ಸರಪಾಡಿಯಲ್ಲಿ ಆಟೋ ಪಲ್ಟಿ ; ಓರ್ವ ಸಾವು, ಏಳು ಮಂದಿಗೆ ಗಾಯ 

28-07-21 07:48 pm       Mangaluru correspondent   ಕರಾವಳಿ

ಅಟೋರಿಕ್ಷಾ ಪಲ್ಟಿಯಾಗಿ ಓರ್ವ ಮೃತಪಟ್ಟು ಏಳು ಮಂದಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಬಂಟ್ವಾಳ, ಜು.28: ಮಣಿಹಳ್ಳ ಸರಪಾಡಿ ರಸ್ತೆಯ ಪೆರಿಯಪಾದೆ ಎಂಬಲ್ಲಿ ಅಟೋರಿಕ್ಷಾ ಪಲ್ಟಿಯಾಗಿ ಓರ್ವ ಮೃತಪಟ್ಟು ಏಳು ಮಂದಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ವಲೆಂಗೂರು ನಿವಾಸಿ ಫ್ರಾನ್ಸಿಸ್ ಸುವಾರಿಸ್ (85) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದರೆ, ಅಲ್ಪಸ್ವಲ್ಪ ಗಾಯಗೊಂಡ ಉಳಿದವರು ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಟೋರಿಕ್ಷಾ ಸರಪಾಡಿಯಿಂದ ಬಂಟ್ವಾಳ ಕಡೆಗೆ ಪ್ರಯಾಣಿಕರನ್ನು ಕೂರಿಸಿಕೊಂಡು ಆಗಮಿಸುತ್ತಿದ್ದ ವೇಳೆ ಪೆರಿಯಪಾದೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

Mangalore Auto topples one killed seven injured in Bantwal