ಬ್ರೇಕಿಂಗ್ ನ್ಯೂಸ್
09-06-21 01:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 9: ನಗರದ ಕದ್ರಿ ಕಂಬ್ಲದಲ್ಲಿ ಬೆಳ್ಳಂಬೆಳಗ್ಗೆ ದಂಪತಿ ಸಾವಿಗೆ ಶರಣಾಗಿದ್ದು ಸ್ಥಳೀಯರಲ್ಲಿ ಅಚ್ಚರಿ ಸೃಷ್ಟಿಸಿತ್ತು. ಸ್ಥಳೀಯರು ಚಾಪೆಯಿಂದ ಎದ್ದು ಹೊರಬರುವಷ್ಟರಲ್ಲಿ ಹೊರಗೆ ಜನ ಸೇರಿದ್ದರು. ಅಲ್ಲಿನ ಎಲ್ಲರಿಗೂ ಪರಿಚಿತರೇ ಆಗಿದ್ದ ಸುರೇಶ್ ಶೆಟ್ಟಿ ಮತ್ತು ಅವರ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ತಿಳಿದು ಕದ್ರಿಯ ಪೊಲೀಸರೂ ಆಗಮಿಸಿದ್ದರು.
ಕದ್ರಿ ಕಂಬ್ಳದ ಪಿಂಟೋಸ್ ಲೇನ್ ಬಳಿಯ ಚೌಟರ ಕಂಪೌಂಡಿನಲ್ಲಿರುವ 52 ಹರೆಯದ ಸುರೇಶ್ ಶೆಟ್ಟಿಯವರದ್ದು ಸ್ವಂತ ಮನೆ. ಬಂದರಿನಲ್ಲಿ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡು ಸ್ವಂತ ವ್ಯವಹಾರ ಹೊಂದಿದ್ದ ಸುರೇಶ್ ಅಲ್ಲಿಂದಲ್ಲಿಗೆ ಸ್ಥಿತಿವಂತರು. ಪತ್ನಿ ವಾಣಿಶ್ರೀ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಒಂದೇ ವರ್ಷದ ಅಂತರದಲ್ಲಿ ಬೆನ್ನು ಬೆನ್ನಿಗೆ ಬಂದ ಲಾಕ್ಡೌನ್ ಈ ಕುಟುಂಬವನ್ನು ಹೈರಾಣು ಮಾಡಿತ್ತು.
ಪತ್ನಿ ವಾಣಿಶ್ರೀ ಸ್ಥಳೀಯ ಪರಿಸರದ ನಿವಾಸಿಗಳು ಮತ್ತು ಸಂಬಂಧಿಕರನ್ನು ಒಳಗೊಳಿಸಿ ಚೀಟಿ ವ್ಯವಹಾರ ನಡೆಸುತ್ತಿದ್ದರು. 40 ಜನರನ್ನು ಒಳಗೊಂಡ ಎರಡು ಲಕ್ಷದ ಫಂಡ್ ಇಟ್ಟು ತಿಂಗಳ ಕಂತಿನ ವ್ಯವಹಾರ. ಆದರೆ, ಲಾಕ್ಡೌನ್ ಪರಿಣಾಮ ಎಂದು ಹೇಳಿ ಫಂಡ್ ಹಣ ತೆಗೆದವರು ಮರಳಿ ಕಟ್ಟುತ್ತಿರಲಿಲ್ಲ. ಹೀಗಾಗಿ ಪ್ರತೀ ತಿಂಗಳಲ್ಲಿ ಕಂತಿನ ಹಣ ಮತ್ತು ಚೀಟಿ ತೆಗೆಯುವ ವಹಿವಾಟು ನಡೆಯುತ್ತಿದ್ದರೂ ಕೆಲವರು ಹಣ ಪಾವತಿಸದ ಕಾರಣ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಈ ಬಗ್ಗೆ ಕೇಳಿದಾಗ, ಫಂಡಿಗೆ ಹಣ ನೀಡಬೇಕಾದ ಕೆಲವರು ಧಮ್ಕಿಯನ್ನೂ ಹಾಕುತ್ತಿದ್ದರಂತೆ.
ಫಂಡ್ ತೆಗೆದವರಿಗೆ ಸಕಾಲದಲ್ಲಿ ಹಣ ಹೊಂದಿಸಲಾಗದೆ ದಂಪತಿ ಕೈಸುಟ್ಟುಕೊಂಡಿದ್ದರೆ, ಇದೇ ವೇಳೆ ಹಣ ಆಗಬೇಕಾದವರು ಮನೆ ಬಾಗಿಲಿಗೆ ಬಂದು ಉಗಿಯುತ್ತಿದ್ದರು. ಇದರಿಂದ ಮುಖ ಮುಚ್ಚಿಕೊಳ್ಳುವ ಸ್ಥಿತಿ ಎದುರಿಸಿದ್ದ ದಂಪತಿಗೆ ಬೇರೇನು ತೋಚಲಿಲ್ಲವೋ ಏನೋ.. ಇಂದು ಬೆಳಗ್ಗೆ ಎದ್ದವರೇ ಪತ್ನಿ ವಾಣಿಶ್ರೀ ಮನೆ ಮಹಡಿಯ ಮೇಲಿನ ಟೆರೇಸಿನಲ್ಲಿ ಹಾಕಿದ್ದ ರೂಫ್ ಟಾಪ್ ಶೀಟಿಗೆ ಹಗ್ಗ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ.
ಈ ವೇಳೆ, ಮನೆಯಿಂದ ಸಾಮಗ್ರಿ ತರಲು ಹೊರ ಹೋಗಿದ್ದರೋ ಏನೋ, ಹಿಂತಿರುಗಿ ಬಂದ ಸುರೇಶ್ ಶೆಟ್ಟಿ ಪತ್ನಿಯನ್ನು ನೋಡಿ ದಿಕ್ಕೆಟ್ಟು ಹೋಗಿದ್ದಾರೆ. ಕೂಡಲೇ ವಾಣಿಶ್ರೀ ಸಾವಿನ ಬಗ್ಗೆ ಆಕೆಯ ಸೋದರಿಯರಿಗೆ ಫೋನ್ ಮಾಡಿ ತಿಳಿಸಿದ್ದು, ಆಕೆಯಿಲ್ಲದೆ ನಾನು ಕೂಡ ಬದುಕುವುದಿಲ್ಲ. ನಾನು ಕೂಡ ಸಾಯುವುದಾಗಿ ಹೇಳಿ ಫೋನ್ ಇಟ್ಟಿದ್ದಾರೆ. ಸೋದರಿಯರು ಮತ್ತು ಹತ್ತಿರದ ಸಂಬಂಧಿಕರು ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಮೇಜಿನಲ್ಲಿ ಇಟ್ಟಿದ್ದ ಪತ್ರವೊಂದು ಕಂಡುಬಂದಿತ್ತು. ಚೀಟಿಯಲ್ಲಿ ನಾನು ಎದುರಿನ ಮನೆಯ ನವೀನರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದಿಟ್ಟಿದ್ದರು. ಸುರೇಶ್ ಶೆಟ್ಟಿಯ ಮನೆ ಮುಂಭಾಗದಲ್ಲಿ ಮೂರು ಬಾವಿಗಳಿದ್ದು, ಅದರಲ್ಲಿ ನವೀನ್ ಎಂಬವರ ಮನೆಯ ಬಾವಿಯೂ ಒಂದು.
ಸಂಬಂಧಿಕರು ಅಲ್ಲಿ ನೋಡಿ ಪರಿಶೀಲನೆ ನಡೆಸಿದಾಗ ಬಾವಿಯಲ್ಲಿ ಪ್ಯಾಂಟ್, ಶರ್ಟ್ ಹಾಕಿಕೊಂಡೇ ಇದ್ದ ಸುರೇಶ್ ಶೆಟ್ಟಿಯ ಶವ ಪತ್ತೆಯಾಗಿದೆ. ಚೀಟಿ ವಹಿವಾಟು, ಲಾಕ್ಡೌನ್ ಪರಿಣಾಮದ ಚಿಂತೆಯಿಂದ ದಂಪತಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಶವವಾಗಿದ್ದರು. ಬೆಳಗ್ಗೆ ಏಳು ಗಂಟೆ ಒಳಗೆ ಎಲ್ಲವೂ ನಡೆದು ಹೋಗಿದ್ದು ಪರಿಸರದ ಮನೆಮಂದಿ ಎದ್ದು ಹೊರ ಬರುವಷ್ಟರಲ್ಲಿ ಆಘಾತವೇ ಎದುರಾಗಿತ್ತು.
ಸ್ಥಳಕ್ಕೆ ಬಂದಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್, ಘಟನೆಯ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಈ ರೀತಿಯ ಚೀಟಿ ವ್ಯವಹಾರದಲ್ಲಿ ವಂಚನೆ ಎಸಗಿದರೆ ಪೊಲೀಸ್ ದೂರು ಕೊಡಬಹುದಿತ್ತು. ಲಾಕ್ಡೌನ್ ಸಮಯದಲ್ಲಿ ಹೆಚ್ಚು ಬಡ್ಡಿಗೆ ಸತಾಯಿಸಿ ಕಿರುಕುಳ ನೀಡಿದರೆ ಅದಕ್ಕೆ ಪ್ರತ್ಯೇಕ ಕಾನೂನಿನಡಿ ಶಿಕ್ಷಿಸುವ ಅವಕಾಶವಿದೆ. ಅದು ಬಿಟ್ಟು ಆರ್ಥಿಕ ದುಸ್ಥಿತಿ ಎದುರಾಯ್ತೆಂದು ಯಾರು ಕೂಡ ಈ ರೀತಿ ದುರಂತಕ್ಕೆ ಎಡೆ ಮಾಡಿಕೊಡಬಾರದು ಎಂದು ಹೇಳಿದರು.
A couple dies by Suicide at Home in Pintos Lane in Kadri, Mangalore. The reason for their death was due to financial crises after a lockdown in Karnataka. A detailed report by Headline Karnataka.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
04-10-25 02:57 pm
HK News Desk
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm