ಬ್ರೇಕಿಂಗ್ ನ್ಯೂಸ್
03-07-21 05:29 pm Mangalore Correspondent ಕರಾವಳಿ
ಮಂಗಳೂರು, ಜುಲೈ 3: ರಾಜಧಾನಿ ಬೆಂಗಳೂರನ್ನು ಕೇಂದ್ರವಾಗಿಟ್ಟು ಇಡೀ ದಕ್ಷಿಣ ಭಾರತದಾದ್ಯಂತ ನೈಜೀರಿಯನ್ ಪ್ರಜೆಗಳು ಡ್ರಗ್ಸ್ ಪೂರೈಕೆ ಮಾಡುತ್ತಿದ್ದಾರೆಂಬ ಅಂಶವನ್ನು ಮಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸೋಗಿನಲ್ಲಿರುವ ನೈಜೀರಿಯನ್ ಪ್ರಜೆಗಳ ಹಿಡನ್ ಜಾಲದ ಹಿಂದೆ ಬಿದ್ದಿರುವ ಮಂಗಳೂರಿನ ಪೊಲೀಸರು ಬೆಂಗಳೂರಿನಲ್ಲಿ ಮತ್ತೆ ಇಬ್ಬರು ನೈಜೀರಿಯನ್ನರನ್ನು ವಶಕ್ಕೆ ಪಡೆದಿದ್ದು ಮಹತ್ತರ ಯಶಸ್ಸು ಸಾಧಿಸಿದ್ದಾರೆ.
ಜೂನ್ 14ರಂದು ಬಂಧನಕ್ಕೊಳಗಾಗಿದ್ದ ಕಾಸರಗೋಡಿನ ಉಪ್ಪಳ ಮೂಲದ ರಮೀಜ್, ಬೆಂಗಳೂರಿನಲ್ಲಿ ಇದ್ದುಕೊಂಡೇ ಕೇರಳದ 14 ಜಿಲ್ಲೆಗಳಿಗೂ ಡ್ರಗ್ಸ್ ಪೂರೈಸುವ ಜಾಲವನ್ನು ಹೊಂದಿದ್ದು ತನಿಖೆಯಲ್ಲಿ ಬಯಲಾಗಿತ್ತು. ಆಬಳಿಕ ಸಿಂಥೆಟಿಕ್ ಡ್ರಗ್ಸ್ ಕೇರಳದಾದ್ಯಂತ ಪೂರೈಕೆ ಮಾಡುತ್ತಿದ್ದ ರಮೀಜನಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದವರು ಯಾರೆಂದು ಕೆದಕಲು ಹೋದಾಗ ನೈಜೀರಿಯನ್ ಪ್ರಜೆಗಳ ಜಾಲ ಹೊರಬಿದ್ದಿತ್ತು. ಆಬಳಿಕ ಇಡೀ ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಡಿಸಿಪಿ ರಂಜಿತ್ ಕುಮಾರ್ ಬಂಡಾರುಗೆ ವಹಿಸಲಾಗಿತ್ತು.
ಸದ್ಯಕ್ಕೆ ಡ್ರಗ್ಸ್ ಜಾಲದ ಹಿಂದೆ ಬಿದ್ದಿರುವ ಮಂಗಳೂರಿನ ಪೊಲೀಸ್ ತಂಡಗಳು ವಿವಿಧ ರಾಜ್ಯಗಳಿಗೆ ತೆರಳಿದ್ದು ರಹಸ್ಯ ಕಾರ್ಯಾಚರಣೆ ನಡೆಸುತ್ತಿವೆ. ಒಂದು ಕಡೆ ಪೊಲೀಸರ ತಂಡ ಸಿಂಥೆಟಿಕ್ ಡ್ರಗ್ಸ್ ಜಾಲದ ಬೇರು ಮಟ್ಟಕ್ಕೆ ಇಳಿದಿದ್ದರೆ, ಇನ್ನೊಂದು ತಂಡ ಗಾಂಜಾ ಪೂರೈಸುವ ಆಂಧ್ರಪ್ರದೇಶಕ್ಕೂ ತೆರಳಿ ಅಲ್ಲಿಂದ ಸರಬರಾಜು ಮಾಡುವ ಪ್ರಮುಖ ಕಿಂಗ್ ಪಿನ್ ಗಳನ್ನು ಪತ್ತೆ ಮಾಡಲು ಮುಂದಾಗಿದೆ. ಇವೆಲ್ಲ ಕಾರ್ಯಾಚರಣೆ ಗುಪ್ತವಾಗಿಯೇ ನಡೆಯುತ್ತಿದ್ದು, ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ತನಿಖೆ ಸಾಗುತ್ತಿದೆ.
