ಬ್ರೇಕಿಂಗ್ ನ್ಯೂಸ್
16-11-21 12:26 pm Sponcered Article ಕರಾವಳಿ
ಸಾಮಾನ್ಯವಾಗಿ ನಗರ ಭಾಗದ ಜನರು ಆನ್ಲೈನಲ್ಲೇ ಎಲ್ಲವನ್ನೂ ಖರೀದಿ ಮಾಡುತ್ತಾರೆ. ಫ್ಲಿಪ್ ಕಾರ್ಟ್, ಅಮೆಝಾನ್ ಆನ್ಲೈನ್ ಮಾರುಕಟ್ಟೆಯಲ್ಲಿ ಸಿಗದ ವಸ್ತುಗಳೇ ಇಲ್ಲ. ಹಾಗಿರುವಾಗ, ಕೋವಿಡ್, ಮತ್ತೊಂದು ಎನ್ನುವ ಜಂಜಾಟವೇ ಬೇಡ ಎಂದು ನೇರ ಮಾರುಕಟ್ಟೆಯಲ್ಲಿ ಖರೀದಿಗೆ ಜನ ಮುಂದಾಗಿದ್ದಾರೆ. ಇಂಥದ್ರಲ್ಲಿ ದಿನವಹಿ ಅಡುಗೆಗೆ ಬಳಕೆಯಾಗುವ ಮಸಾಲೆ ಪದಾರ್ಥಗಳೂ ಆನ್ಲೈನಲ್ಲಿ ಅದರಲ್ಲೂ ಉಚಿತವಾಗಿ ಸಿಗುತ್ತೆ ಅಂದರೆ ಯಾರು ಬೇಡ ಅಂತಾರೆ ಹೇಳಿ.
ಹೌದು.. ಕರಾವಳಿಯಲ್ಲಿ ಮನೆಮಾತಾಗಿರುವ ಹೆಸರಾಂತ ಅರುಣ ಮಸಾಲೆ ಕಂಪನಿಯವರು ಇದೀಗ ಆನ್ಲೈನ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ನೇರವಾಗಿ ಗ್ರಾಹಕರ ಕೈಗೆ ತಲುಪಲು ಹತ್ತಿರವಾಗಿದ್ದಾರೆ. ಅಂದರೆ, ಒಂದೇ ಕ್ಲಿಕ್ ನಲ್ಲಿ ನಿಮ್ಮ ಅಗತ್ಯದ ಮಸಾಲೆ ಪದಾರ್ಥಗಳು ನೀವು ಯಾವುದೇ ರೀತಿಯ ಶುಲ್ಕವನ್ನೂ ನೀಡದೇ ನೇರವಾಗಿ ಮನೆ ಬಾಗಿಲಿಗೆ ಬರುತ್ತದೆ. ಅದಕ್ಕಾಗಿ ಅರುಣ ಮಸಾಲೆ ಸಂಸ್ಥೆಯವರು ಮೊಬೈಲ್ ಏಪ್ ಒಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ತುಳು ಚಿತ್ರರಂಗದ ಖ್ಯಾತ ನಟ ಅರ್ಜುನ್ ಕಾಪಿಕಾಡ್ ಸೋಮವಾರ ಮಂಗಳೂರಿನಲ್ಲಿ ಅರುಣ ಮಸಾಲೆ ಏಪ್ ಅನ್ನು ಬಿಡುಗಡೆ ಮಾಡಿದ್ದಾರೆ.
ಅರ್ಜುನ್ ಕಾಪಿಕಾಡ್ ನಟಿಸುತ್ತಿರುವ ಅಬತರ ಚಿತ್ರಕ್ಕೆ ಕೋ ಸ್ಪಾನ್ಸರ್ ಆಗಿರುವ ಅರುಣ ಮಸಾಲೆ ಸಂಸ್ಥೆಯ ಪರವಾಗಿ ಕಂಪನಿಯ ಮೊಬೈಲ್ ಏಪ್ ಬಿಡುಗಡೆ ಮಾಡಿದ್ದು ತಮ್ಮ ಚಿತ್ರದ ಪ್ರಚಾರದುದ್ದಕ್ಕೂ ಅರುಣ ಮಸಾಲದ ಏಪ್ ಬಗ್ಗೆಯೂ ಪ್ರಚಾರ ಮಾಡುವುದಾಗಿ ಅರ್ಜುನ್ ತಿಳಿಸಿದ್ದಾರೆ. ಫಿಜಾ ಮಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಅರುಣ ಮಸಾಲ ಸಂಸ್ಥೆಯ ಪಾಲುದಾರ ಅನಂತೇಶ್ ಪ್ರಭು, ತುಳು ಚಿತ್ರನಟ ದೇವದಾಸ್ ಕಾಪಿಕಾಡ್, ನಟಿ ಗಾನ ಭಟ್ ಉಪಸ್ಥಿತರಿದ್ದರು.


