ಟ್ರಾಫಿಕ್ ಡ್ರೈವ್ ; ಇನ್ಶುರೆನ್ಸ್ ಇಲ್ಲದ ನೂರಕ್ಕೂ ಹೆಚ್ಚು ವಾಹನ ಜಪ್ತಿ

30-09-21 11:10 pm       Mangaluru Correspondent   ಕರಾವಳಿ

ಟ್ರಾಫಿಕ್ ಡ್ರೈವ್ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಇಂದು ಇನ್ಶೂರೆನ್ಸ್ ಇಲ್ಲದ ವಾಹನಗಳ ತಪಾಸಣೆ ನಡೆದಿದ್ದು ನೂರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. 

Photo credits : Representational Images

ಮಂಗಳೂರು, ಸೆ.30: ಟ್ರಾಫಿಕ್ ಡ್ರೈವ್ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಇಂದು ಇನ್ಶೂರೆನ್ಸ್ ಇಲ್ಲದ ವಾಹನಗಳ ತಪಾಸಣೆ ನಡೆದಿದ್ದು ನೂರಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. 

ಇನ್ಶೂರೆನ್ಸ್ ಇಲ್ಲದ ವಾಹನಗಳನ್ನು ವಿವಿಧೆಡೆ ಪೊಲೀಸರು ತಪಾಸಣೆ ನಡೆಸಿದ್ದು ದಂಡ ವಿಧಿಸಿದ್ದಾರೆ. ಸ್ಥಳದಲ್ಲಿ ದಂಡ ಕಟ್ಟದ ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದು ನಗರ ಟ್ರಾಫಿಕ್ ಎಸಿಪಿ ನಟರಾಜ್ ತಿಳಿಸಿದ್ದಾರೆ. ಆದರೆ, ಇನ್ಶುರೆನ್ಸ್ ಇಲ್ಲದ ವಾಹನಗಳು ಕಡಿಮೆ ಇದ್ದವು.‌ ಹಾಗಾಗಿ ನಿನ್ನೆಗಿಂತ ಕೇಸುಗಳು ಇಂದು ಕಡಿಮೆಯಾಗಿವೆ ಎಂದಿದ್ದಾರೆ. 

ಶುಕ್ರವಾರ ಹಳೆ ಪ್ರಕರಣಗಳನ್ನು ಪತ್ತೆ ಮಾಡಿ, ಪೊಲೀಸರು ದಂಡ ಸಂಗ್ರಹಿಸಲಿದ್ದಾರೆ. ಸಿಸಿಟಿವಿಯಲ್ಲಿ ಆಧರಿಸಿ, ಹೆಲ್ಮೆಟ್ ರಹಿತ ಪ್ರಯಾಣಕ್ಕೆ ಪೊಲೀಸರು ದಂಡ ವಿಧಿಸಿ ನೋಟೀಸು ಕಳಿಸಿದ್ದೂ ಅದನ್ನು ಕಟ್ಟಿರದಿದ್ದರೆ ಪತ್ತೆ ಮಾಡಿ ದಂಡವನ್ನು ಸಂಗ್ರಹ ಮಾಡಲಿದ್ದಾರೆ. ಅದಕ್ಕಾಗಿ ಎಎಸ್ಐ ಮೇಲ್ಪಟ್ಟ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು ಎಂದು ಎಸಿಪಿ ನಟರಾಜ್ ತಿಳಿಸಿದ್ದಾರೆ.

ಸೆ.27ರಿಂದ ಅ.2ರ ವರೆಗೆ ವಾರ ಪೂರ್ತಿ ಟ್ರಾಫಿಕ್ ಡ್ರೈವ್ ; ಸಾರ್ವಜನಿಕರೇ ಎಚ್ಚರ, ದಂಡ ಪೀಕಿಸಲಿದ್ದಾರೆ ಪೊಲೀಸರು !

ಮಂಗಳೂರಿನಲ್ಲಿ ಸ್ಪೆಷಲ್ ಟ್ರಾಫಿಕ್ ಡ್ರೈವ್ ; ಒಂದೇ ದಿನ 550 ಕೇಸು, ಬರೋಬ್ಬರಿ 2.75 ಲಕ್ಷ ಕಲೆಕ್ಷನ್ ! 

ಮಂಗಳೂರಿನಲ್ಲಿ ಟ್ರಾಫಿಕ್ ಡ್ರೈವ್ ; ನಂಬರ್ ಪ್ಲೇಟ್ ದೋಷ ಹೆಸರಲ್ಲಿ 900 ಕೇಸು, ಒಂದೇ ದಿನ 4.5 ಲಕ್ಷ ದಂಡ ಸಂಗ್ರಹ ! ಎಸಿಪಿ ವಾಹನಕ್ಕೇ ಇರಲಿಲ್ಲ IND !!

ಹೆಲ್ಮೆಟ್ ರಹಿತ ಪ್ರಯಾಣ ; ಪೊಲೀಸರಿಂದ ಒಂದೇ ದಿನ 728 ಕೇಸ್, 3.64 ಲಕ್ಷ ದಂಡ ಸಂಗ್ರಹ

Mangalore Traffic drive hundreds of vehicles seized for lapse of insurance.