ಬ್ರೇಕಿಂಗ್ ನ್ಯೂಸ್
28-08-20 07:48 pm Dhruthi Anchan - Correspondant ಕರಾವಳಿ
ಮಂಗಳೂರು, ಆಗಸ್ಟ್ 28: ನಮ್ಮನ್ನಾಳುವ ಸರ್ಕಾರಗಳು ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಡಿ.ವೈ.ಎಫ್.ಐ ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್‌ರವರು ಆರೋಪಿಸಿದರು.
ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವುದರ ಜೊತೆಗೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಅನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ಆಗಸ್ಟ್ 28ರಂದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಇದೇ ವೇಳೆ ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ಡಿ.ವೈ.ಎಫ್.ಐ ಜನರ ಬದುಕಿನ ಪ್ರಶ್ನೆಯನ್ನು ಮುಂದಿಟ್ಟು ನಿರಂತರವಾಗಿ ಹೋರಾಟವನ್ನು ನಡೆಸುತ್ತದೆ ಹಾಗೂ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲರವರು ಮಾತನಾಡಿ ಡಿ.ವೈ.ಎಫ್.ಐ ನ ಹೋರಾಟದ ಫಲವಾಗಿ ಇಂದು ಸಮುದಾಯ ಆರೋಗ್ಯ ಕೇಂದ್ರ ಹೊಸ ಕಟ್ಟಡದಲ್ಲಿ ರಚನೆಗೊಂಡಿದ್ದು, ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣಿಸುತ್ತಿದೆ ಎಂದು ಹೇಳಿದರು.
ನ್ಯಾಯವಾದಿ ತುಳಸೀದಾಸ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಡಿ.ವೈ.ಎಫ್.ಐ ವಿಟ್ಲ ವಲಯಾದ್ಯಕ್ಷ ನುಜುಮ್ ಅಳಿಕೆ ಸ್ವಾಗತಿಸಿದರು, ಪ್ರಜಾ ಪರಿವರ್ತನಾ ವೇದಿಕೆ ಇದರ ಮುಖಂಡರಾದ ಕೃಷ್ಣಪ್ಪ ಪುದ್ದೊಟ್ಟು, ಬಿ.ಟಿ.ಕುಮಾರ್, ನ್ಯಾಯವಾದಿ ಮಹಮ್ಮದ್ ಗಝಾಲಿ, ಡಿ.ವೈ.ಎಫ್.ಐ ವಿಟ್ಲ ವಲಯ ಕಾರ್ಯದರ್ಶಿ ಜಮೀಲ್, ಮುಖಂಡರಾದ ಶಹೀದ್ ಶೈನ್, ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿಯನ್ನು ವಿಟ್ಲ ಅರೋಗ್ಯ ಅಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು.
19-08-26 09:55 pm
HK News Staffer
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
ಆಹಾರ ಸುರಕ್ಷತೆಗೆ ಖಾದರ್ ಹೊಸ ಪ್ಲ್ಯಾನ್; ಹೋಟೆಲ್ ಆ...
17-08-26 02:26 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
20-08-26 05:16 pm
HK News Staffer
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
ಜೈಲಿನ ಜಾಮರ್ ಸಮಸ್ಯೆ ಇತ್ಯರ್ಥಕ್ಕೆ ಕಾಲಮಿತಿ ನಿಗದಿಪ...
19-08-26 04:19 pm
ಕರಾವಳಿಯಲ್ಲಿ ನಾಗರ ಪಂಚಮಿ ಸಂಭ್ರಮ ; ನಾಗಬನ, ನಾಗ ಸ...
17-08-26 05:07 pm
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
20-08-26 08:06 pm
HK News Staffer
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಭ್ರಷ್ಟಾಚ...
20-08-26 01:58 pm
4.91 ಕೋಟಿ ರೂ. ಮೌಲ್ಯದ ನಕಲಿ ಔಷಧಿ ದಂಧೆ ಬಯಲು; ಆಸ...
19-08-26 07:25 pm