ಬ್ರೇಕಿಂಗ್ ನ್ಯೂಸ್
17-05-21 11:10 am Mangalore Correspondent ಕರಾವಳಿ
ಮಂಗಳೂರು, ಮೇ 17: ಪಡುಬಿದ್ರಿ ಬಳಿಯ ಸಮುದ್ರದಲ್ಲಿ ಸಿಕ್ಕಿಬಿದ್ದಿರುವ ಎಂಆರ್ ಪಿಎಲ್ ಗುತ್ತಿಗೆ ಕೆಲಸ ಮಾಡುವ ಟಗ್ ಬೋಟಿನ ಕಾರ್ಮಿಕರ ರಕ್ಷಣೆಗೆ ಕೊಚ್ಚಿಯಿಂದ ಹೆಲಿಕಾಪ್ಟರ್ ಬಂದಿದ್ದು ಎಲ್ಲ ಒಂಬತ್ತು ಮಂದಿಯನ್ನೂ ರಕ್ಷಿಸಲಾಗಿದೆ.
ಇಂದು ಬೆಳಗ್ಗೆ ಏಳು ಗಂಟೆಗೆ ಕೊಚ್ಚಿಯಿಂದ ಮಂಗಳೂರಿಗೆ ಬಂದ ನೌಕಾಪಡೆಯ ಹೆಲಿಕಾಪ್ಟರ್, ಎಂಟು ಗಂಟೆ ಸುಮಾರಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಪಡುಬಿದ್ರಿ ಬಳಿಯಿಂದ ಐದು ಮೈಲ್ ದೂರವಿರುವ ಸಮುದ್ರ ಮಧ್ಯೆ ಟಗ್ ಸಿಕ್ಕಿಹಾಕಿಕೊಂಡಿದ್ದು ಅದನ್ನು ರಕ್ಷಣೆ ಮಾಡುವುದು ಕೋಸ್ಟ್ ಗಾರ್ಡ್ ಪಡೆಗೆ ಸವಾಲಾಗಿತ್ತು. ಹೀಗಾಗಿ ದ.ಕ. ಜಿಲ್ಲಾಧಿಕಾರಿ ನಿನ್ನೆ ಸಂಜೆಯೇ ರಾಜ್ಯದ ಸಿಎಂ ಕಚೇರಿಯಿಂದ ಅನುಮತಿ ಪಡೆದು ನೌಕಾಪಡೆಯ ನೆರವು ಕೋರಿದ್ದರು. ಸಮುದ್ರ ತುಂಬ ರಫ್ ಇದ್ದುದರಿಂದ ಮತ್ತು ಗಾಳಿ ವೇಗವಾಗಿ ಬೀಸುತ್ತಿರುವುದರಿಂದ ರಕ್ಷಣೆಗೆ ಹೆಲಿಕಾಪ್ಟರ್ ತರಿಸಲು ಕೇಳಿಕೊಂಡಿದ್ದರು. ಗೋವಾದಿಂದ ಹೆಲಿಕಾಪ್ಟರ್ ತರಿಸುವ ಯೋಚನೆ ಮಾಡಲಾಗಿತ್ತಾದರೂ, ನಿನ್ನೆ ಸಂಜೆಯಿಂದ ಗೋವಾ ಭಾಗದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಿದ್ದರಿಂದ ಕೊಚ್ಚಿ ವಿಭಾಗದಿಂದ ನೆರವು ಕೇಳಲಾಗಿತ್ತು.
ಇಂದು ಬೆಳಗ್ಗೆ ಕೊಚ್ಚಿಯಿಂದ ಆಗಮಿಸಿದ ಹೆಲಿಕಾಪ್ಟರ್, ಮಂಗಳೂರು ಏರ್ಪೋರ್ಟ್ ಗೆ ಬಂದು ಕಾರ್ಯಾಚರಣೆ ಆರಂಭಿಸಿದೆ. ಬೆಳಗ್ಗೆ 10.30 ರ ವೇಳೆಗೆ ಎಲ್ಲ ಒಂಬತ್ತು ಮಂದಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಕಾಪ್ಟರ್ ನಲ್ಲಿ ಒಬ್ಬೊಬ್ಬರನ್ನೇ ಮೇಲಕ್ಕೆ ತಂದು ಬಳಿಕ ಅಲ್ಲಿಯೇ ಸನಿಹ ಇದ್ದ ಕೋಸ್ಟ್ ಗಾರ್ಡ್ ಪಡೆಯ ಹಡಗಿನಲ್ಲಿ ಇಳಿಸಲಾಗಿತ್ತು. ಇಂದು ಬೆಳಗ್ಗಿನ ಹೊತ್ತಿಗೆ ಸಮುದ್ರ ಬಿರುಸು ಕಳಕೊಂಡಿದ್ದರಿಂದ ಕೋಸ್ಟ್ ಗಾರ್ಡ್ ಸಿಬಂದಿಯೂ ಸ್ಪೀಡ್ ಬೋಟ್ ನಲ್ಲಿ ರಕ್ಷಣೆಗೆ ಇಳಿದಿದ್ದರು.
ಕೋಸ್ಟ್ ಗಾರ್ಡ್ ಹಡಗು ಕಳೆದ ಎರಡು ದಿನಗಳಿಂದ ಟಗ್ ನಲ್ಲಿರುವ ಒಂಬತ್ತು ಕಾರ್ಮಿಕರ ಬಗ್ಗೆ ನಿಗಾ ಇಟ್ಟಿತ್ತು. ಎಂಆರ್ ಪಿಎಲ್ ನಲ್ಲಿ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ ಟಗ್ ಕಾರ್ಮಿಕರು ಮೊನ್ನೆ ಶನಿವಾರ ದಡಕ್ಕೆ ಬರುವ ಯೋಚನೆ ಮಾಡಿದ್ದರು. ಆದರೆ, ಅಷ್ಟರಲ್ಲಿ ಚಂಡಮಾರುತ ಪ್ರಭಾವಕ್ಕೆ ಸಿಲುಕಿ ಸಮುದ್ರದಲ್ಲಿ ಅಪಾಯಕ್ಕೀಡಾಗಿದ್ದರು. ಗಾಳಿಯ ರಭಸಕ್ಕೆ ಜನರೇಟರ್ ಕೈಕೊಟ್ಟಿದ್ದರಿಂದ ಇಂಜಿನ್ ಚಾಲೂ ಆಗದೆ, ಗಾಳಿ ಬಂದ ಕಡೆಗೆ ತೇಲುತ್ತಾ ಹೋಗುವಂತಾಗಿತ್ತು.
ಎನ್ಎಂಪಿಟಿ ಬಂದರು ವ್ಯಾಪ್ತಿಗೆ ಬರುವ ಈ ಟಗ್, ಚಂಡಮಾರುತದ ಎಚ್ಚರಿಕೆ ಇದ್ದರೂ ಸಮುದ್ರದಲ್ಲಿ ಯಾಕೆ ಉಳಿದುಕೊಂಡಿತ್ತು. ಇದಕ್ಕೆ ಎಂಆರ್ ಪಿಎಲ್ ಮತ್ತು ಎನ್ಎಂಪಿಟಿ ಬಂದರು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೇ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎರಡೂ ಸಂಸ್ಥೆಗಳಿಂದ ಪ್ರತ್ಯೇಕ ವರದಿ ನೀಡುವಂತೆ ಕೇಳಿದ್ದಾರೆ.
MRPL Tugboat with Nine persons that were stranded through cyclone Tauktae has been rescued by Mangalore Coast Gaurd through the help of Cochi Helicopter. All the nine are said to be safe.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm