ಬ್ರೇಕಿಂಗ್ ನ್ಯೂಸ್
03-08-21 02:06 pm Mangaluru Correspondent ಕರಾವಳಿ
ಮಂಗಳೂರು, ಆಗಸ್ಟ್ 3: ಕೋವಿಡ್ ನಿರ್ಬಂಧ ನಿಯಮಗಳು ಕೇರಳ - ಕರ್ನಾಟಕ ಗಡಿಯನ್ನು ಪಾಕಿಸ್ತಾನದ ಗಡಿಯನ್ನಾಗಿ ಮಾಡಿದೆ. ಕೇರಳದಿಂದ ಕರ್ನಾಟಕ ಪ್ರವೇಶ ಮಾಡಬೇಕಾದರೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದು ಜನರು ಪರದಾಡುವಂತಾಗಿದೆ. ಅತ್ತ ಮಂಜೇಶ್ವರ ಭಾಗದ ಸ್ಥಳೀಯರ ಪ್ರತಿಭಟನೆ ನಡುವೆಯೇ, ಮಂಗಳೂರಿಗೆ ಆಗಮಿಸಿದ ಎಡಿಜಿಪಿ ಪ್ರತಾಪ್ ರೆಡ್ಡಿ ಇಂದು ತಲಪಾಡಿ ಗಡಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ., ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಜೊತೆಗೆ ತಲಪಾಡಿ ಗಡಿಗೆ ತೆರಳಿದ ಎಡಿಜಿಪಿ, ಯಾವುದೇ ಕಾರಣಕ್ಕೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಇಲ್ಲದವರನ್ನು ಒಳಗೆ ಬಿಡದಂತೆ ಸೂಚನೆ ನೀಡಿದರು. ಅಲ್ಲದೆ, ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ಆಗಮಿಸುವ ಮಂದಿಗೆ ಮಾತ್ರ ಆಂಬುಲೆನ್ಸ್ ನಲ್ಲಿ ಬಂದರೆ ಗಡಿಯಲ್ಲಿ ಒಳ ಬಿಡಬಹುದು. ಇನ್ನಾವುದೇ ಚಿಕಿತ್ಸೆಗೆ ಆಗಮಿಸುವ ಮಂದಿ ಮೊದಲೇ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕಂಟ್ರೋಲ್ ರೂಂಗೆ ಈ ಬಗ್ಗೆ ಮಾಹಿತಿ ನೀಡಬೇಕು. ಕಂಟ್ರೋಲ್ ರೂಂ ಕಡೆಯಿಂದ ಗಡಿಭಾಗದಲ್ಲಿರುವ ಪೊಲೀಸರಿಗೆ ಸೂಚನೆ ಬಂದರೆ ಮಾತ್ರ ಕೋವಿಡ್ ನೆಗೆಟಿವ್ ಮಾನದಂಡ ಇಲ್ಲದೆಯೂ ಪ್ರವೇಶಕ್ಕೆ ಅನುಮತಿ ನೀಡಬಹುದು. ಇದು ಬಿಟ್ಟರೆ ಬೇರೆ ಯಾವುದೇ ಮಂದಿಯೂ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ವಿನಾ ಕರ್ನಾಟಕ ಪ್ರವೇಶ ಮಾಡುವಂತಿಲ್ಲ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರ ಗತಿಯಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕೇರಳ ಕಡೆಯಿಂದ ಬರುವ ಮಂದಿಯೇ ಕಾರಣ. ಮತ್ತೆ ಕರಾವಳಿಯಲ್ಲಿ ಅಪಾಯಕಾರಿ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಎಡಿಜಿಪಿ ಹೇಳಿದರು.
ಇದೇ ವೇಳೆ, ಗಡಿಭಾಗದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಕರ್ನಾಟಕ ಸರಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ರಾಜ್ಯದ ಗಡಿಯನ್ನು ಪಾಕಿಸ್ತಾನದ ಗಡಿಯನ್ನಾಗಿ ಮಾಡಿದರೆ ಹೇಗೆ ? ಇದು ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎಡಿಜಿಪಿ ಪ್ರತಾಪ ರೆಡ್ಡಿ ಬಳಿಯೂ ಈ ಬಗ್ಗೆ ಪ್ರತಿಭಟನಾಕಾರರು ಬಂದು ಮಾತನಾಡಿದರು.
ಸುಮಾರು 40 ನಿಮಿಷಗಳ ಕಾಲ ತಲಪಾಡಿಯಲ್ಲಿ ಕೇರಳಕ್ಕೆ ಸಾಗುವ ವಾಹನಗಳನ್ನು ತಡೆದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು. ಹೆದ್ದಾರಿ ಬಂದ್ ಮಾಡಿದ ವೇಳೆ ಮಂಜೇಶ್ವರ ಪೊಲೀಸರು ಭದ್ರತೆಗಾಗಿ ಬಂದಿದ್ದರು. ಬಳಿಕ ಮಂಗಳೂರು ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಕೇರಳ ಪೊಲೀಸರ ಜೊತೆ ಮಾತುಕತೆ ನಡೆಸಿ, ಪ್ರತಿಭಟನೆ ನಿಲ್ಲಿಸುವಂತೆ ಸೂಚಿಸಿದರು.
ಕೇರಳದ ಬಹಳಷ್ಟು ಮಲಯಾಳಂ ಮಾಧ್ಯಮಗಳ ಪ್ರತಿನಿಧಿಗಳು ತಲಪಾಡಿ ಗಡಿಗೆ ಬಂದು ಸೇರಿದ್ದು ವಿಶೇಷವಾಗಿತ್ತು. ಒಂದೆಡೆ ಜನರು ಮಂಗಳೂರಿಗೆ ಬರಲಾಗದೆ ತೊಂದರೆಗೆ ಸಿಲುಕಿದ್ದರೆ, ಮತ್ತೊಂದು ಕಡೆ ನೂರಾರು ಪೊಲೀಸರು ಬಂದೋಬಸ್ತ್ ನಡೆಸಿದ್ದರು. ಅಲ್ಲಿನ ಸ್ಥಿತಿ ನೋಡಿದರೆ ಪಾಕ್ ಗಡಿಯೋ ಎನ್ನುವಂತೆ ಭಾಸವಾಗಿತ್ತು.
In the backdrop of tighter measures being taken at Karnataka's border with Kerala because of the spurt of coronavirus cases in that state, Karnataka additional director general of police (ADGP), Pratap Reddy, visited Talapady border on Tuesday August 3, and scrutinized the security measures in place. He gathered information about additional police security and checks being conducted there. Dakshina Kannada district deputy commissioner Dr K V Rajendra, provided details to the ADGP.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm