕ್ತಿಗಳು ಮೆಡಿಕಲ್ ಸೀಟುಗಳನ್ನು ಬ್ಲಾಕ್ ಮಾಡುತ್ತಿದ್ದರು. ಈ ಮೂಲಕ ರೆಗ್ಯುಲರ್ ಸೀಟುಗಳನ್ನು ಭರ್ತಿಯಾದಂತೆ ತೋರಿಸಿ, ಮ್ಯಾನೇಜ್ ಮೆಂಟ್ ಕೋಟಾದಡಿ ಖಾಲಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಮ್ಯಾನೇಜ್ಮೆಂಟ್ ಕೋಟಾದಡಿ ಹೆಚ್ಚು ಮೊತ್ತಕ್ಕೆ ಸೀಟುಗಳನ್ನು ಬಿಕರಿ ಮಾಡಲು ಅವಕಾಶ ಇರುವುದರಿಂದ ಡಿಮಾಂಡ್ ಮಾಡಿ, ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದರು.
ಕಡಿಮೆ ಮಾರ್ಕ್ ಇದ್ದವರಿಗೆ ಸೀಟು ಮಾರಾಟ
ಹೀಗೆ ಮ್ಯಾನೇಜ್ಮೆಂಟ್ ಕೋಟಾದಡಿ ಬರುವ ಸೀಟುಗಳನ್ನು ನೀಟ್ ಪರೀಕ್ಷೆಯಲ್ಲಿ ಅತ್ಯಂತ ಕಳಪೆ ಮಾರ್ಕ್ ಹೊಂದಿದ್ದವರಿಗೆ ಭಾರೀ ದುಡ್ಡು ಕೊಟ್ಟು ಸೀಟುಗಳನ್ನು ಪಡೆಯಲು ಅವಕಾಶ ಮಾಡುತ್ತಿದ್ದರು. ನಗದು ರೂಪದಲ್ಲಿ ಡೊನೇಶನ್, ಕ್ಯಾಪಿಟೇಶನ್ ಶುಲ್ಕ ಪಡೆದು ಈ ಸೀಟುಗಳನ್ನು ತುಂಬಲಾಗುತ್ತಿತ್ತು. ಈ ರೀತಿ ಮಾಡುವುದು ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕಾಯ್ದೆ 1984ರ ಪ್ರಕಾರ ಕಾನೂನು ಉಲ್ಲಂಘನೆಯಾಗುತ್ತದೆ. ಹೀಗೆ ಬರುತ್ತಿದ್ದ ಹಣವನ್ನು ಏಜಂಟರು, ಬ್ರೋಕರ್ ಅಥವಾ ಟ್ರಸ್ಟಿಗಳ ಆಪ್ತರು, ಕಾಲೇಜುಗಳ ಸಿಬಂದಿ ಹೆಸರಲ್ಲಿ ಸಂಗ್ರಹ ಮಾಡಲಾಗುತ್ತಿತ್ತು. ಐಟಿ ಅಧಿಕಾರಿಗಳ ದಾಳಿ ವೇಳೆ, ಈ ರೀತಿ ಅಕ್ರಮವಾಗಿ ಹಣದ ಸಂಗ್ರಹ ಮಾಡಿರುವುದು ಮತ್ತು ನಗದು ರೂಪದಲ್ಲಿ ಹಣ ಪಡೆದು ಹೂಡಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಸಾಕ್ಷ್ಯಗಳು ಸಿಕ್ಕಿವೆ. ಮೆಡಿಕಲ್ ಕಾಲೇಜುಗಳ ಆಡಳಿತಗಳು ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ಪದವಿ ಎಂಡಿ ಸೀಟುಗಳ ಹೆಸರಲ್ಲಿ ಕಳೆದ ಹಲವಾರು ವರ್ಷಗಳಿಂದ ನಗದು ರೂಪದಲ್ಲಿ ಭಾರೀ ಮೊತ್ತದ ಡೊನೇಶನ್ ಪಡೆದು ಸರಕಾರಕ್ಕೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಣ ಪಡೆದು ಪರೀಕ್ಷೆ ಪಾಸ್ ವ್ಯವಸ್ಥೆ
ಇದಲ್ಲದೆ, ಈ ರೀತಿ ಭಾರೀ ಮೊತ್ತ ಕೊಟ್ಟು ಬರುವ ವಿದ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ವೈವಾ ಪರೀಕ್ಷೆಗಳಲ್ಲಿ ಪಾಸ್ ಮಾಡುವ ಪ್ಯಾಕೇಜ್ ಅರೇಂಜ್ ಮೆಂಟ್ ವ್ಯವಸ್ಥೆ ಇರುವುದು ಕೂಡ ಒಂದು ಕಾಲೇಜಿನಲ್ಲಿ ಕಂಡುಬಂದಿದೆ. ಅದಕ್ಕಾಗಿ ಒಂದು ಲಕ್ಷ , ಎರಡು ಲಕ್ಷ ಎಂದು ವಿಭಾಗಕ್ಕೆ ತಕ್ಕಂತೆ ಬೇರೆ ಬೇರೆ ರೂಪದಲ್ಲಿ ಹಣ ಪಡೆಯುತ್ತಿದ್ದರು. ಹೀಗೆ ಸಂಗ್ರಹವಾಗುತ್ತಿದ್ದ ನಗದು ಹಣವನ್ನು ನಾನ್ ಚಾರಿಟೇಬಲ್ ಉದ್ದೇಶಗಳಿಗೆ ಡೈವರ್ಟ್ ಮಾಡುತ್ತಿದ್ದುದನ್ನು ಪತ್ತೆ ಮಾಡಲಾಗಿದೆ. ಕಾಲೇಜಿನ ಟ್ರಸ್ಟಿಗಳು ಮಾಡುತ್ತಿದ್ದ ಈ ರೀತಿಯ ಪ್ರಕ್ರಿಯೆ 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12 ಎಎ ಪ್ರಕಾರ ಅಪರಾಧವಾಗಿರುತ್ತದೆ. ಇದಲ್ಲದೆ, ಭಾರೀ ಮೊತ್ತವನ್ನು ಲ್ಯಾಂಡ್ ಇನ್ನಿತರ ಸ್ಥಿರಾಸ್ತಿ ಖರೀದಿಗಳಿಗೆ ಬಳಕೆ ಮಾಡಲಾಗುತ್ತಿತ್ತು. ಒಂದು ಕಾಲೇಜಿನಲ್ಲಂತೂ ಹೀಗೆ ಸಂಗ್ರಹವಾದ ಹಣವನ್ನು ಟಿಂಬರ್, ಪ್ಲೈವುಡ್ ಇಂಡಸ್ಟ್ರೀಸ್ ಗಳಿಗೆ ಬಳಕೆ ಮಾಡುತ್ತಿರುವುದು ಕೂಡ ತನಿಖೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಎಜೆ ಶೆಟ್ಟಿ, ಯೇನಪೋಯ, ಕಣಚೂರು, ಶ್ರೀನಿವಾಸ ಮೆಡಿಕಲ್ ಕಾಲೇಜು ಸೇರಿದಂತೆ ರಾಜ್ಯದಲ್ಲಿ ತುಮಕೂರು, ದಾವಣಗೆರೆ, ಬೆಂಗಳೂರು ಹೀಗೆ ಹತ್ತಕ್ಕೂ ಹೆಚ್ಚು ಕಾಲೇಜುಗಳ ಆಡಳಿತ ಕಚೇರಿ ಮತ್ತು ಮುಖ್ಯಸ್ಥರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
Also Read:
Income tax raids on Medical Colleges in Mangalore, Karnataka has detected more than 400 crores of undeclared wealth and money by college owners. It is also revealed that medical seats were sold in black and a big mafia of medical institutions has been exposed by IT sleuths.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
17-03-25 10:57 pm
HK News Desk
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
17-03-25 11:02 pm
Udupi Correspondent
Mangalore Accident, Kallapu: ನಿಯಂತ್ರಣ ತಪ್ಪಿ ಆ...
17-03-25 08:01 pm
Mangalore, Chakravarthy Sulibele, FIR: ಅನ್ಯಧರ...
17-03-25 04:27 pm
Mangalore Accident, Harekala, Death: ಹರೇಕಳದಲ್...
17-03-25 11:29 am
UT Khader, Mangalore, Tulu Academy: ತುಳು ಕಲಿತ...
16-03-25 10:55 pm
17-03-25 07:51 pm
Mangalore Correspondent
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm