ಬ್ರೇಕಿಂಗ್ ನ್ಯೂಸ್
30-08-20 08:49 pm Headline Karnataka News Network ಕರಾವಳಿ
ಉಡುಪಿ, ಆಗಸ್ಟ್.30: ಕೊರೊನಾ ಲಾಕ್ ಡೌನ್ ಕಾರಣ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ದರ ಆರು ತಿಂಗಳ ಬಳಿಕ ಮತ್ತೆ ಚೇತರಿಸಿಕೊಂಡಿದೆ. ಅಟ್ಟೆ ಮಲ್ಲಿಗೆ ದರ ಆರು ತಿಂಗಳ ನಂತರ ಸಾವಿರ ರೂಪಾಯಿ ಗಡಿ ದಾಟಿದೆ.
ಆರು ತಿಂಗಳ ಬಳಿಕ ಮಲ್ಲಿಗೆ ದರ ಸಾವಿರದ ಗಡಿ ದಾಟಿದ್ದು, ಮಲ್ಲಿಗೆ ಬೆಳಗಾರನ ಮೊಗದಲ್ಲಿ ನಗು ಮೂಡಿಸಿದೆ. ಮುಂಬೈ ಮತ್ತು ವಿದೇಶಗಳಲ್ಲಿ ಭಾರೀ ಬೇಡಿಕೆ ಇರುವ ಉಡುಪಿಯ ಶಂಕರಪುರ ಮಲ್ಲಿಗೆ ದರ, ಕೊರೊನಾ ಹೊಡೆತಕ್ಕೆ ಸಿಕ್ಕಿ ಪಾತಾಳಕ್ಕೆ ಕುಸಿದಿತ್ತು. ಲಾಕ್ ಡೌನ್ ಆರಂಭದಲ್ಲಿ ಮಲ್ಲಿಗೆ ಉಡುಪಿ ಸ್ಥಳೀಯ ಮಾರುಕಟ್ಟೆ ಬಿಟ್ಟು ಬೇರೆ ಕಡೆ ಸಾಗಾಣಿಕೆ ಆಗದೇ ಅಟ್ಟೆ ದರ 50 ರೂ.ಗೆ ಇಳಿದಿತ್ತು. ಎರಡನೇ ಲಾಕ್ ಡೌನ್ ಸಮಯದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ಮಲ್ಲಿಗೆ ಮಾರುಕಟ್ಟೆಯೇ ಬಂದ್ ಆಗಿತ್ತು.
ಲಾಕ್ ಡೌನ್ ತೆರವುಗೊಂಡ ಬಳಿಕ ದರ ಕೊಂಚ ಮಟ್ಟಿಗೆ ಏರಿಕೆಯಾಗಿ ಅಟ್ಟೆಗೆ 100 ರಿಂದ 400 ರೂ. ಆಸುಪಾಸಿನಲ್ಲಿ ಇತ್ತು. ಸದ್ಯ ಮಳೆಯ ಕಾರಣದಿಂದ ಮಲ್ಲಿಗೆ ಇಳುವರಿ ಕಡಿಮೆ. ಅಲ್ಲದೆ ಶ್ರಾವಣ ಮಾಸದಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುವ ಕಾರಣದಿಂದ ದರವೂ ಏರತೊಡಗಿದೆ. ಸದ್ಯಕ್ಕೆ ಮುಂಬಯಿ ಹಾಗೂ ವಿದೇಶಗಳಿಗೆ ಶಂಕರಪುರ ಮಲ್ಲಿಗೆ ರವಾನೆ ಆಗುತ್ತಿಲ್ಲ. ಅದು ಆರಂಭ ಆದ್ರೆ ಮಲ್ಲಿಗೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ
27-04-25 09:22 pm
HK News Desk
Pakistani Nationals Kalaburagi, Police Commis...
27-04-25 07:13 pm
Ex- ISRO chief, K Kasturirangan: ಎನ್ಇಪಿ ಶಿಕ್ಷ...
25-04-25 07:32 pm
ಧರ್ಮದ ಹೆಸರು ಕೇಳಿ ಯಾರನ್ನೂ ಅಲ್ಲಿ ಕೊಂದಿಲ್ಲ, ಕಾಶ್...
25-04-25 07:30 pm
ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸ...
25-04-25 06:30 pm
27-04-25 08:42 pm
HK News Desk
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
ಪಾಕ್ ಗಡಿಯಲ್ಲಿ ಯುದ್ಧ ಕಾರ್ಮೋಡ ; ಗಡಿ ಜಿಲ್ಲೆಗಳಲ್ಲ...
27-04-25 06:35 pm
ಸಿಂಧು ನದಿಯನ್ನು ತಡೆದರೆ ರಕ್ತ ಹರಿಯುತ್ತದೆ ; ಮಾಜಿ...
26-04-25 08:21 pm
Iran Blast: ಇರಾನ್ ಬಂದರಿನಲ್ಲಿ ಭಯಾನಕ ಸ್ಫೋಟ ; 4...
26-04-25 07:46 pm
28-04-25 11:41 am
Mangalore Correspondent
Mangalore, Terror Attack, Doctor Post: ಹೈಲ್ಯಾ...
27-04-25 11:09 pm
Murali krishna, puttur, FIR: ಪೆಟ್ರೋಲ್ ಪಂಪ್ ವ್...
27-04-25 06:25 pm
Vhp, Mangalore, Railway Exam, Janivara: ರೈಲ್ವ...
27-04-25 05:28 pm
Harish Poonja, U T Khader, Mangalore: ಹರೀಶ್ ಪ...
27-04-25 01:00 pm
28-04-25 11:39 am
Mangalore Correspondent
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm