ಎನ್ಎಂಪಿಟಿ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದ ಟಿಪ್ಪರ್ ಲಾರಿ ಹೊರಕ್ಕೆ, ಮತ್ತೊಬ್ಬನ ಶವ ಪತ್ತೆ

21-06-21 10:26 pm       Mangaluru Correspondent   ಕರಾವಳಿ

ಎನ್ಎಂಪಿಟಿ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದು ದುರಂತಕ್ಕೀಡಾಗಿದ್ದ ಟಿಪ್ಪರ್ ಲಾರಿಯನ್ನು ರಕ್ಷಣಾ ತಂಡ ಮೇಲಕ್ಕೆತ್ತಿದ್ದು, ಲಾರಿಯೊಂದಿಗೆ ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಶವವನ್ನೂ ಮೇಲಕ್ಕೆತ್ತಿದೆ.

ಮಂಗಳೂರು, ಜೂ.21: ಎನ್ಎಂಪಿಟಿ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದು ದುರಂತಕ್ಕೀಡಾಗಿದ್ದ ಟಿಪ್ಪರ್ ಲಾರಿಯನ್ನು ರಕ್ಷಣಾ ತಂಡ ಮೇಲಕ್ಕೆತ್ತಿದ್ದು, ಲಾರಿಯೊಂದಿಗೆ ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಶವವನ್ನೂ ಮೇಲಕ್ಕೆತ್ತಿದೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ಹಡಗಿನಿಂದ ಕಬ್ಬಿಣದ ಅದಿರು ಅನ್ಲೋಡಿಂಗ್ ಮಾಡಲೆಂದು ಟಿಪ್ಪರ್ ಲಾರಿ ಹಡಗಿನ ಬಳಿಗೆ ತೆರಳಿತ್ತು. ಖಾಲಿ ಟಿಪ್ಪರ್ ಆಯತಪ್ಪಿ ಬಂದರಿನ 14ನೇ ಬರ್ತ್ ನಲ್ಲಿ ಸಮುದ್ರಕ್ಕೆ ಬಿದ್ದಿದ್ದು, ಆಳಕ್ಕೆ ಹೋಗಿದೆ. ಈ ವೇಳೆ, ಬೇರೊಂದು ಟಗ್ ನಲ್ಲಿದ್ದವರು ಕೂಡಲೇ ಸಿಐಎಸ್ಎಫ್ ಭದ್ರತಾ ವಿಭಾಗಕ್ಕೆ ವಿಷಯ ತಿಳಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

11.50ರ ವೇಳೆಗೆ ಲಾರಿಯ ಚಾಲಕನನ್ನು ಪತ್ತೆ ಮಾಡಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅದಾಗಲೇ ಆತ ಮೃತಪಟ್ಟಿದ್ದ. ಆತನನ್ನು ಬಾಗಲಕೋಟೆ ಮೂಲದ ರಾಜೇಸಾಬ್ (26) ಎಂದು ಗುರುತಿಸಲಾಗಿತ್ತು. ಆತನ ಜೊತೆಗಿದ್ದ ಕ್ಲೀನರ್ ಭೀಮಪ್ಪ ನಾಪತ್ತೆಯಾಗಿದ್ದ. ಇಂದು ಬೆಳಗ್ಗಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸಂಜೆ ಹೊತ್ತಿಗೆ ಟಿಪ್ಪರ್ ಲಾರಿಯನ್ನು ಮೇಲಕ್ಕೆತ್ತಿದ್ದು ಅದರ ಒಳಗೇ ಭೀಮಪ್ಪನ ಶವ ಪತ್ತೆಯಾಗಿದೆ. ಭೀಮಪ್ಪ ಕೂಡ ಬಾಗಲಕೋಟೆ ಜಿಲ್ಲೆಯ ಮೂಲದವನಾಗಿದ್ದಾನೆ.

ಒಂದೂವರೆ ದಿನಗಳಿಂದ ನೀರಿನ ಆಳದಲ್ಲಿ ಉಳಿದಿದ್ದ ಲಾರಿಯೂ ಶವದ ರೀತಿಯಲ್ಲೇ ವಿಕಾರವಾಗಿತ್ತು. ಘಟನೆ ಬಗ್ಗೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Read: ಎನ್ಎಂಪಿಟಿ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದು ಮುಳುಗಿದ ಟ್ರಕ್ ; ಒಬ್ಬ ಸಾವು, ಇನ್ನೊಬ್ಬ ನಾಪತ್ತೆ 

A container truck had fallen into the sea on Sunday at 10.30 pm at NMPT, proving to be fatal for the lives of two men inside it. While the body of the 26-year-old driver, Rajesab was recovered, the rescue teams carried out a search operation for the missing person, 22-year-old Bhimappa.