ಕಡಬ ಠಾಣೆ ಪೊಲೀಸ್ ಜೀಪು - ಬೊಲೆರೋ ವಾಹನ ಪರಸ್ಪರ ಡಿಕ್ಕಿ ; ಅಪಾಯದಿಂದ ಪಾರು

04-09-21 12:29 pm       Mangaluru Correspondent   ಕರಾವಳಿ

ಪೊಲೀಸ್ ಜೀಪ್ ಹಾಗೂ ಬೊಲೆರೋ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಾಹನಗಳು ನಜ್ಜುಗುಜ್ಜಾದ ಘಟನೆ ಕಳಾರ ಎಂಬಲ್ಲಿ ನಡೆದಿದೆ. 

ಮಂಗಳೂರು, ಸೆ.4: ಪೊಲೀಸ್ ಜೀಪ್ ಹಾಗೂ ಬೊಲೆರೋ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಾಹನಗಳು ನಜ್ಜುಗುಜ್ಜಾದ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. 

ಕಡಬ ಪೊಲೀಸ್ ಠಾಣೆಯ ಎಸ್ಐ ರುಕ್ಮಯ ನಾಯ್ಕ್ ಪ್ರಯಾಣಿಸುತ್ತಿದ್ದ ಪೊಲೀಸ್ ಜೀಪು ಹಾಗೂ ಬೊಲೆರೋ ಕಾರು ಪರಸ್ಪರ ಕಳಾರ ಎಂಬಲ್ಲಿ ಡಿಕ್ಕಿಯಾಗಿದೆ. ಸಮಾನಾಂತರ ಪ್ರದೇಶದಲ್ಲಿ ಎದುರು ಬದುರಾಗಿ ಡಿಕ್ಕಿಯಾಗಿದ್ದು ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಆದರೆ, ಎರಡೂ ವಾಹನಗಳಲ್ಲಿ ಚಾಲಕ ಸೇರಿದಂತೆ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಸ್ಥಳದಲ್ಲಿ ಸೇರಿದ ಜನರು ಅದರಲ್ಲಿದ್ದ ಪ್ರಯಾಣಿಕರನ್ನು ಇತರೇ ವಾಹನಗಳಲ್ಲಿ ಕರೆದೊಯ್ದಿದ್ದಾರೆ.

Kadaba Police Jeep and Bolero jeep accident SI and police staffs escape with little injuries