40 ವರ್ಷಗಳಲ್ಲಿ ಜನಮನ ಗೆದ್ದ ಮಸಾಲೆ
ಮಂಗಳೂರು ನಗರ ಹೊರವಲಯದ ಬೈಕಂಪಾಡಿ ಕೈಗಾರಿಕಾ ಸಂಕೀರ್ಣದಲ್ಲಿ 1980ರಲ್ಲಿ ಆರಂಭಗೊಂಡು ಕರಾವಳಿ ಮತ್ತು ಕರ್ನಾಟಕದ ಮನೆಮಾತಾಗಿರುವ ಅರುಣ ಮಸಾಲೆ ತನ್ನದೇ ಆದ ರುಚಿ ಮತ್ತು ವೈವಿಧ್ಯಕ್ಕೆ ಹೆಸರುವಾಸಿ. ಮಸಾಲೆ ಪದಾರ್ಥಗಳಿಗೆ ಬಾಳಿಕೆ ಕಡಿಮೆ. ಅದರ ಕ್ವಾಲಿಟಿಯನ್ನು ಕಾಯ್ದುಕೊಳ್ಳುವುದು ಕೂಡ ಅಷ್ಟೇ ಸವಾಲು. ಹೊಟೇಲಿನಲ್ಲಿ ಒಂದೇ ರುಚಿಯನ್ನು ಕಾಯ್ದುಕೊಳ್ಳುವಷ್ಟೇ ಕಷ್ಟದ ಕೆಲಸ. ಅಂಥದರಲ್ಲಿ ಅರುಣ ಮಸಾಲೆ ವಿವಿಧ ಶ್ರೇಣಿಯ ಮಸಾಲೆ ಪುಡಿಗಳನ್ನು ತಯಾರಿಸಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಂದಹಾಗೆ, ಅರುಣ ಮಸಾಲೆ ಸಂಸ್ಥೆ ಐಎಸ್ಓ ಪ್ರಮಾಣ ಪತ್ರ ಪಡೆದ ಕರಾವಳಿಯ ಮೊತ್ತಮೊದಲ ಮಸಾಲೆ ಸಂಸ್ಕರಣಾ ಘಟಕವೂ ಹೌದು. ಇಲ್ಲಿ ತಯಾರಾಗುವ ವಿವಿಧ ರೀತಿಯ ಮಸಾಲೆ ಪುಡಿಗಳು, ಉಪ್ಪಿನಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ ಸಂಡಿಗೆಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿದೇಶದಲ್ಲಿಯೂ ಭಾರೀ ಬೇಡಿಕೆಯನ್ನು ಹೊಂದಿದೆ. ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆ.

ಒಂದೇ ಕ್ಲಿಕ್ ನಲ್ಲಿ ಸಿಗಲಿದೆ ಮಸಾಲೆ !
ಈಗಾಗಲೇ ಅಡುಗೆ ಮನೆಯ ಗೃಹಿಣಿಯರ ಗಮನ ಸೆಳೆದಿರುವ ಅರುಣ ಮಸಾಲೆ ಸಂಸ್ಥೆಯವರು, ತಮ್ಮ ಗ್ರಾಹಕರಿಗೆ ತ್ವರಿತ ಮತ್ತು ಅತ್ಯಂತ ಸುಲಭ ರೀತಿಯಲ್ಲಿ ಉತ್ಪನ್ನಗಳನ್ನು ತಲುಪಿಸಲು ಆರಂಭಿಸಿದ್ದೇ ಮೊಬೈಲ್ ಏಪ್. ಎಲ್ಲ ರೀತಿಯ ಮಸಾಲೆ ಪದಾರ್ಥಗಳನ್ನು ಕುಳಿತಲ್ಲಿಗೇ ಒಂದೇ ಕ್ಲಿಕ್ ನಲ್ಲಿ ತರಿಸಿಕೊಳ್ಳಲು ಅವಕಾಶ ಆಗುವಂತೆ ಇದನ್ನು ರೂಪಿಸಲಾಗಿದೆ. ಆಂಡ್ರಾಯ್ಡ್ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರಲ್ಲೂ ಏಪ್ ಅಳವಡಿಸಿಕೊಂಡು ಸುಲಭದಲ್ಲಿ ಆರ್ಡರ್ ಮಾಡಿಕೊಂಡು ಮಸಾಲೆ ಪದಾರ್ಥಗಳನ್ನು ನೇರವಾಗಿ ಮನೆಗೆ ತರಿಸಿಕೊಳ್ಳಬಹುದು. ಇದಕ್ಕಾಗಿ ರೂಪಿಸಿರುವ ಮೊಬೈಲ್ ಏಪ್ ಅನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗಿದೆ. ಅಲ್ಲದೆ, ದೇಶದ ಯಾವುದೇ ಮೂಲೆಯಲ್ಲೂ ನಿಗದಿತ ಸಮಯಕ್ಕೆ ತಲುಪಿಸಬಲ್ಲ ಅತ್ಯಂತ ವ್ಯವಸ್ಥಿತ ಮಾರುಕಟ್ಟೆ ಜಾಲವನ್ನು ಅರುಣ ಮಸಾಲೆ ಸಂಸ್ಥೆ ವಿಸ್ತರಿಸಿಕೊಂಡಿದೆ. ಇದರಿಂದಾಗಿ ಭವಿಷ್ಯದಲ್ಲಿ ನೇರವಾಗಿ ಕೈಗೆಟಕಬಲ್ಲ ರೀತಿಯಲ್ಲಿ ಮಸಾಲೆ ಪದಾರ್ಥಗಳು ಸಿಗಲಿವೆ ಅನ್ನುವುದನ್ನು ಕಂಪನಿ ಪ್ರತಿನಿಧಿಗಳು ಹೇಳಿಕೊಂಡಿದ್ದಾರೆ.
Aruna Masalaa is one of the top spice manufacturers in South India, with state-of-the-art food-grade spice manufacturing facilities, fully automated plants, and an in-house ultramodern laboratory. Our commitment to innovation throughout the years has ensured that we become the family favourite that we are today. We are very proud of our high-quality standards & always ensure that we deliver on our brand’s promise to consumers.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm