ಕ್ರೈಸ್ತ ಅಭಿವೃದ್ಧಿ ನಿಗಮದ ಜೋಯ್ಲಸ್ ಡಿಸೋಜಗೆ ತೀವ್ರ ಹೃದಯಾಘಾತ, ಆಸ್ಪತ್ರೆಗೆ ದಾಖಲು

29-10-21 04:07 pm       Bengaluru Correspondent   ಕರಾವಳಿ

ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ , ಮೂಡುಬಿದ್ರೆ ಮೂಲದ ಬಿಜೆಪಿ ಯುವ ಮುಖಂಡ ಜೋಯ್ಲಸ್ ಡಿಸೋಜ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಗಳೂರು, ಅ.29: ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ , ಮೂಡುಬಿದ್ರೆ ಮೂಲದ ಬಿಜೆಪಿ ಯುವ ಮುಖಂಡ ಜೋಯ್ಲಸ್ ಡಿಸೋಜ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿರುವ ಮನೆಯಲ್ಲಿ ವಾಸವಿದ್ದ ಜೋಯ್ಲಸ್ ಡಿಸೋಜ ಅವರಿಗೆ ಅ.28ರ ಸಂಜೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಆಪ್ತರ ಮೂಲಗಳಿಂದ ತಿಳಿದುಬಂದಿದೆ.

ಮೂಡುಬಿದ್ರೆಯ ತಾಕೊಡೆ ನಿವಾಸಿಯಾಗಿರುವ ಜೋಯ್ಲಸ್ ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತಲೇ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ದೆಗೇರಿದ್ದರು. ಕಳೆದ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಜೋಯ್ಲಸ್, ಬಿಜೆಪಿಯಲ್ಲಿ ಉದಯೋನ್ಮುಖ ನಾಯಕನಾಗಿ ಹೊರಹೊಮ್ಮಿದ್ದರು. 

Joylus D’Souza, president of Christian Development Board, suffered a cardiac arrest and is admitted to a hospital. Joylous suffered cardiac arrest on Thursday October 28 evening, at his residence at Race Course Road of the city. He is admitted to the ICU at Vikram hospital.