ಬೆಂಗಳೂರಿನಲ್ಲಿ 55 ಗ್ರಾಮ್ಸ್ ಎಂಡಿಎಂಎ ಡ್ರಗ್ಸ್ ಜೊತೆ ಮತ್ತೆ ಇಬ್ಬರು ನೈಜೀರಿಯನ್ನರನ್ನು ಬಂಧಿಸಲಾಗಿದ್ದು ಅವರನ್ನು ಮಂಗಳೂರಿಗೆ ಕರೆತರುವ ಪ್ರಕ್ರಿಯೆ ನಡೆದಿದೆ. ಇದರ ಮೌಲ್ಯ 3.6 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್, ಪ್ರಕರಣದ ಪತ್ತೆಗಾಗಿ ಪೊಲೀಸರ ತಂಡ ವಿವಿಧ ಕಡೆ ಕಾರ್ಯಾಚರಣೆ ನಡೆಸುತ್ತಿದೆ. ವಿದೇಶಿ ಪ್ರಜೆಗಳು ಆಗಿರುವುದರಿಂದ ಅವರ ಬಂಧನಕ್ಕಾಗಿ ಬಹಳಷ್ಟು ಕಾನೂನು ಪ್ರಕ್ರಿಯೆಗಳ ಅಗತ್ಯವೂ ಇದೆ. ಅದನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಿಂಥೆಟಿಕ್ ಡ್ರಗ್ಸ್ ಸಂಬಂಧಿಸಿ ಬೆಂಗಳೂರಿನಲ್ಲಿ ಈಗಾಗ್ಲೇ ಮೂರು ಮಂದಿ ನೈಜೀರಿಯನ್ನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, ಅವರು ನೀಡಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಇದೀಗ ಮತ್ತಿಬ್ಬರು ನೈಜೀರಿಯನ್ನರು ಬಲೆಗೆ ಬಿದ್ದಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ನೈಜೀರಿಯನ್ ಜಾಲಕ್ಕೂ ಕೇರಳದ ಡ್ರಗ್ಸ್ ಕಿಂಗ್ ಪಿನ್ ಗಳಿಗೂ ನೇರ ಲಿಂಕ್ ಇರುವುದು ತನಿಖೆಯಲ್ಲಿ ಕಂಡುಬಂದಿದೆ.
ಡ್ರಗ್ಸ್ ಪ್ರಕರಣ ; ನೈಜೀರಿಯನ್ ಪ್ರಜೆಯನ್ನು ಬಂಧಿಸಿದ ಕೋಣಾಜೆ ಪೊಲೀಸರು
Inside story: ಡ್ರಗ್ ಕಿಂಗ್ ಪಿನ್ ಪಾಬ್ಲೋ ಎಸ್ಕೋಬಾರ್ ಆಗಲು ಹೊರಟಿದ್ನಾ ಉಪ್ಪಳದ ರಮೀಜ್ ?
ಕೊಣಾಜೆ ; ಬೆಂಗಳೂರಿನಿಂದ ತರುತ್ತಿದ್ದ 4 ಲಕ್ಷ ಎಂಡಿಎಂಎ ಡ್ರಗ್ಸ್ ವಶಕ್ಕೆ, ಇಬ್ಬರ ಬಂಧನ
ಡ್ರಗ್ಸ್ ಜಾಲದ ಮೂಲ ಪತ್ತೆಗೆ ಮುಂದಾದ ಮಂಗಳೂರು ಪೊಲೀಸರು ; ಮತ್ತಿಬ್ಬರು ನೈಜೀರಿಯನ್ ಪ್ರಜೆಗಳ ಸೆರೆ
The Mangaloee police have arrested two more Nigerian nationals in the drug racket. With this, the number of arrests in the case have reached 11. DCP Hariram Shankar said, “On further probe of Nigerian nationals Paul Ohamobhi and Uchechuku Malaki Elaquachi
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm