ದಕ್ಷಿಣ ಕನ್ನಡದಲ್ಲಿ ನಿಲ್ಲದ ಕೊರೋನಾ ಆರ್ಭಟ!!

02-09-20 09:10 pm       Dhruthi Anchan - Correspondent   ಕರಾವಳಿ

ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಕೊರೋನಾ ಪ್ರಕರಣ, ಬರೋಬ್ಬರಿ 414 ಮಂದಿಗೆ ಕೊರೊನ ಪಾಸಿಟಿವ್ ದೃಢಪಟ್ಟರೆ, ಸಾವಿನ ಸಂಖ್ಯೆ 381ಕ್ಕೆ ಏರಿಕೆ

ಮಂಗಳೂರು, ಸೆಪ್ಟೆಂಬರ್ 02:: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತೂ ಕೂಡ ಕೊರೋನಾ ಮಹಾಸ್ಪೋಟಗೊಂಡಿದೆ. ಇಂದು ಬರೋಬ್ಬರಿ 414 ಮಂದಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು 6 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 381ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 346 ಮಂದಿ ಗುಣಮುಖರಾಗಿದ್ದು ಸದ್ಯಕ್ಕೆ 2600 ಆಕ್ಟಿವ್ ಕೇಸ್‌ಗಳಿವೆ. ಇಲ್ಲಿವರೆಗೂ ಜಿಲ್ಲೆಯಲ್ಲಿ 13,479 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.

ಮಂಗಳೂರಿನಲ್ಲಿ 222, ಬಂಟ್ವಾಳದಲ್ಲಿ 64, ಪುತ್ತೂರಿನಲ್ಲಿ 49, ಸುಳ್ಯದಲ್ಲಿ ೩೧, ಬೆಳ್ತಂಗಡಿಯಲ್ಲಿ 28 , ಹಾಗೂ ಹೊರ ಜಿಲ್ಲೆಯ 20 ಮಂದಿಗೆ ಕೋರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇನ್ನೂ ಆತಂಕಕಾರಿ ವಿಚಾರವೇನೆಂದರೆ ಸೋಂಕಿನ ಮೂಲವೆ ಪತ್ತೆಯಾಗದವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. 

ಇಂದು ಪತ್ತೆಯಾದ ಸೋಂಕಿತರ ಪೈಕಿ 77 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟರೆ, 174 ಮಂದಿಯಲ್ಲಿ ಐಎಲ್‌ಐ ಪ್ರಕರಣದಿಂದ ಪತ್ತೆಯಾಗಿದೆ. ಸಾರಿ ಪ್ರಕರಣದಿಂದ 11 ಮಂದಿಗೆ ಕೊರೋನಾ ದೃಢಪಟ್ಟಿರುವ ಜೊತೆಗೆ ಹೊರ ಜಿಲ್ಲೆಯಿಂದ ಬಂದ ಇಬ್ಬರಿಗೆ  ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.