ಬ್ರೇಕಿಂಗ್ ನ್ಯೂಸ್
06-08-21 11:08 pm Mangaluru Correspondent ಕರಾವಳಿ
ಉಳ್ಳಾಲ, ಆ.6: ಅನಗತ್ಯ ವಿಚಾರಕ್ಕೆ ಪತ್ರಿಕಾಗೋಷ್ಟಿಗಳನ್ನು ಕರೆಯುವ ಶಾಸಕ ಯು.ಟಿ.ಖಾದರ್ ಅವರು ತನ್ನ ಕ್ಷೇತ್ರದ ಅಂಗಳದಲ್ಲೇ ನಡೆಯುತ್ತಿರುವ ಐಸಿಸ್ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಪ್ರಶ್ನಿಸಿದ್ದಾರೆ.
ಕಾಪಿಕಾಡಿನ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಳೆದ ಬುಧವಾರ ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರ ಅಬ್ದುಲ್ ರ್ರಹ್ಮಾನ್ ಬಾಷಾ ಅವರ ಮನೆಗೆ ಎನ್ ಐಎ ತಂಡ ದಾಳಿ ನಡೆಸಿದ್ದು ಸಿರಿಯಾದ ಐಸಿಸ್ ಜೊತೆ ಸಂಪರ್ಕದ ಆರೋಪದಲ್ಲಿ ಬಾಷಾ ಅವರ ಕಿರಿಯ ಮಗ ಅಮ್ಮರ್ ಅಬ್ದುಲ್ ರಹ್ಮಾನ್ ಮತ್ತು ಸೊಸೆ ದೀಪ್ತಿ ಮಾರ್ಲರನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಏಕೆ ಮಾತನಾಡೋದಿಲ್ಲವೆಂದು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ನಡೆದ ದಾಳಿಯ ವಿರುದ್ಧ ಈವರೆಗೆ ಖಾದರ್ ತುಟಿಕ್ ಪಿಟಿಕ್ ಮಾತಾಡಿಲ್ಲ. ಆ ಮೂಲಕ ಉಳ್ಳಾಲದಿಂದ ಕಾಶ್ಮೀರದ ವರೆಗೆ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಗಾವಲಿದೆಯೇ ಎಂದು ಸಂಶಯ ಬಂದಿದೆ. ಈ ಹಿಂದೆಯೂ ಉಳ್ಳಾಲದಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಕ್ಷೇತ್ರದ ಶಾಸಕರಾಗಲಿ ಯಾವುದೇ ಕಾಂಗ್ರೆಸ್ ನಾಯಕರು ಕೂಡಾ ಸೊಲ್ಲೆತ್ತಿಲ್ಲ. ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಲವ್ ಜಿಹಾದ್ ಮೂಲಕ ಮತಾಂತರಗೊಂಡಿದ್ದು ಆಕೆಯನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಲಾಗಿದೆ. ಉಳ್ಳಾಲದ ಅನೇಕ ಶಿಕ್ಷಣ ಸಂಸ್ಥೆಗಳೂ ಭಯೋತ್ಪಾದನೆಗೆ ಬಲಿಯಾಗಿವೆ ಎಂದು ಅವರು ಆರೋಪಿಸಿದರು.
ಅನಗತ್ಯ ವಿಚಾರಗಳಿಗೆ ಪತ್ರಿಕಾಗೋಷ್ಟಿಗಳನ್ನು ಕರೆಯುವ ಶಾಸಕ ಖಾದರ್ ಅವರು ಉಳ್ಳಾಲದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದನೆಯ ವಿರುದ್ಧ ಮಾತನಾಡಬೇಕಿದೆ ಎಂದರು.
ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ ಮಾಜಿ ಶಾಸಕರ ವಿದ್ಯಾವಂತ ಕುಟುಂಬದವರೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿರುವುದು ದೇಶದ ಭದ್ರತೆಗೆ ಬಂದಿರುವ ಮಹಾ ಕಂಟಕ. ಹಿಂದೂ ಯುವತಿಯನ್ನು ಮತಾಂತರಗೊಳಿಸಿ ಭಯೋತ್ಪಾದನೆಗೆ ತಳ್ಳಿದ್ದು ಲವ್ ಜಿಹಾದ್ ಅಲ್ಲದೆ ಮತ್ತೇನು. ಉಳ್ಳಾಲದ ಅತ್ಯಂತ ಶ್ರೀಮಂತರು, ವಿದ್ಯಾವಂತರ ಮನೆಯೇ ಇಂದು ಭಯೋತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಅವರು ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಮೇಲೆಯೂ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸುವ ಅಗತ್ಯವಿದೆ ಎಂದರು.
ದೇಶದ ಭದ್ರತೆಯ ವಿಚಾರದಲ್ಲಿ ಬಿಜೆಪಿ ಯಾರೊಂದಿಗೂ ರಾಜಿ ಮಾಡೋದಿಲ್ಲ. ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಷಾ ಅವರು ದೇಶದ ಮೂಲೆ, ಮೂಲೆಯಲ್ಲಿ ಅಡಗಿರುವ ಭಯೋತ್ಪಾದಕರ ಜಾಲಾಡುತ್ತಿರುವ ಕಾರ್ಯವೈಖರಿಯೇ ಅದಕ್ಕೆ ನಿದರ್ಶನ ಎಂದರು.
ಬಿಜೆಪಿ ಕ್ಷೇತ್ರ ಉಪಾಧ್ಯಕ್ಷರಾದ ರವಿಶಂಕರ್ ಸೋಮೇಶ್ವರ, ಪ್ರಮುಖರಾದ ಆನಂದ ಶೆಟ್ಟಿ, ಹೇಮಂತ್ ಶೆಟ್ಟಿ ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
NIA raid and arrest in Ullal Mangalore BJP slams silence of U T Khader.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm