HK Impact: ಕೋಟೆಕಾರು ; ವೀಕೆಂಡ್ ಲಾಕ್ಡೌನ್ ಉಲ್ಲಂಘಿಸಿ ವ್ಯಾಪಾರ, ಟಿಕ್ಕ ಸರ್ವ್ ಮಾಡಿದ್ದಕ್ಕೆ 10,000 ರೂ. ದಂಡ ! 

28-06-21 09:17 pm       Mangaluru Correspondent   ಕರಾವಳಿ

ಕೋವಿಡ್ ನಿಯಮ ಉಲ್ಲಂಘಿಸಿ ವೀಕೆಂಡ್ ಲಾಕ್ಡೌನ್ ಲೆಕ್ಕಿಸದೆ ವ್ಯಾಪಾರ ನಡೆಸುತ್ತಿದ್ದ ಕೋಟೆಕಾರು, ಬೀರಿಯ ಟಿಕ್ಕ ಪಾಯಿಂಟ್ ಫಾಸ್ಟ್ ಫುಡ್ ಮಳಿಗೆಗೆ ಕೋಟೆಕಾರು ಪಟ್ಟಣ ಪಂಚಾಯತ್ 10,000 ರೂಪಾಯಿ ದಂಡ ವಿಧಿಸಿದೆ. 

ಉಳ್ಳಾಲ, ಜೂ.28: ಕೋವಿಡ್ ನಿಯಮ ಉಲ್ಲಂಘಿಸಿ ವೀಕೆಂಡ್ ಲಾಕ್ಡೌನ್ ಲೆಕ್ಕಿಸದೆ ವ್ಯಾಪಾರ ನಡೆಸುತ್ತಿದ್ದ ಕೋಟೆಕಾರು, ಬೀರಿಯ ಟಿಕ್ಕ ಪಾಯಿಂಟ್ ಫಾಸ್ಟ್ ಫುಡ್ ಮಳಿಗೆಗೆ ಕೋಟೆಕಾರು ಪಟ್ಟಣ ಪಂಚಾಯತ್ 10,000 ರೂಪಾಯಿ ದಂಡ ವಿಧಿಸಿದೆ. 

ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರ್, ಬೀರಿಯ ರಸ್ತೆ ಅಂಚಿನಲ್ಲಿರುವ ಟಿಕ್ಕ ಪಾಯಿಂಟ್ ಎನ್ನುವ ಬೃಹತ್ ಫಾಸ್ಟ್ ಫುಡ್ ಮಳಿಗೆಯಲ್ಲಿ ಆದಿತ್ಯವಾರ ರಾತ್ರಿ ವೀಕೆಂಡ್ ಲಾಕ್ಡೌನ್ ಉಲ್ಲಂಘಿಸಿ ಮಳಿಗೆಯನ್ನ ತೆರೆದು ಗ್ರಾಹಕರನ್ನ ಒಳ ಅಂತಸ್ತಿನ ಮೇಲೆ ಕುಳ್ಳಿರಿಸಿ ಫಾಸ್ಟ್ ಫುಡ್ ಸಪ್ಲೈ ಮಾಡುತ್ತಿದ್ದರು. 

ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೆಡ್ಲೈನ್ ಕರ್ನಾಟಕ (Headline Karnataka), ಫಾಸ್ಟ್ ಫುಡ್ ನಲ್ಲಿ ಗ್ರಾಹಕರು ಕುಳಿತು ಆಹಾರ ಸೇವಿಸುವುದನ್ನ ಫೋಟೊ ಕ್ಲಿಕ್ಕಿಸಿದ್ದಲ್ಲದೆ ಲಾಕ್ಡೌನ್ ಉಲ್ಲಂಘನೆಯ ಬಗ್ಗೆ ಸಚಿತ್ರ ವರದಿ ಪ್ರಸಾರ ಮಾಡಿತ್ತು.

ವರದಿಯನ್ನ ಆಧರಿಸಿ ಸಂಬಂಧಪಟ್ಟ ಕೋಟೆಕಾರ್ ಪಟ್ಟಣ ಪಂಚಾಯತ್ ತಪ್ಪಿತಸ್ಥ ಟಿಕ್ಕ ಪಾಯಿಂಟ್ ಮಾಲಕರಿಗೆ ಎಪಿಡಮಿಕ್ ಆಕ್ಟ್ ಪ್ರಕಾರ 10,000 ರೂಪಾಯಿ ದಂಡವನ್ನ ವಿಧಿಸಿದೆ. ಅಲ್ಲದೆ, ಉಳ್ಳಾಲ ಪೊಲೀಸ್ ಠಾಣೆಯಿಂದ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದೆ ಉಲ್ಲಂಘಿಸಿದಕ್ಕೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

First Report: ಕೋಟೆಕಾರು : ವೀಕೆಂಡ್ ಕರ್ಫ್ಯೂ ಕೇರ್ ಇಲ್ಲದೆ ಭರ್ಜರಿ ವ್ಯಾಪಾರ ! ಪಾರ್ಸೆಲ್ ನೆಪದಲ್ಲಿ ಹೆದ್ದಾರಿಯಲ್ಲೇ ಟಿಕ್ಕದ ಸವಿ ! 

Impact, Municipality fines Ullal Tikka Point Hotel of 10 thousand fine for COVID Violation. Headline Karnataka had reported the incident about the Hotel being open for the public to eat inside amid the covid rule of Delivery only.